ಮೈಸೂರು(ಏ.22): ಬೆಂಗಳೂರಿನ ಪಾದರಾಯನಪುರದಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ನಡೆದ ಹಲ್ಲೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಜರುಗಿಸಬೇಕು ಎಂದು ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪ ಸಿಂಹ ಆಗ್ರಹಿಸಿದರು.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಕೇಳಿ ಕ್ಷೇತ್ರಕ್ಕೆ ಹೋಗಬೇಕಿತ್ತು ಎಂದು ಉದ್ಧಟತನದಿಂದ ಮಾತನಾಡುತ್ತಾರೆ ಎಂದರೆ ಜಮೀರ್‌ ಅಹಮದ್‌ ಅವರಿಗೆ ಚಾಮರಾಜಪೇಟೆ ಕ್ಷೇತ್ರ ಬರೆದುಕೊಟ್ಟಿಲ್ಲ. ಇದೇನು ರಿಯಲ್‌ ಎಸ್ಟೇಟ್‌ ಅಲ್ಲ. ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕೇಂದ್ರ ಸರ್ಕಾರದಿಂದ ಜನತೆಗೆ ಮತ್ತಷ್ಟು ರಿಲೀಫ್‌!

ಪಾದರಾಯನಪುರದಲ್ಲಿ ಈ ಹಿಂದೆಯೂ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆಯಾಗಿದೆ. ಇಂತಹ ಘಟನೆಯನ್ನು ಶಾಸಕರು ಖಂಡಿಸುವ ಬದಲು ಸಮರ್ಥನೆಗೆ ಮುಂದಾಗಿರುವುದು ಸರಿಯಲ್ಲ. ರಾಷ್ಟ್ರೀಯ ವೈದ್ಯಕೀಯ ತುರ್ತು ದೇಶದಾದ್ಯಂತ ಘೋಷಣೆಯಾಗಿದೆ. ಜನರು ಭಯ ಭೀತರಾಗಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ಮಂಗಳಮುಖಿಯರ ಅನ್ನಕ್ಕೂ ಕಲ್ಲು ಹಾಕಿದ ಮಹಾಮಾರಿ ಕೊರೋನಾ..!

ಸರ್ಕಾರ 21 ದಿನಗಳ ಲಾಕ್‌ ಡೌನ್‌ ಘೋಷಿಸಿ, ಮತ್ತೆ 19 ದಿನ ಲಾಕ್‌ ಡೌನ್‌ ಮುಂದುವರೆಸಿದೆ. ಇದರಿಂದಾಗಿ ದೇಶದಲ್ಲಿ ಆರ್ಥಿಕ ಸಂಕಷ್ಟಎದುರಾಗಿದೆ. ಜನರ ಪ್ರಾಣ ರಕ್ಷಣೆ ಮಾಡಲು ಸರ್ಕಾರ ಇಂತಹ ಕ್ರಮ ಕೈಗೊಂಡಿದೆ. ಆದರೂ ಆರೋಗ್ಯಾಧಿಕಾರಿಗಳ ಮೇಲೆ ಹಲ್ಲೆ ಮಾಡುವಂತಹ ಸಮಾಜ ಘಾತಕ ಶಕ್ತಿಗಳನ್ನು ವಹಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.