ಚಾಮರಾಜನಗರ(ಡಿ.21): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 3 ದಿನಗಳ ಕಾಲ ಪ್ರತಿಭಟನೆ, ರ‍್ಯಾಲಿ ನಡೆಯದಂತೆ 144ನೇ ಸೆಕ್ಷನ್‌ ಜಾರಿಗೊಳಿಸಿದ್ದು, ಈ ಹಿನ್ನೆಲೆಯಲ್ಲಿ 2ನೇ ದಿನವಾದ ಶುಕ್ರವಾರ ಜಿಲ್ಲಾ ಪೊಲೀಸ್‌ ವತಿಯಂದ ಜಿಲ್ಲಾ ಕೇಂದ್ರದಲ್ಲಿ ಪಥ ಸಂಚಲನ ನಡೆಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಹೊರಟ ಪಥಸಂಚಲನ ಗಾಳೀಪುರ, ಗುಂಡ್ಲುಪೇಟೆ ವೃತ್ತ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಾಗಿ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಕೊನೆಗೊಂಡು, ಆನಂತರ ನಿಯೋಜಿತ ಸ್ಥಳಗಳಿಗೆ ಪೊಲೀಸರು ತೆರಳಿದ್ದಾರೆ.

ಕೊಡಗಿನಲ್ಲಿ ಸ್ವಯಂ ಪ್ರೇರಿತ ಬಂದ್, ನಿಷೇಧಾಜ್ಞೆ ಜಾರಿ

ಈ ಸಂದರ್ಭದಲ್ಲಿ ಮಾತನಾಡಿದ ಅಡಿಷನಲ್‌ ಎಸ್ಪಿ ಅನಿತಾ ಬಿ.ಹದ್ದಣ್ಣನವರ್‌ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 3 ದಿನಗಳ ಕಾಲ ಜಿಲ್ಲಾಧಿಕಾರಿ 144ನೇ ಸೆಕ್ಷನ್‌ ಜಾರಿಗೊಳಿಸಿದ್ದಾರೆ. ಡಿ.21ರ ರಾತ್ರಿ 10 ಗಂಟೆಯವರೆಗೂ ಸೆಕ್ಷನ್‌ ಜಾರಿಯಲ್ಲಿದೆ ಎಂದಿದ್ದಾರೆ.

ನಾಗರಿಕರಲ್ಲಿ ವಿಶ್ವಾಸ ಮೂಡಿವುದಕೋಸ್ಕರ, ಸಾರ್ವನಿಕ ಆಸ್ತಿ-ಪಾಸ್ತಿಗೆ ಹಾನಿ ಉಂಟು ಮಾಡದಂತೆ ಜನರಲ್ಲಿ ಅರಿವು ಮೂಡಿಸಲು ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ಪಥ ಸಂಚಲನ ನಡೆಸಲಾಗಿದೆ ಎಂದಿದ್ದಾರೆ.

ಲಂಚ: ವಿಜಯ ಬ್ಯಾಂಕ್‌ ಮ್ಯಾನೇಜರ್‌ ಬಂಧನ

ಎಲ್ಲಾ ಸಂಘ-ಸಂಸ್ಥೆಗಳ ಮುಖಂಡರು, ಧಾರ್ಮಿಕ ಮುಖಂಡರಲ್ಲಿ ಡಿ. 21ರವರೆಗೆ ಯಾವುದೇ ಪ್ರತಿಭಟ, ರಾರ‍ಯಲಿ ನಡೆಸದಂತೆ ಮನವಿ ಮಾಡಿಕೊಂಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದಿದ್ದಾರೆ.

ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ಮುಸ್ಲಿಂವರು ಹಮ್ಮಿಕೊಂಡಿದ್ದ ರಾರ‍ಯಲಿಯನ್ನು ನಮ್ಮ ಮನವಿ ಹ್ನಿನೆಲೆ ಕೈಬಿಟ್ಟಿದ್ದಾರೆ ಎಂದಿದ್ದಾರೆ.

'ಎಂಟಿಬಿಗೆ BJPಯಲ್ಲಿ ಸ್ಥಾನ ಮಾನ ಕೊಡಲು ಸಾಧ್ಯವೇ ಇಲ್ಲ'..!

ಬಿಗಿ ಬಂದೋಬಸ್ತಿಗಾಗಿ ಜಿಲ್ಲೆಯಾದ್ಯಂತ ಪೊಲೀಸರನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿದೆ ಎಂದಿದ್ದಾರೆ. ಪಥ ಸಂಚಲನದಲ್ಲಿ ಡಿವೈಎಸ್‌ಪಿ ಮೋಹನ್‌, ವೃತ್ತ ನಿರೀಕ್ಷಕರು, ಡಿಆರ್‌ ಪೊಲೀಸರು, ಕೆಎಸ್‌ಆರ್‌ಪಿ, ಎರಡು ಹೈವೆ ಮೊಬೈಲ್‌ ಪೊಲೀಸರು ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಭಾಗವಹಿಸಿದ್ದರು.