ಮಂಗಳೂರು (ಮಾ.29):    ವಿವಿಯ ಪ್ರಾಧ್ಯಾಪಕರೊಬ್ಬರಿಂದ 17.5ಲಕ್ಷ ಪಡೆದು ವಂಚಿಸಿದ್ದ ವ್ಯಕ್ತಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ರಾಯಚೂರು ವಿವಿಯ ಕುಲಪತಿ ಹುದ್ದೆ ಕೊಡಿಸುವುದಾಗಿ ವಂಚಿಸಿದ್ದ ರಾಮ ಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಎಂಬಾತನನ್ನು ಮಂಗಳೂರಿನ ಕಂಕನಾಡಿ‌ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಕುಲಪತಿ ಹುದ್ದೆ ಕೊಡಿಸುವುದಾಗಿ 30 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದು, ಗಣ್ಯ ವ್ಯಕ್ತಿಗಳ ಜೊತೆಗಿನ ಫೋಟೋ ತೋರಿಸಿ ವಂಚಿಸಿದ್ದ. ಹಣ ವಾಪಾಸ್ ಕೇಳಿದಾಗ ಬೈದು ಕೊಲೆ ಬೆದರಿಕೆ ಒಡ್ಡಿದ್ದ. 

ವಂಚಿತನಿಗೆ ವಂಚಕನ ಪಟ್ಟ ಕಟ್ಟುವ ಸೈಬರ್‌ ಕಳ್ಳರು..! .

ವಿವೇಕ್ ಆಚಾರ್ಯ ಎಂಬವರ ದೂರಿನ ಆಧಾರದಲ್ಲಿ ಇದೀಗ ವಂಚಕ ಪ್ರಸಾದ್ ಬಂಧನವಾಗಿದೆ. ಈ ಹಿಂದೆ ಶ್ರೀರಾಮ ಸೇನೆ ರಾಜ್ಯ ಸಂಚಾಲಕನಾಗಿದ್ದ ಪ್ರಸಾದ್ ಬಳಿಕ ಅಲ್ಲಿಂದ ಹೊರಬಂದು ತನ್ನದೇ ಆದ ರಾಮ ಸೇನಾ ಸಂಘಟನೆ ಕಟ್ಟಿದ್ದ. ಮಂಗಳೂರು ಉತ್ತರ, ಪೂರ್ವ ಠಾಣೆಗಳಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

ಸದ್ಯ ಕಂಕನಾಡಿ ಠಾಣೆಯಲ್ಲಿ ಪ್ರಸಾದ್ ವಿರುದ್ದ ರೌಡಿಶೀಟ್ ಓಪನ್ ಮಾಡಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.