ಸೂಕ್ತ ಬೆಲೆ ಇಲ್ಲ-ಮಾರಾಟವೂ ಆಗುತ್ತಿಲ್ಲ : 3.5 ಎಕರೆ ಬಾಳೆ ಬೆಳೆ ನಾಶ
- ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಹಿನ್ನೆಲೆ
- ಕಟಾವಿಗೆ ಬಂದಿದ್ದ ಬಾಳೆ ಗಿಡಗಳನ್ನು ಟ್ರಾಕ್ಟರ್ ಮೂಲಕ ನಾಶ
- ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿ ಘಟನೆ
ಚನ್ನಪಟ್ಟಣ (ಜೂ.13): ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಹಿನ್ನೆಲೆ ಕಟಾವಿಗೆ ಬಂದಿದ್ದ ಬಾಳೆ ಗಿಡಗಳನ್ನ ಟ್ರಾಕ್ಟರ್ ಮೂಲಕ ರೈತರೊರ್ವರು ಸಂಪೂರ್ಣವಾಗಿ ನಾಶಮಾಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಇಲ್ಲಿನ ನಿವಾಸಿ ರೈತ ನಾಗರಾಜು ಹಾಗೂ ಅವರ ಮಗ ಸಿದ್ದೇಶ್ ಟ್ರಾಕ್ಟರ್ ಮೂಲಕ ಬಾಳೆಗಿಡಗಳನ್ನ ಸಂಪೂರ್ಣವಾಗಿ ನಾಶಮಾಡಿದ್ದಾರೆ.
ವಿಜಯಪುರ: ಸೂಕ್ತ ಬೆಲೆ ಸಿಗದಿದ್ದಕ್ಕೆ 1,200 ಬಾಳೆಗಿಡ ಸುಟ್ಟ ರೈತ .
ಸುಮಾರು 3.50 ಎಕರೆ ಜಾಗದಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನ ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಬಾಳೆ ಬೆಳೆಗೆ 4 ಲಕ್ಷ ಹಣ ಖರ್ಚು ಮಾಡಿ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಮನನೊಂದು ಬೆಳೆ ನಾಶ ಮಾಡಿದ್ದಾರೆ.
ಟೊಮೋಟೋಗೂ ಇಲ್ಲ ಮಾರುಕಟ್ಟೆ : ಅದೇ ರೀತಿ ಇಲ್ಲಿನ ಗರಕ್ಕಹಳ್ಳಿ ಗ್ರಾಮದಲ್ಲಿಯೂ ರೈತರೊರ್ವರು ತಮ್ಮ 3 ಎಕರೆ ಹೊಲದಲ್ಲಿ ಬೆಳೆದ ಟೊಮ್ಯಾಟೊ ಬೆಳೆಯನ್ನ ಕೀಳದೆ ಗಿಡದಲ್ಲೆ ಬಿಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಬೆಲೆ ಸಿಗದ ಹಿನ್ನೆಲೆಯಲ್ಲಿ ಟೊಮೋಟೊ ಕಟಾವು ಮಾಡಿಲ್ಲ.
ಲಾಕ್‌ಡೌನ್‌ನಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಈಡಾಗಿದ್ದಾರೆ. ಒಂದೆಡೆ ಬೆಲೆ ಇಲ್ಲದಿದ್ದರೆ, ಇನ್ನೊಂದೆಡೆ ಸೂಕ್ರ ಮಾರುಕಟ್ಟೆಯೂ ಸಿಗದೆ ರೈತ ಸಮುದಾಯ ಕಂಗಾಲಾಗಿದೆ.