Asianet Suvarna News Asianet Suvarna News

ಕಸ್ತೂರಿ ರಂಗನ್ ವರದಿ 2013 ರದ್ದು, ಈಗ ಪರಿಸ್ಥಿತಿ ಬದಲಾಗಿದೆ: ಸಚಿವ ಈಶ್ವರ ಖಂಡ್ರೆ

ಕಸ್ತೂರಿ ರಂಗನ್ ವರದಿ ಬಂದು ಹತ್ತು ವರ್ಷಗಳಾಗಿದೆ. ಈ ವರದಿ 2013ರಲ್ಲಿ ಬಂದಿದ್ದು, ಈಗ ನಾವು 2023ರಲ್ಲಿದ್ದೇವೆ. ಆಯಾ ಭಾಗದ ಜನ, ಅವರ ಸಮಸ್ಯೆ, ಅನಿಸಿಕೆ ಎಲ್ಲವನ್ನೂ ಕೇಳಬೇಕು. 
 

Minister Eshwar Khandre Talks Over Kasturi Rangan Report gvd
Author
First Published Sep 7, 2023, 2:32 PM IST

ಹಾಸನ (ಸೆ.07): ಕಸ್ತೂರಿ ರಂಗನ್ ವರದಿ ಬಂದು ಹತ್ತು ವರ್ಷಗಳಾಗಿದೆ. ಈ ವರದಿ 2013ರಲ್ಲಿ ಬಂದಿದ್ದು, ಈಗ ನಾವು 2023ರಲ್ಲಿದ್ದೇವೆ. ಆಯಾ ಭಾಗದ ಜನ, ಅವರ ಸಮಸ್ಯೆ, ಅನಿಸಿಕೆ ಎಲ್ಲವನ್ನೂ ಕೇಳಬೇಕು. ಅವತ್ತಿನ ಕಾಲದಲ್ಲಿ ಅವರು ವರದಿ ಕೊಟ್ಟ ಸಂದರ್ಭದಲ್ಲಿ ಭೌಗೋಳಿಕವಾಗಿ ಆ ಭಾಗದಲ್ಲಿ ಏನೇನು ಇತ್ತು, ಇವತ್ತು ಏನೇನು ಪರಿವರ್ತನೆ ಆಗಿದೆ ಎನ್ನುವುದು ಯಾರಿಗೆ ಗೊತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಆನೆ ದಾಳಿಯಿಂದ ಮೃತರಾದ ಆನೆ ವೆಂಕಟೇಶ್ ಅವರ ಕುಟುಂಬವನ್ನು ಅವರ ಗ್ರಾಮದ ಆಲೂರು ತಾಲೂಕಿನ ಹೊನ್ನವಳ್ಳಿಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಕಸ್ತೂರಿ ರಂಗನ್ ವರದಿ ಕುರಿತು ಮಾತನಾಡಿದರು.

ವರದಿ ಕುರಿತು ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಬೇಕು. ಅದು ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಕೇಂದ್ರ ಸರ್ಕಾರ ಸಂಜಯ್‌ ಕುಮಾರ್ ನೇತೃತ್ವದಲ್ಲಿ ಸಮಿತಿ ಮಾಡಿದೆ. ಅವರು ನನ್ನನ್ನು ಭೇಟಿ ಮಾಡಿದ್ದರು. ನೀವು ಎಲ್ಲಾ ಜಿಲ್ಲೆಗಳಿಗೂ ಭೇಟಿ ಕೊಡಿ, ಶ್ರೀಸಾಮಾನ್ಯರ ಸಲಹೆ ತೆಗೆದುಕೊಳ್ಳಿ. ಪರಿಸರವಾದಿಗಳ ಸಲಹೆ ತೆಗೆದುಕೊಳ್ಳಿ, ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಅವೆಲ್ಲವನ್ನೂ ಮಾಡಿ ನಮಗೆ ವರದಿ ಕೊಡಿ ಎಂದು ಹೇಳಿದ್ದೇನೆ. ಅವರು ವರದಿ ಕೊಟ್ಟಮೇಲೆ ನಾನು ಮತ್ತೆ ಸಚಿವ ಸಂಪುಟದ ಉಪಸಮಿತಿಯಲ್ಲಿ ಚರ್ಚೆ ಮಾಡಿ, ಸಚಿವ ಸಂಪುಟ, ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ. ಸಾಧಕ ಬಾಧಕಗಳನ್ನು ನೋಡಿಕೊಂಡು ಅಂತಿಮವಾಗಿ ಜಾರಿ ಮಾಡುವ ತೀರ್ಮಾನ ಮಾಡಲಾಗುವುದು ಎಂದರು.

ಕಾಂಗ್ರೆಸ್ ಕಾಲ್ಗುಣದಿಂದಲೇ ರಾಜ್ಯಕ್ಕೆ ಬರಗಾಲ: ಸಿ.ಟಿ.ರವಿ ಆಕ್ರೋಶ

ಸಕಲೇಶಪುರದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಗೆ ನ್ಯಾಯ ಕೋರಿ ಶವವಿಟ್ಟು ಪ್ರತಿಭಟನೆ ಮಾಡಿದ ಹೋರಾಟಗಾರರ ಮೇಲೆ ಕೇಸ್ ದಾಖಲು ಮಾಡಿದ ವಿಚಾರ ಕುರಿತು ಈಗಾಗಲೇ ನನ್ನ ಗಮನಕ್ಕೆ ತಂದಿದ್ದಾರೆ. ನಾನು ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಂತಹ ಕೇಸ್‌ಗಳನ್ನು ಹಿಂಪಡೆಯಬೇಕೆಂದು ಶಿಫಾರಸು ಮಾಡಿದ್ದೇನೆ. ನಿಜವಾಗಿಯೂ ಹೋರಾಟ ಮಾಡಲು ಬಂದವರ ಮೇಲೆ ಪ್ರಕರಣಗಳು ದಾಖಲಾಗಿದ್ದರೆ ಅಂತಹ ಪ್ರಕರಣಗಳನ್ನು ಹಿಂಪಡೆಯಬೇಕು ಅಂತ ಹೇಳಿ ನಾನು ಶಿಫಾರಸು ಮಾಡ್ತೇನೆ ಎಂದರು.

ಆನೆ-ಮಾನವ ಸಂಘರ್ಷ ಈಗಿನದಲ್ಲ: ಕಾಡುಪ್ರಾಣಿಗಳ ಹಾಗೂ ಮಾನವನ ನಡುವಿನ ಸಂಘರ್ಷ ಪುರಾಣ ಕಾಲದಿಂದಲೂ ಇದೆ. ಸುಮಾರು ವರ್ಷದಿಂದಲೂ ಇದೆ. ಏಕೆ ಆನೆಗಳು ಕಾಡು ಬಿಟ್ಟು ಬರುತ್ತಿವೆ. ಏಕೆ ಇಂತಹ ದುರ್ಘಟನೆಗಳು ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗ್ತಿದೆ. ಇದೆಲ್ಲದರ ಬಗ್ಗೆ ಚಿಂತನೆಯನ್ನು ಮಾಡ್ತಾ ಇದ್ದೇವೆ. ಒಂದೇ ಸಾರಿ ಬಗೆಹರಿಸುತ್ತೇನೆ ಎಂದು ಹೇಳಲಾಗುವುದಿಲ್ಲ. ಅರಣ್ಯದಲ್ಲಿ ಗಣಿಗಾರಿಕೆ, ಕ್ರಷರ್ ನಡೆಯುತ್ತಿದೆಯಾ..ಆ ಶಬ್ದದಿಂದ ಕಾಡಾನೆಗಳು ಅರಣ್ಯದಿಂದ ಹೊರಗೆ ಬರುತ್ತಿವೆಯಾ, ಆಹಾರಗಳ ಕೊರತೆ ಇದೆಯಾ, ಅರಣ್ಯ ಪ್ರದೇಶವನ್ನು ಬಿಟ್ಟು ಆನೆಗಳೇಕೆ ಕಾಫಿ ಎಸ್ಟೇಟ್‌‌ನಲ್ಲಿವೆ ಎನ್ನುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವೆ.

ಕಾವೇರಿ ನೀರು ವಿಚಾರದಲ್ಲಿ ಡಿಕೆಶಿಗೆ ಕರ್ನಾಟಕ ಜನರ ಕಷ್ಟ ಗೊತ್ತಿಲ್ಲ: ಸಿ.ಪಿ.ಯೋಗೇಶ್ವರ್

ಅರಣ್ಯ, ಕಾಫಿ ಎಸ್ಟೇಟ್‌ಗೆ ಯಾವುದೇ ರೀತಿಯ ಭೇದವಿಲ್ಲ, ಇವತ್ತು ಅರಣ್ಯ ಇಲ್ಲ. ನಾವು ತಜ್ಞರೊಂದಿಗೆ ಚರ್ಚೆ ಮಾಡಿ ಹಂತಹಂತವಾಗಿ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಎಲಿಫೆಂಟ್ ಟಾಸ್ಕ್‌ಫೋರ್ಸ್, ಆರ್‌ಆರ್‌ಟಿ ಇದೆ, ಅವರು ಮಾಹಿತಿ ಕೊಡುತ್ತಿದ್ದಾರೆ. ಜನತೆಗೆ ಅವರಿಗೆ ಸಹಕಾರ ಕೊಡಬೇಕು. ಕಾಡಾನೆ ಓಡಾಡುತ್ತಿದೆ ಎಂದರೆ ಜನರು ಬಿಂದಾಸ್ ಆಗಿ ಓಡಾಡುತ್ತಾರೆ. ದಿನ ಬೆಳಿಗ್ಗೆ ಇಂತಹ ಪ್ರಕರಣಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios