Asianet Suvarna News Asianet Suvarna News

ಅದೃಷ್ಟವಿದ್ದರೆ ನಾನು ಮುಂದಿನ ಭಾರಿ ರಾಜ್ಯದ ಸಿಎಂ ಆಗುತ್ತೇನೆ : ಜಿ ಪರಮೇಶ್ವರ್

ಅದೃಷ್ಟವಿದ್ದರೆ ನಾನು ಮುಂದಿನ ಭಾರಿ ರಾಜ್ಯದ ಸಿಎಂ ಆಗುತ್ತೇನೆ. ಈಗಾಗಲೇ ನನಗೆ ಎರಡು ಸಲ ಸಿಎಂ ಅವಕಾಶವಿದ್ದರೂ ಸ್ವಲ್ಪದರಲ್ಲಿಯೇ ಕೈ ತಪ್ಪಿದೆ ಎಂದು ಮಾಜಿ ಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ನುಡಿದರು.

Chance to become CM who missed twice  G Parameshwar snr
Author
First Published Dec 19, 2022, 5:05 AM IST

 ಮಧುಗಿರಿ (ಡಿ.19): ಅದೃಷ್ಟವಿದ್ದರೆ ನಾನು ಮುಂದಿನ ಭಾರಿ ರಾಜ್ಯದ ಸಿಎಂ ಆಗುತ್ತೇನೆ. ಈಗಾಗಲೇ ನನಗೆ ಎರಡು ಸಲ ಸಿಎಂ ಅವಕಾಶವಿದ್ದರೂ ಸ್ವಲ್ಪದರಲ್ಲಿಯೇ ಕೈ ತಪ್ಪಿದೆ ಎಂದು ಮಾಜಿ ಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ನುಡಿದರು.

ಶನಿವಾರ ತಾಲೂಕಿನ ಪುರವರ ಹೋಬಳಿ ತಗ್ಗಿಹಳ್ಳಿ  ರಾಮಕೃಷ್ಣ ಆಶ್ರಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ 1 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಿರುವ ಸಾಧು ನಿವಾಸ ಮತ್ತು ಭೋಜನಾಲಯ ಉದ್ಘಾಟಿಸಿ ಮಾತನಾಡಿದರು.

ಕಳೆದ 30 ವರ್ಷಗಳಿಂದ ಪ್ರಾಮಾಣಿಕವಾಗಿ ರಾಜಕೀಯ (Politics) , ಜನ ಸೇವೆ ಮಾಡುತ್ತಾ ಬಂದಿದ್ದು , ಈ ಭಾಗದ ಜನತೆ ನನ್ನ ಮೇಲೆ ಅಪಾರ ಪ್ರೀತಿ,ವಿಶ್ವಾಸವಿರಿಸಿ ರಾಜಕೀಯವಾಗಿ ಬೆಳಸಿದ್ದು ಈ ಜನರ ಪ್ರೀತಿ, ಸಹಕಾರ ನಾನು ಎಂದಿಗೂ ಮರೆಯಲಾರೆ, ರಾಜ್ಯದಲ್ಲಿ ಎರೆಡು ಬಾರಿ ಸಿಎಂ (CM)  ಆಗುವ ಅವಕಾಶ ಕೈ ತಪ್ಪಿದೆ. ಆದರೂ ಸಹ ಈ ಸಲ ರಾಜ್ಯದಲ್ಲಿ ಸಿಎಂ ಆಗುವ ಅವಕಾಶವಿದೆ. ನಾನು ಸಿಎಂ ಆಗಲಿ ಬಿಡಲಿ ನನ್ನ ರಾಜಕೀಯ ಸೇವೆ ನಿರಂತರವಾಗಿ ಜನಪರವಾಗಿ ನಡೆಯಲಿದೆ ಎಂದು ತಿಳಿಸಿದರು.

ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಈ ಸಂಸ್ಥೆಯ ಅಭಿವೃದ್ಧಿಗೆ ಸಾಕಷ್ಟುಶ್ರಮಪಟ್ಟಿದ್ದು, ಪ್ರಸ್ತುತ ರಾಮಕೃಷ್ಣಶ್ರಮ ತುಂಬಾ ಚೆನ್ನಾಗಿದೆ. ಇಡೀ ಪ್ರಪಂಚದಲ್ಲಿ ಭಾರತದ ಧಾರ್ಮಿಕ ಆಚರಣೆಗಳು ವಿಭಿನ್ನವಾಗಿದೆ. ಇಡೀ ದೇಶದಲ್ಲಿ ಅತ್ಯಂತ ದೊಡ್ಡ ಮಟ್ಟದ ಧಾರ್ಮಿಕ ಕ್ರಾಂತಿ ನಡೆಯಬೇಕಿದ್ದು, ಆ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಧಾಮಿÜರ್‍ಕ ಆಚರಣೆಗಳು ನಡೆಯಬೇಕು. ಇದು ಈ ದೇಶದ ಸ್ವಾಮೀಜಿಗಳಿಂದ ಮಾತ್ರ ಸಾಧ್ಯ ಎಂದರು.

ಸ್ವಾಮಿ ವಿವೇಕಾನಂದರ ವಿಚಾÃ ಧಾರೆಗಳು ಕೇವಲ ಹಿಂದುಗಳಿಗೆ ಸೀಮಿತವಾಗಿಲ್ಲ, ಇಡೀ ಜಗತ್ತಿನ ಮನುಕುಲಕ್ಕೆ ಆದರ್ಶಪ್ರಾಯವಾಗಿವೆ.ಹಾಗಾಗಿ ಸ್ವಾಮಿ

ವಿವೇಕಾನಂದರ ಆದರ್ಶ ತತ್ವಗಳು ಪಾಲಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಮಥುರಾದ ಮಹಾಮಂಡಲೇಶ್ವರ ಕಾರ್ಷಿಣಿ ಗುರುಶಣಾನಂದಜಿ, ತುಮಕೂರು ರಾಮಕೃಷ್ಣಶ್ರಮದ ವಿರೇಶಾನಂದಮಹರಾಜ್‌, ರೂಪನಂದಜಿ ಮಹರಾಜ್‌, ತಗ್ಗಿಹಳ್ಳಿ ಆಶ್ರಮದ ರಮಾನಂದಸ್ವಾಮಿ, ಕೊರಟಗೆರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶ್ವತ್ಥನಾರಾಯಣ್‌, ಕಾಂಗ್ರೆಸ್‌ ಮಹಿಳಾ ಅಧ್ಯಕ್ಷೆ ಜಯಮ್ಮ, ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಸೇರಿದಂತೆ ಅನೇಕರಿದ್ದರು.

ಸವಾಲಿನ ಬಗ್ಗೆ ಗೊತ್ತಿದೆ

ಬೆಂಗಳೂರು (ಡಿ.10): ನಮ್ಮ ಜವಾಬ್ದಾರಿ ಕಂಡು ಪರಮೇಶ್ವರ್‌ ಅವರು ಅನುಕಂಪದಿಂದ ಈ ರೀತಿ ಹೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸ್ಪಷ್ಟನೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್‌ ಅವರು ಕಷ್ಟಪಡುತ್ತಿದ್ದು, ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂಬ ಪರಮೇಶ್ವರ್‌ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ದಿನದಲ್ಲಿ ಕೇವಲ 24 ಗಂಟೆ ಮಾತ್ರ ಇದೆ. ಇನ್ನು ಹೆಚ್ಚಾಗಿದ್ದರೆ ಇನ್ನು ಹೆಚ್ಚಾಗಿ ದುಡಿಯಬಹುದಾಗಿತ್ತು. ನಮ್ಮ ಮುಂದಿರುವ ಸವಾಲಿನ ಬಗ್ಗೆ ಅವರಿಗೂ ಗೊತ್ತಿದೆ. ಎಲ್ಲವೂ ಸುಲಭವಾಗಿ ಸಿಗುವುದಿಲ್ಲ. 

ಬಿಜೆಪಿ ಅವರದು ಡಬಲ್‌ ಇಂಜಿನ್‌ ಸರ್ಕಾರ, ಅವರು ಸಾಂವಿಧಾನಿಕ ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರು, ಪೊಲೀಸ್‌ ಅಧಿಕಾರಿಗಳು, ರೌಡಿಗಳು ಹೀಗೆ ಅನೇಕರನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಜವಾಬ್ದಾರಿ ಕಂಡು ಪರಮೇಶ್ವರ್‌ ಅವರು ಅನುಕಂಪದಿಂದ ಈ ರೀತಿ ಹೇಳಿದ್ದಾರೆ. ಇಲ್ಲಿ ನಾವು ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗಬೇಕು. ನಾವು ಒಬ್ಬರೆ ಹೋಗುವುದಾದರೆ ವೇಗವಾಗಿ ಹೋಗಬಹುದು, ನಾವು ದೂರದವರೆಗೂ ಹೋಗಬೇಕಾದರೆ ನಾವು ಎಲ್ಲರ ಜತೆಗೂಡಿ ಸಾಗಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ’ ಎಂದರು.

ಎಲೆಕ್ಷನ್‌ನಲ್ಲಿ ಹೊಸಬರಿಗೆ ಅವಕಾಶ: ಡಿಕೆಶಿ ಸುಳಿವು

ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಒದ್ದಾಡುತ್ತಾರೆ: ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿ.ಕೆ.ಶಿವಕುಮಾರ್‌ ಒದ್ದಾಡುತ್ತಾರೆ ಎನ್ನುವ ಮೂಲಕ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅಚ್ಚರಿಕೆ ಹೇಳಿಕೆ ನೀಡಿದ್ದಾರೆ. ಕೊರಟಗೆರೆ ತಾಲೂಕು ವಡ್ಡಗೆರೆಯಲ್ಲಿ ಮಾತನಾಡಿ ಬೆಳಗ್ಗೆ ಎದ್ದರೆ ನಮ್ಮ ಶಿವಕುಮಾರಣ್ಣ ಒದ್ದಾಡುತ್ತಾರೆ. ನಾವು ಜೊತೆಗಿದ್ದೇವೆ, ಸುಮ್ಮನೆ ಧೈರ್ಯವಾಗಿರಪ್ಪ ಅಂತಾ ಹೇಳುತ್ತೀವಿ ಎಂದು ಪರಮೇಶ್ವರ್‌ ತಿಳಿಸಿದರು. 

ಯಾವುದೇ ವ್ಯಕ್ತಿ ಹಾಗೂ ಪಕ್ಷ ಬರಬೇಕಾದರೆ ನಮ್ಮ ಉದ್ದೇಶ ಏನು, ನಮ್ಮ ಕ್ಷೇತ್ರದ ಕೆಲಸ ಏನು ಎಂಬುದರ ಬಗ್ಗೆ ಸಾಮರ್ಥ್ಯ ಇರಬೇಕು. ಆ ಸಾಮರ್ಥ್ಯ ನನಗಿದೆ ಅಂತ ನಾನು ಅಂದುಕೊಂಡಿದ್ದೇನೆ. ಬೇರೆಯವರಿಗೆ ಸಾಮರ್ಥ್ಯ ಇದೆಯೋ, ಇಲ್ಲವೋ ಅದು ಅವರಿಗೆ ಬಿಟ್ಟಿದ್ದು, ಈ ಬಗ್ಗೆ ಟೀಕೆ ಟಿಪ್ಪಣಿ ಮಾಡೊಕ್ಕೆ ಹೋಗುವುದಿಲ್ಲ. ನನಗೆ ಸಾಮರ್ಥ್ಯ ಇದೆ, ಈ ರಾಜ್ಯದಲ್ಲಿ ಒಬ್ಬ ಸಮರ್ಥ ನಾಯಕ ಅಂತ ಕಾಂಗ್ರೆಸ್‌ ಪಕ್ಷ ನನ್ನ ಗುರುತಿಸಿ 8 ವರ್ಷ ಪಕ್ಷದ ಅಧ್ಯಕ್ಷನಾಗಿ ಇಟ್ಟಿದ್ದರು ಎಂದರು.

Follow Us:
Download App:
  • android
  • ios