ಬೆಂಗ್ಳೂರು ಪ್ರಯಾಣಿಕರ ಗಮನಕ್ಕೆ: ನಾಳೆ ಮೆಟ್ರೋ ರೈಲಿನ ಸಮಯದಲ್ಲಿ ಬದಲಾವಣೆ
ಬೆಳಗ್ಗೆ 5.30 ರಿಂದ 7.00 ಗಂಟೆಯವರಗೆ ಪ್ರತಿ 30 ನಿಮಿಷಕ್ಕೊಮ್ಮೆ ಒಂದು ರೈಲು ಸಂಚಾರ ನಡೆಸಲಿದೆ. ಬೆಳಗ್ಗೆ 7 ಗಂಟೆಯ ನಂತರ ಎಂದಿನಂತೆ ರೈಲು ಸಂಚಾರ ಸೇವೆ ಇರಲಿದೆ. ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ರೈಲು ಸೇವೆಯನ್ನ ಉಪಯೋಗಿಸುವಂತೆ ಮನವಿ ಮಾಡಿಕೊಂಡ ನಮ್ಮ ಮೆಟ್ರೋ
ಬೆಂಗಳೂರು(ಡಿ.07): ನಾಳೆ(ಭಾನುವಾರ) ಪಿಡಿಒ ಅಧಿಕಾರಿ ಪರೀಕ್ಷೆ ನಡೆಯುವ ಹಿನ್ನೆಲೆಯಲ್ಲಿ ಮೆಟ್ರೋ ಸೇವೆಯ ಸಮಯದಲ್ಲಿ ಬದಲಾವಣೆಯಾಗಲಿದೆ. ಹೌದು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಅವಧಿಗಿಂತ ಮುಂಚೆಯೇ ಮೆಟ್ರೋ ಸೇವೆ ಆರಂಭವಾಗಿದೆ.
ಬೆಳಗ್ಗೆ 7 ಗಂಟೆ ಬದಲು ಬೆಳಗ್ಗೆ 5:30 ಕ್ಕೆ ಮೆಟ್ರೋ ಸೇವೆಯನ್ನ ಬಿಎಂಆರ್‌ಸಿಎಲ್ ಆರಂಭಿಸಲಿದೆ. ಮಾದಾವರ, ರೇಷ್ಮೆ, ಸಂಸ್ಥೆ, ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳಿಂದ ಬೆಳಗ್ಗೆ 5.30 ಕ್ಕೆ ಮೊದಲ ರೈಲು ಸಂಚಾರ ಆರಂಭವಾಗಲಿದೆ.
ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಡಿಜಿಟಲ್ ಲಗೇಜ್ ಲಾಕರ್ ಪರಿಚಯಿಸಿದ ಬಿಎಂಆರ್‌ಸಿಎಲ್!
ಜೊತೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಎಲ್ಲ 4 ದಿಕ್ಕಿಗೆ ಮೊದಲ ರೈಲು ಸಂಚಾರ ನಡೆಸಲಿದೆ. ಬೆಳಿಗ್ಗೆ 5:30ಕ್ಕೆ ಮೊದಲು ರೈಲು ಹೊರಡಲಿದೆ. ಬೆಳಗ್ಗೆ 5.30 ರಿಂದ 7.00 ಗಂಟೆಯವರಗೆ ಪ್ರತಿ 30 ನಿಮಿಷಕ್ಕೊಮ್ಮೆ ಒಂದು ರೈಲು ಸಂಚಾರ ನಡೆಸಲಿದೆ. ಬೆಳಗ್ಗೆ 7 ಗಂಟೆಯ ನಂತರ ಎಂದಿನಂತೆ ರೈಲು ಸಂಚಾರ ಸೇವೆ ಇರಲಿದೆ. ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ರೈಲು ಸೇವೆಯನ್ನ ಉಪಯೋಗಿಸುವಂತೆ ನಮ್ಮ ಮೆಟ್ರೋ ಮನವಿ ಮಾಡಿಕೊಂಡಿದೆ.
ಸರ್ಜಾಪುರ-ಹೆಬ್ಬಾಳ ಮೆಟ್ರೋ ಕಾಮಗಾರಿಗೆ ಸಚಿವ ಸಂಪುಟ ಅಸ್ತು
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ ಉದ್ದೇಶಿಸಿರುವ 36.59 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿಯ ಯೋಜನಾ ಪೂರ್ವ ಸಿದ್ಧತೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ. ಅಲ್ಲದೆ, ಕೇಂದ್ರ ಸರ್ಕಾರದ ಅನುಮೋದನೆ ಪಡೆದ ಬಳಿಕ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಂಪುಟ ಸಲಹೆ ನೀಡಿದೆ.
₹28,405 ಕೋಟಿ ಅಂದಾಜು ವೆಚ್ಚದಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಿಸಲು ಉದ್ದೇಶಿಸಿದ್ದು, 17 ಮೆಟ್ರೋ ನಿಲ್ದಾಣ ಒಳಗೊಂಡ 22.14 ಕಿ.ಮೀ. ಎಲಿವೇ ಟೆಡ್ ಮಾರ್ಗ ಹಾಗೂ 11 ನಿಲ್ದಾಣ ಒಳಗೊಂಡ 14.45 ಕಿ.ಜೀ. ಸುರಂಗ ಮಾರ್ಗದ ಕಾಮಾರಿ ನಡೆಸಬೇಕಿದೆ. ಈ ಬಗ್ಗೆ ಭಾರತ ಸರ್ಕಾರದ ಮೂಲಕ ಸಾವರಿನ್ ಲೋನ್ ಅಥವಾ ಪಾಸ್-ರ್ಥ - ಅಸಿಸ್ಟೆನ್ಸ್ (ಪಿಟಿಎ) ರೀತಿ ಯಲ್ಲಿ ಸಾಲ ಮಾಡಬೇಕಿದೆ. ಈ ಬಗ್ಗೆ ಕೇಂದ್ರದ ಅನುಮೋದನೆ ನಿರೀಕ್ಷಿಸಿ ಪೂರ್ವ ಯೋಜನಾ ಚಟುವಟಿಕೆ ನಡೆಸಬಹುದು. ಕೇಂದ್ರದ ಅನುಮೋದನೆ ಬಳಿಕ ಸಿವಿಲ್ ಕಾಮ ಗಾರಿ ಕೈಗೊಳ್ಳಬಹುದು ಎಂದು ನಿರ್ಣಯ ತೆಗೆದುಕೊಂಡಿದೆ.
ಗುಲಾಬಿ ಮೆಟ್ರೋ ಮಾರ್ಗ ಸುರಂಗ ಪೂರ್ಣ: 21 ಕಿ.ಮೀ. ಸುರಂಗ ಸಿದ್ಧಪಡಿಸಿ ಹೊರಬಂದ ಭದ್ರಾ ಟಿಎಂಟಿ
ರಸ್ತೆ ಅಭಿವೃದ್ಧಿಗೆ ಘಟನೋತ್ತರ ಅನುಮತಿ:
ಬಿಬಿಎಂಪಿ ವ್ಯಾಪ್ತಿಯ 1611 ಕಿ.ಮೀ. ಉದ್ದ ಮುಖ್ಯ 2 ಮತ್ತು ಉಪಮುಖ್ಯ ರಸ್ತೆ ಗಳ ಪೈಕಿ ಕೆಲವು ರಸ್ತೆಗಳು ಹಾಳಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿತ್ತು. ಹೀಗಾಗಿ 389.68 ಕಿ.ಮೀ. ರಸ್ತೆ ಯನ್ನು ₹694 ಕೋಟಿ ವೆಚ್ಚದಲ್ಲಿ ತುರ್ತಾಗಿ ಅಭಿವೃದ್ಧಿಪ ಡಿಸಿದ್ದು, ಇದಕ್ಕೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮತಿ ಪಡೆಯಲಾಗಿದೆ.
ಇನ್ನು ಬೆಂಗಳೂರು ನಗರ ಜಿಲ್ಲೆಯ ಬಿದರಹಳ್ಳಿ ಹೋಬಳಿಯ ಹುಸ್ಕೂರು ಗ್ರಾಮದ 2.06 ಎಕರೆ ವಿಸ್ತೀರ್ಣದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಪಿಪಿಪಿ ಮಾದರಿಯಲ್ಲಿ ಬಹುಮಹಡಿ ವಸತಿ ಸಮುಚ್ಚಯ ಯೋಜನೆ ಕೈಗೊಳ್ಳಲು ಸಂಪುಟ ಅಂಗೀಕಾರ ನೀಡಿದೆ. ಇದಕ್ಕೆ ₹64.78 ಕೋಟಿ ವೆಚ್ಚ ಅಂದಾಜಿಸಲಾಗಿದೆ.