ಕೋರ್ಟ್‌ ಅಂಗಳಕ್ಕೆ ಚಾಮರಾಜನಗರದ ಉಮ್ಮತ್ತೂರು ಉರುಕಾತೇಶ್ವರಿ ದೇವಸ್ಥಾನ ವಿವಾದ

ತಾರರಕ್ಕೇರಿದ ಉಮ್ಮತ್ತೂರು  ಉರುಕಾತೇಶ್ವರಿ ವಿವಾದ
ದೇವಸ್ಥಾನ ಮುಜರಾಯಿ ಇಲಾಖೆ ವಶಕ್ಕೆ ಪಡೆಯಲಿ ಅಂತಾ ಒಂದು ಗುಂಪಿನ ಒತ್ತಾಯ
ಮತ್ತೊಂದೆಡೆ ದೇವಾಲಯ ಅಧಿಕಾರ ಟ್ರಸ್ಟ್ ಗೆ ಬರಲಿ ಅಂತಾ ಆಡಳಿತ ಮಂಡಳಿ ಒತ್ತಾಯ

Chamarajanagara urukatheswary temple Row Moved to Court rbj

ಪುಟ್ಟರಾಜು. ಆರ್.ಸಿ.  ಏಷ್ಯಾನೆಟ್ ಸುವರ್ಣ ನ್ಯೂಸ್,  ಚಾಮರಾಜನಗರ

ಚಾಮರಾಜನಗರ, (ಏ.09):
ಗಡಿ ಜಿಲ್ಲೆಯ ಚಾಮರಾಜನಗರದ ಉರುಕಾತೇಶ್ವರಿ ದೇವಾಲಯ ವಿವಾದ ತಾರರಕ್ಕೇರಿದೆ. ದೇವಸ್ಥಾನದ ಆಡಳಿತಕ್ಕಾಗಿ ಗ್ರಾಮಸ್ಥರ ನಡುವಿನ ಹಗ್ಗಜಗ್ಗಾಟ ನಡೆದು ನ್ಯಾಯಾಲಯದ ಮೆಟ್ಟಿಲೇರಿದ್ದು ಶೀತಲ ಸಮರಕ್ಕೆ ಕಾರಣವಾಗಿದೆ. ಊರಿನ ಒಂದು ಕೋಮು ದೇವಾಲಯ ನಮ್ಗೆ ಸೇರಿದ್ದು ಅಂತಾ ಟ್ರಸ್ಟ್ ಸ್ಥಾಪಿಸಿದ್ರೆ, ಊರಿನ ಮತ್ತಷ್ಟು ಜನರು ದೇವಾಲಯವನ್ನು ಮುಜರಾಯಿಗೆ ಸೇರಿಸಿದ್ದು ಸರಿ ಕೂಡಲೇ ಮುಜರಾಯಿ ಇಲಾಖೆ ವಶಕ್ಕೆ ಪಡೆಯಲಿ ಅಂತಿದ್ದಾರೆ ಗ್ರಾಮದ ಹಲವರು.

ಕಬ್ಬಿಣದ ಬಾಗಿಲಿಗೆ ಸರಪಳಿ ಬಿಗಿದು ಹಾಕಿರುವ ಬೀಗ. ಅಲ್ಲೇ ಪಕ್ಕದಲ್ಲೇ ಮುಜರಾಯಿ ಇಲಾಖೆ ಹಾಕಿರುವ ಬ್ಯಾನರ್. ಇವೆಲ್ಲಾ ಕಂಡುಬಂದದ್ದು ಚಾಮರಾಜನಗರ ತಾಲ್ಲೂಕು ಉಮ್ಮತ್ತೂರಿನ ದೇವಾಲಯದಲ್ಲಿ. ಹೌದು ಗ್ರಾಮದ ಉರುಕಾತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ನಡುವೆ ಶೀತಲ ಸಮರ ಸೃಷ್ಟಿಸಿದೆ. ಗ್ರಾಮದ ಒಂದು ಕೋಮಿನ ಜನರು ಒಪ್ಪಿಗೆ ನೀಡಿ ಟ್ರಸ್ಟ್ ಮಾಡಿಕೊಂಡು ಹಲವು ವರ್ಷಗಳಿಂದ ಪೂಜೆ ಪುನಸ್ಕಾರ ನಡೆಸಿಕೊಂಡು ಬಂದಿದ್ದಾರೆ. 

Chamarajanagara ಉರುಕಾತೇಶ್ವರಿ ಜಾತ್ರೆಯಲ್ಲಿ ಮೈ ಮೇಲೆ ಕೆಂಡ ಸುರಿದುಕೊಳ್ಳುವ ಆಚರಣೆ 

ಉರುಕಾತೇಶ್ವರಿ ದೇವಾಲಯ ಸುಪ್ರಸಿದ್ಧವಾಗಿದ್ದು ಬೆಂಗಳೂರು, ಮೈಸೂರು, ಮಂಡ್ಯ, ತಮಿಳುನಾಡಿನಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಈ ದೃಷ್ಟಿಯಿಂದಲೂ ಅಪಾರ ಸಂಪತ್ತಿನ ದೇವಾಲಯವೂ ಇದಾಗಿದೆ. ಆದರೆ ಇದು ಕೇವಲ ಟ್ರಸ್ಟ್‌ಗೆ ಸೇರಿದ ಆಸ್ತಿಯಲ್ಲ ಎಂದು ಹೋರಾಟಕ್ಕಿಳಿದಿರುವ ಗ್ರಾಮದ ಮತ್ತೊಂದು ಕೋಮಿನ ಜನರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ದೇಗುಲವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿಸಬೇಕೆಂದು ಆಗ್ರಹಿಸಿದ್ದರು.‌ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮುಜರಾಯಿ ಇಲಾಖೆ ಸುಪರ್ದಿಗೆ ಪಡೆಯುವಂತೆ ಸೂಚಿಸಿತ್ತು. ಅದರಂತೆ ಮಾರ್ಚ್ 25ರಂದು ದೇವಾಲಯಕ್ಕೆ ತೆರಳಿದ್ದ ಅಧಿಕಾರಿಗಳು ದೇವಾಲಯವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದಿರುವುದಾಗಿ ನಾಮಫಲಕ ಅಳವಡಿಸಿದ್ದಾರೆ.

ಆದ್ರೆ ದೇವಾಲಯದ ಟ್ರಸ್ಟ್‌ನ ಸದಸ್ಯರು ಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ತಂದಿದ್ದು, ದೇವಾಲಯವನ್ನು ಆಡಳಿತ ಮಂಡಳಿಗೆ ಬಿಟ್ಟು ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಹಲವಾರು ವರ್ಷಗಳಿಂದ ಟ್ರಸ್ಟ್ ನವರೇ ದೇವಾಲಯ ನೋಡಿಕೊಳ್ಳುತ್ತಿದ್ದು, ಎಲ್ಲವೂ ಪಾರದರ್ಶಕವಾಗಿದೆ. ಯಾರದೋ ಮಾತು ಕೇಳಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ವಹಿಸುವುದು ಸರಿಯಲ್ಲ. ಕೆಳಮಟ್ಟದ ನ್ಯಾಯಾಲಯ ಸೇರಿದಂತೆ ಹೈಕೋರ್ಟ್ ವರೆಗೂ ನಮ್ಮ ಪರವಾಗೇ ತೀರ್ಪು ಬಂದಿದೆ. ಸದ್ಯ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯದ ಆದೇಶವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಪರವಾಗಿಯೇ ಆದೇಶ ಬರುತ್ತದೆ ಎನ್ನುತ್ತಾರೆ ಟ್ರಸ್ಟ್ ನ ಸದಸ್ಯರು.

ಏನೇ ಆಗಲಿ ದೇವಾಲಯದ ಹೆಸರಿನಲ್ಲಿ ಗ್ರಾಮದಲ್ಲಿ ಅಶಾಂತಿ ನಿರ್ಮಾಣವಾಗಿರುವುದು ದುರದೃಷ್ಟವೇ ಸರಿ. ಗ್ರಾಮಸ್ಥರನ್ನು ಕಾಪಾಡಬೇಕಾದ ಉರುಕಾತೇಶ್ವರಿ  ದೇವರೇ ತನ್ನ ಸುಪರ್ದಿ ಯಾರಿಗೆ ಎಂದು ಕಂಗಾಲಾಗಿರುವುದು ಮಾತ್ರ ಸೋಜಿಗವೇ ಸರಿ...

Latest Videos
Follow Us:
Download App:
  • android
  • ios