ಪುರುಷರ ಮನಸ್ಥಿತಿ ಬದಲಾಗಲಿ: ಡಾ. ವಿದ್ಯಾಕುಮಾರಿ

ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರು ಸಮಾನರೆಂದು ಒಪ್ಪಿಕೊಳ್ಳಬೇಕಾದರೆ ಪುರುಷರ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕು. ಸಮಾನತೆಯನ್ನು ಬಾಯಿ ಮಾತಿನಲ್ಲಿ ಹೇಳದೆ ಎಲ್ಲಾ ಕಡೆಯೂ ಪಾಲಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

Change the mindset of men  Dr  Vidyakumari snr

 ತುಮಕೂರು : ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರು ಸಮಾನರೆಂದು ಒಪ್ಪಿಕೊಳ್ಳಬೇಕಾದರೆ ಪುರುಷರ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕು. ಸಮಾನತೆಯನ್ನು ಬಾಯಿ ಮಾತಿನಲ್ಲಿ ಹೇಳದೆ ಎಲ್ಲಾ ಕಡೆಯೂ ಪಾಲಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಮಾತನಾಡಿ, ಮಹಿಳೆಗೆ ಯಾವ ಮನೆಯಲ್ಲಿ ಹೆಚ್ಚು ಗೌರವ ಕೊಟ್ಟು ನೋಡಿಕೊಳ್ಳುತ್ತಾರೋ ಆ ಮನೆಯ ಮಕ್ಕಳು ಹಾಗೂ ಕುಟುಂಬದ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮಕ್ಕಳಿಗೆ ಮನೆಯೆ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರುವಾಗಿರುತ್ತಾಳೆ. ಮಕ್ಕಳು ತಮ್ಮ ಬಾಲ್ಯ ಜೀವನದಲ್ಲಿ ತಾಯಿಯನ್ನು ನೋಡಿ ಕಲಿಯುತ್ತಾರೆ. ತಾಯಿ ಹೇಗೆ ಕಲಿಸುತ್ತಾಳೆ ಹಾಗೇ ಮಕ್ಕಳು ಕಲಿತು ಬಿಡುತ್ತಾರೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರವನ್ನು ನೀಡಿ ಬೆಳೆಸುವ ಜವಾಬ್ದಾರಿ ತಾಯಿಯದ್ದು ಎಂದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಸದ ಜಿ.ಎಸ್‌. ಬಸವರಾಜು, ಹೆಣ್ಣು ಒಂದು ಮನೆತನದ ಗೌರವದ ಜೊತೆಗೆ ನಮ್ಮ ಧರ್ಮದಲ್ಲಿರುವ ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸುತ್ತಾಳೆ. ಹೆಣ್ಣು ಮತ್ತು ಗಂಡು ಎಂಬ ಬೇಧವಿಲ್ಲದೆ ಇಬ್ಬರಿಗೂ ಸಮಾನವಾದ ಗೌರವ ಮತ್ತು ಅವಕಾಶಗಳನ್ನು ರಾಜ್ಯಾಂಗ ನೀಡಿದೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಗ್ರಾಮೀಣ ಭಾಗದಲ್ಲಿ ಇನ್ನೂ ಶೇ.4 ರಷ್ಟಿದೆ. ನಗರಗಳಲ್ಲಿ ಶೇ.60 ರಷ್ಟಿದೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗಬೇಕು. ಹೆಣ್ಣು ಮಕ್ಕಳಿಗಾಗಿ ಸರ್ಕಾರ ಎಲ್ಲಾ ರೀತಿಯ ಅವಕಾಶಗಳನ್ನು ಕೊಟ್ಟಿದೆ. ಕುಟುಂಬದಲ್ಲಿ ಹೆಣ್ಣು ಹೇಗೆ ನಡೆದುಕೊಳ್ಳುತ್ತಾಳೋ ಹಾಗೇ ಮಕ್ಕಳು ಪಾಲಿಸುತ್ತಾರೆ. ತಾಯಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಿಕೊಡಬೇಕು. ಇಡೀ ಜಗತ್ತಿನಲ್ಲಿ ಮಕ್ಕಳನ್ನು ತಿದ್ದಿ, ಬುದ್ದಿ ಹೇಳುವ ಅಧಿಕಾರವಿರುವುದು ತಾಯಿಗೆ ಮಾತ್ರ. ಆದುದರಿಂದ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸುವುದರ ಜೊತೆಗೆ ಸುಸಂಸ್ಕೃತವಂತರನ್ನಾಗಿ ಮಾಡಬೇಕು. ಹೆಣ್ಣು ಈ ದೇಶದ ಕಣ್ಣು ಆದ್ದರಿಂದ ಮುಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಪ್ರತಿ ಹಳ್ಳಿಗಳಲ್ಲಿಯೂ, ಪ್ರತಿ ವಾರ್ಡ್‌ಗಳಲ್ಲಿಯೂ ಆಚರಿಸುವಂತೆ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ. ಗೀತಾ, ಹಿರಿಯ ಸಿವಿಲ್‌ ನ್ಯಾಯಾಧೀಶೆ ನೂರುನ್ನೀಸ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲೆ ಹಾಗೂ ಮಕ್ಕಳ ತಜ್ಞ ಡಾ. ಎಂ. ರಜನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್‌. ಶ್ರೀಧರ, ಜಿಲ್ಲಾ ನಿರೂಪಣಾ ಅಧಿಕಾರಿ ಓಂಕಾರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪವಿತ್ರ, ದೇವೆಂದ್ರಪ್ಪ, ಸುಮಲತಾ ಇದ್ದರು.

ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸಮಾನವಾದ ಅವಕಾಶವನ್ನು ನೀಡಲಾಗಿದೆ. ಇತ್ತೀಚೆಗೆ ನಡೆದ ಒಲಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಪದಕಗಳನ್ನು ಪಡೆದುಕೊಂಡಿದ್ದಾರೆ. ಹೆಣ್ಣನ್ನು ಹಿಂದಿನ ಕಾಲದಿಂದಲೂ ಪೂಜಿಸುತ್ತಾ ಬಂದಿದ್ದೇವೆ. ಅದರಂತೆ ವೇದ, ಉಪನಿಷತ್‌ಗಳಲ್ಲಿ ಮೊದಲಿಗೆ ಮಾತೃದೇವೋಭವ ಎಂದೇ ಪ್ರಾರಂಭವಾಗುತ್ತದೆ. ಅದನ್ನು ಎಲ್ಲರೂ ಅಕ್ಷರಶಃ ಪಾಲಿಸಬೇಕು.

ಪಾಟೀಲ ಡೀಸಿ

ಮಹಿಳೆಗೆ ಘನತೆ, ಗೌರವ ನೀಡಿ: ಸಿಇಒ

ಮಹಿಳೆಯ ಬದುಕು ಅಷ್ಟೊಂದು ಸುಲಭವಲ್ಲ. ಎಲ್ಲಾ ಹಂತಗಳಲ್ಲಿಯೂ ಕಷ್ಟಗಳನ್ನು ಎದುರಿಸುತ್ತಾ ಬಂದಿದ್ದಾಳೆ. ಆದ್ದರಿಂದ ಅವಳಿಗೆ ಸಮಾಜದಲ್ಲಿ ಒಂದು ಘನತೆ, ಗೌರವ ಕೊಡಬೇಕು. ಹೆಣ್ಣಿನ ಮೇಲೆ ಆಗುವ ದೈಹಿಕ ದೌರ್ಜನ್ಯ ಹಾಗೂ ಮಾನಸಿಕ ದೌರ್ಜನ್ಯವನ್ನು ಎದುರಿಸುತ್ತಾಳೆ. ಇದರ ವಿರುದ್ಧ ಪ್ರತಿಭಟಿಸುವವರ, ದನಿ ಎತ್ತುವವರ ಸಂಖ್ಯೆ ಕಡಿಮೆ. ಹೆಚ್ಚಿನ ಮಹಿಳೆಯರು ಕುಟುಂಬದ ಗೌರವವನ್ನು ಉಳಿಸುವುದಕ್ಕಾಗಿ ಹಾಗೂ ಮಕ್ಕಳ ಒಳಿತಿಗಾಗಿ ತಮ್ಮ ಕಷ್ಟಗಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೇ ಸ್ವತಃ ನೋವನ್ನು ಅನುಭವಿಸಿ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ ಎಂದು ಸಿಇಒ ವಿಷಾದಿಸಿದರು. ಒಂದು ಹೆಣ್ಣು ಕಲಿತರೆ, ಕುಟುಂಬವೊಂದು ಕಲಿತಂತೆ ಎಂಬ ಗಾದೆಯಂತೆ, ಹೆಣ್ಣುಮಕ್ಕಳು ಶಿಕ್ಷಣವಂತರಾಗಿ ತನ್ನ ಸ್ವತಂತ್ರವಾದ ಜೀವನವನ್ನು ರೂಪಿಸಿಕೊಳ್ಳುವಂತೆ ಆಗಬೇಕು ಎಂದು ಹೇಳಿದರು.

Latest Videos
Follow Us:
Download App:
  • android
  • ios