ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಡಿಜಿಟಲ್ ಲಗೇಜ್ ಲಾಕರ್ ಪರಿಚಯಿಸಿದ ಬಿಎಂಆರ್‌ಸಿಎಲ್!

ಬೆಂಗಳೂರು ಮೆಟ್ರೋ ರೈಲು ನಿಗಮ ಮಂಡಳಿ (ಬಿಎಂಆರ್‌ಸಿಎಲ್) ಮೆಜೆಸ್ಟಿಕ್ ಸೇರಿದಂತೆ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಪೇಯ್ಡ್ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್‌ಗಳನ್ನು ಆರಂಭಿಸಿದೆ. ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ಸುರಕ್ಷಿತವಾಗಿ ಇರಿಸಿ, 6 ಗಂಟೆಗಳಿಗೆ ₹70 ರಿಂದ ₹100 ರವರೆಗೆ ಪಾವತಿಸಬಹುದು.

BMRCL introduced digital luggage locker for Namma Metro Bengaluru passengers sat

ಬೆಂಗಳೂರು (ನ.13): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತ ಸಂಚಾರ ಸೇವೆಯನ್ನು ಒದಗಿಸುತ್ತಿರುವ ಬೆಂಗಳೂರು ಮಟ್ರೋ ರೈಲು ನಿಗಮ ಮಂಡಳಿ (ಬಿಎಂಆರ್‌ಸಿಎಲ್) ಇದೀಗ ಮೆಜೆಸ್ಟಿಕ್ ಸೇರಿದಂತೆ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಪೇಯ್ಡ್ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಅನ್ನು ಆರಂಭಿಸಿದೆ. ಈ ಮೂಲಕ ಮೆಟ್ರೋ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ತಮ್ಮ ಲಗೇಜ್ ಅನ್ನು ಇಟ್ಟು ಬೇರೆಡೆ ಹೋಗಬೇಕಿದ್ದ ಸ್ಥಳಕ್ಕೆ ತೆರಳಿ ವಾಪಸ್ ಬರಬಹುದು.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡುತ್ತಿದೆ. SafeCloakನ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯವು ಈಗ ಮೆಜೆಸ್ಟಿಕ್ ಮತ್ತು ಇತರ ಆಯ್ದ ನಿಲ್ದಾಣಗಳಲ್ಲಿ ಲಭ್ಯವಿದೆ. ನಿಮ್ಮ ಬ್ಯಾಗ್‌ಗಳನ್ನು 6 ಗಂಟೆಗಳಿಗೆ (ಮಧ್ಯಮ ಗಾತ್ರ) ಕೇವಲ ₹70 ಮತ್ತು ದೊಡ್ಡ ಗಾತ್ರದ ಲಗೇಜ್ ಗೆ  ₹100 ನಿಗದಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ಸುರಕ್ಷಿತವಾಗಿ ಈ ಡಿಜಿಟಲ್ ಲಾಕರ್‌ನಲ್ಲಿ ಇಟ್ಟು ಸುತ್ತಾಡಿಕೊಂಡು ಬರಬಹುದು. ಈ ಲಾಕರ್‌ ಇದೀಗ ಪ್ರತಿ 6 ಗಂಟೆಗೆ ಮಧ್ಯಮ ಗಾತ್ರಕ್ಕೆ ಮತ್ತು ದೊಡ್ಡ ಗಾತ್ರಕ್ಕೆ ವಿಭಿನ್ನ ದರವನ್ನು ನಿಗದಿ ಮಾಡಲಾಗಿದೆ. ಒಂದು ಲಗೇಜ್‌ಗೆ ಪ್ರತಿ ಗಂಟೆಗೆ 12 ರೂ.ನಿಂದ 15 ರೂ. ಪಾವತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಡಬಲ್‌ ಡೆಕ್ಕರ್‌ ರೈಲುಗಳು: ಟೆಂಡರ್‌ ಆಹ್ವಾನ

ಈಗಾಗಲೇ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಎಲ್ಲ ಲಗೇಜ್ ಬ್ಯಾಗ್‌ಗಳನ್ನು ತುಂಬಾ ಕಠಿಣವಾಗಿ ಚೆಕಿಂಗ್ ಮಾಡಿಯೇ ಒಳಗೆ ಬಿಡಲಾಗುತ್ತದೆ. ಎರಡು ಹಂತದಲ್ಲಿ ತಪಾಸಣೆ ಮಾಡಲಾಗುತ್ತದೆ. ಒಂದು ಹಂತದಲ್ಲಿ ಮೆಟಲ್ ಡಿಟೆಕ್ಟರ್ ಹಾಗೂ ಸ್ಕ್ಯಾನರ್ ಮೂಲಕ ಬ್ಯಾಗ್ ಚೆಕಿಂಗ್ ಮಾಡಲಾಗುತ್ತದೆ. ಒಂದು ವೇಳೆ ಹರಿತವಾದ ಆಯುಧಗಳು, ಸ್ಫೋಟಕಗಳು ಹಾಗೂ ಬೆಂಕಿ ಹತ್ತಿಕೊಳ್ಳುವ ಎಣ್ಣೆಗಳು ಇದ್ದರೆ, ಅಂತಹ ಲಗೇಜುಗಳನ್ನು ಒಳಗೆ ಬಿಡುವುದಿಲ್ಲ. ಇನ್ನು ನಿಮ್ಮ ಒಂದು ಬ್ಯಾಗ್‌ನ ತೂಕ 15 ಕೆಜಿಗಿಂತ ಹೆಚ್ಚಾಗಿದ್ದಲ್ಲಿ ಅದಕ್ಕೆ ಹಣವನ್ನು ಪಾವತಿಸಬೇಕಾಗುತ್ತದೆ. ಇದೀಗ 15 ಕೆಜಿಗಿಂತ ಹೆಚ್ಚಾಗಿರವ ಭಾರವಾದ ಬ್ಯಾಗುಗಳನ್ನು ಹಾಗೂ ಮಧ್ಯಮ ಗಾತ್ರದ ಬ್ಯಾಗುಗಳನ್ನು ಮೆಟ್ರೋ ಕೌಂಟರ್‌ನಲ್ಲಿ ಇಟ್ಟು ಹೋಗಿ ನಮ್ಮ ಕೆಲಸ ಮುಗಿಸಿಕೊಂಡು ಬಂದು ವಾಪಸ್ ತೆಗೆದುಕೊಂಡು ಹೋಗಬಹುದು.

ಧರ್ಮ-ಅನುಷಾ ಪ್ರೀತಿ ದೂರ ಮಾಡಿದ ಪಶ್ಚಾತ್ತಾಪದಿಂದ ಕಣ್ಣೀರಿಟ್ಟ ಐಶ್ವರ್ಯಾ ಸಿಂಧೋಗಿ!

ಯಾರಿಗೆಲ್ಲಾ ಅನುಕೂಲ ಲಗೇಜ್ ಲಾಕರ್: 

  • ಊರಿನಿಂದ ಬಂದವರು ಮನೆಗೆ ಹೋಗಲು ಸಮಯವಿಲ್ಲದೇ ಕಚೇರಿ ಕೆಲಸಕ್ಕೆ ಹೋಗುವವರು ತಮ್ಮ ಲಗೇಜುಗಳನ್ನು ಇಲ್ಲಿ ಇಟ್ಟು ಹೋಗಿ ಬರಬಹುದು.
  • ಬೆಂಗಳೂರಿನ ಯಾವುದಾದರೂ ಒಂದೆರೆಡು ಗಂಟೆಗಳ ಕಾಲ ಕೆಲಸವಿದ್ದಲ್ಲಿ ಅಂಥವರು ಇಲ್ಲಿ ತಮ್ಮ ಲಗೇಜ್ ಇಟ್ಟು ಹೋಗಬಹುದು.
  • ಕಚೇರಿಗಳಿಂದ ನೇರವಾಗಿ ಶಾಪಿಂಗ್ ಹೋಗುವವರು ಇಲ್ಲಿ ಲಗೇ ಇಟ್ಟು ಕೆಲ ಗಂಟೆಗಳ ಕಾಲ ಶಾಪಿಂಗ್ ಮುಗಿಸಿಕೊಂಡು ವಾಪಸ್ ಬಂದು ಲಗೇಜ್ ಕೊಂಡೊಯ್ಯಬಹುದು.
  • ಸ್ನೇಹಿತರು ಹಾಗೂ ಇತರರೊಂದಿಗೆ ಸಿನಿಮಾ ಅಥವಾ ಪಾರ್ಟಿಗೆ ಹೋಗಬೇಕಾದಲ್ಲಿ ಕಚೇರಿಯ ಬ್ಯಾಗ್ ಅಥವಾ ಇನ್ಯಾವುದೇ ಲಗೇಜ್ ಇದ್ದಲ್ಲಿ ಇಲ್ಲಿ ಇಡಬಹುದು.
  • ಮಹಿಳೆಯರು, ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ತಮ್ಮ ಲಗೇಜುಗಳನ್ನು ಹೊತ್ತುಕೊಂಡು ಹೋಗಲಾಗದ ಸಂದರ್ಭದಲ್ಲಿ ತಮ್ಮ ಬ್ಯಾಗ್‌ಗಳನ್ನು ಈ ಲಾಕರ್‌ನಲ್ಲಿ ಇಟ್ಟು ಹೋಗಿ ತಮ್ಮ ಮನೆಯವರನ್ನು ಕರೆದುಕೊಂಡು ಬಂದು ಈ ಲಗೇಜ್ ತೆಗೆದುಕೊಂಡು ಹೋಗಬಹುದು.
Latest Videos
Follow Us:
Download App:
  • android
  • ios