ಲಂಚ: ವಿಜಯ ಬ್ಯಾಂಕ್‌ ಮ್ಯಾನೇಜರ್‌ ಬಂಧನ

ಸಾಲ ತಿರುವಳಿ ಪತ್ರ ನೀಡಲು ಲಂಚ ಪಡೆಯುತ್ತಿದ್ದ ತಾಲೂಕಿನ ಆಲೂರು ಗ್ರಾಮದ ವಿಜಯ ಬ್ಯಾಂಕ್‌ ಮ್ಯಾನೇಜರ್‌ ಪ್ರವೀಣ್‌ ಅವರನ್ನು ಎಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

Chamarajnagar vijaya bank manager arrested red hand while receiving  bribe

ಚಾಮರಾಜನಗರ(ಡಿ.20): ಸಾಲ ತಿರುವಳಿ ಪತ್ರ ನೀಡಲು ಲಂಚ ಪಡೆಯುತ್ತಿದ್ದ ತಾಲೂಕಿನ ಆಲೂರು ಗ್ರಾಮದ ವಿಜಯ ಬ್ಯಾಂಕ್‌ ಮ್ಯಾನೇಜರ್‌ ಪ್ರವೀಣ್‌ ಅವರನ್ನು ಎಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆಲೂರು ವಿಜಯಾ ಬ್ಯಾಂಕಿನ ಮ್ಯಾನೇಜರ್‌ ಪ್ರವೀಣ್‌ ಎಂಬುವವರು ಸಿಂಗನಪುರದ ರೈತ ಸಿದ್ದಪ್ಪಾಜಿ ಎಂಬುವರಿಗೆ ಸಾಲ ತಿರುವಳಿ ನೀಡಲು 15 ಸಾವಿರ ರು. ಬೇಡಿಕೆ ಇಟ್ಟಿದ್ದರು. ಮೊದಲು ಎರಡು ಸಾವಿರ ನೀಡಿ ಉಳಿದ 13,000 ನೀಡಬೇಕು ಎಂದಿದ್ದರು. ಸರ್ಕಾರ ಸಾಲ ಮನ್ನಾ ಮಾಡಿದ್ದರೂ ಸಾಲ ತಿರುವಳಿ ಪತ್ರ ನೀಡಲು ಬ್ಯಾಂಕ್‌ ಮ್ಯಾನೇಜರ್‌ ಲಂಚಕ್ಕಾಗಿ ಒತ್ತಾಯಿಸಿದ್ದರಿಂದ ದೂರು ಸಲ್ಲಿಸಿದ್ದಾರೆ.

ಮಂಡ್ಯ: ತ್ರಿವರ್ಣ ಧ್ವಜ ಹಿಡಿದು, ಕಪ್ಪು ಪಟ್ಟಿ ಧರಿಸಿ ನಮಾಜ್‌ ಸಲ್ಲಿಕೆ

ಇದನ್ನು ಗಂಭೀರವಾಗಿ ಪರಿಗಣಿಸಿದ ಎಸಿಬಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿ 13 ಸಾವಿರ ರು. ಲಂಚ ಪಡೆಯುತ್ತಿದ್ದ ವೇಳೆ ಮ್ಯಾನೇಜರ್‌ ಪ್ರವೀಣ್‌ ಅವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಮೈಸೂರು ಎಸ್ಪಿ ಜಿ.ಕೆ. ರಶ್ಮಿ ಅವರ ಮಾರ್ಗದರ್ಶನ ಮತ್ತು ಸಲಹೆ ಮೇರೆಗೆ ಚಾಮರಾಜನಗರ ಎಸಿಬಿ ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ್‌, ಇನ್ಸ್‌ ಪೆಕ್ಟರ್‌ಗಳಾದ ಶ್ರೀಕಾಂತ್‌ ಮತ್ತು ದೀಪಕ್‌ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.

ಎಂಗೇಜ್ಮೆಂಟ್ ಆಗಿ ಮದ್ವೆ ಮಂಟಪಕ್ಕೆ ಬಾರದ ವರನ ವಿರುದ್ಧ ಕೇಸು..!

Latest Videos
Follow Us:
Download App:
  • android
  • ios