Asianet Suvarna News Asianet Suvarna News

ಎಂಗೇಜ್ಮೆಂಟ್ ಆಗಿ ಮದ್ವೆ ಮಂಟಪಕ್ಕೆ ಬಾರದ ವರನ ವಿರುದ್ಧ ಕೇಸು..!

ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು, ಮದುವೆ ದಿನ ಮಂಟಪಕ್ಕೆ ಬಾರದೆ ಸಂಬಂಧ ಕಡಿದುಕೊಂಡ ಯುವಕ ಸೇರಿ ಐವರ ವಿರುದ್ಧ ವಧುವಿನ ಪೋಷಕರು ಕೇಸು ದಾಖಲಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

parents file case against bangalore man who breaks relationship after engagement
Author
Bangalore, First Published Dec 20, 2019, 12:46 PM IST

ಉಡುಪಿ(ಡಿ.20): ಮದುವೆಯಾಗುವುದಾಗಿ ನಂಬಿಸಿ ಕುಟುಂಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿದ ಆರೋಪದ ಮೇಲೆ ಬೆಂಗಳೂರು ಮೂಲದ ಯುವಕ ಸೇರಿದಂತೆ ಐವರ ವಿರುದ್ಧ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ನಿವಾಸಿ ಶಂಕರ ಎಂಬವರು ಹಿರಿಯರ ಸಮ್ಮುಖದಲ್ಲಿ ತಮ್ಮ ಮಗಳಿಗೆ ಬೆಂಗಳೂರು ಮೂಲದ ಶರತ್‌ ಭಟ್‌ ಎಂಬಾತನೊಂದಿಗೆ ಮದುವೆ ಮಾತುಕತೆ ನಡೆಸಿ ನಿಶ್ಚಿತಾರ್ಥ ಮಾಡಿದ್ದರು. ಇದೀಗ ಮದುವೆಯಾಗದೆ ವಂಚಿಸಿದ ಆರೋಪದ ಮೇಲೆ ಬೆಂಗಳೂರಿನ ಹಾವನೂರು ಬಡಾವಣೆಯ ಮಹಾಲಸಾ ಕೃಪಾ ನಿವಾಸಿಗಳಾದ ಶರತ್‌ ಭಟ್‌, ನಾಗರಾಜ್‌ ಭಟ್‌, ಜ್ಯೋತಿ ಭಟ್‌, ಭರತ್‌ ಭಟ್‌, ಮೇಘನಾ ಯಾನೆ ದೀಪಾ ಭಟ್‌ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲ್ಲ ಕಡೆ ಸೆಕ್ಷನ್ 144 ಅಗತ್ಯವಿರಲಿಲ್ಲ ಎಂದ ಕಾಂಗ್ರೆಸ್ ಮುಖಂಡ

ಎರಡೂ ಕುಟುಂಬದವರ ಒಪ್ಪಿಗೆಯಂತೆ ಏಳು ತಿಂಗಳ ಹಿಂದೆ ಬೆಂಗಳೂರಿನ ವರನ ಮನೆ ಸಮೀಪದ ಬಸವನಗುಡಿಯಲ್ಲಿರುವ ದ್ವಾರಕನಾಥ ಭವನದ ನಂದಗೋಕುಲ ಹಾಲ್‌ನಲ್ಲಿ ನಿಶ್ಚಿತಾರ್ಥ ಕಾರ್ಯ ನಡೆದಿತ್ತು. ಅಂದೇ ಮದುವೆಯ ದಿನಾಂಕವನ್ನೂ ನಿಗದಿಪಡಿಸಿ ಡಿ.1ರಂದು ಕುಂದಾಪುರದಲ್ಲಿ ವಿವಾಹ ನಡೆಸುವುದಾಗಿ ನಿರ್ಧರಿಸಲಾಗಿತ್ತು.

ಮುಸ್ಲಿಮರೇ ಕಾಂಗ್ರೆಸ್ ಮಾತು ಕೇಳೋದು ನಿಲ್ಲಿಸಿ ಎಂದ ಪ್ರತಾಪ್ ಸಿಂಹ

ಅದರಂತೆ ಹುಡುಗಿಯ ಮನೆಯವರು ಮದುವೆ ತಯಾರಿ ನಡೆಸಿ ಆಮಂತ್ರಣ ಪತ್ರಿಕೆಯನ್ನೂ ಹಂಚಿದ್ದರು. ಆದರೆ ಮದುವೆಯ ದಿನ ಮದುವೆ ಹಾಲ್‌ಗೆ ಬಾರದೆ ಮದುವೆಯಾಗದೆ ವಂಚಿಸಿದ ಆರೋಪದ ಮೇಲೆ ಯುವತಿಯ ತಂದೆ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

Follow Us:
Download App:
  • android
  • ios