Chamarajanagar: 6 ವರ್ಷಗಳ ಹಿಂದೆ ನಿರ್ಮಾಣವಾದ್ರು ಇನ್ನು ಉದ್ಘಾಟನೆಯಾಗದೆ ತುಕ್ಕು ಹಿಡಿಯುತ್ತಿದೆ ವಾಟರ್ ಪ್ಲಾಂಟ್!

ಶುದ್ದ ಕುಡಿಯುವ ನೀರು ಅತಿ ಅವಶ್ಯಕಗಳಲ್ಲಿ ಒಂದಾಗಿದೆ. ಆದರೆ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸೋಲಿಗರಿಗೆ ಶುದ್ದ ಕುಡಿಯುವ ನೀರು ಮರೀಚಿಕೆಯಾಗಿದೆ. 

Chamarajanagar District water plant that was built 6 years ago is rusting without opening gvd

ವರದಿ: ಪುಟ್ಟರಾಜು. ಆರ್.ಸಿ.ಏಷಿಯಾನೆಟ್  ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಅ.16): ಶುದ್ದ ಕುಡಿಯುವ ನೀರು ಅತಿ ಅವಶ್ಯಕಗಳಲ್ಲಿ ಒಂದಾಗಿದೆ. ಆದರೆ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸೋಲಿಗರಿಗೆ ಶುದ್ದ ಕುಡಿಯುವ ನೀರು ಮರೀಚಿಕೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೋಲಿಗರ ಹಾಡಿಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಇದ್ದೂ ಇಲ್ಲದಂತಾಗಿದ್ದು ಸೋಲಿಗರಿಗೆ ಬೋರ್ವೆಲ್ ನೀರೆ ಗತಿಯಾಗಿದೆ. ಶುದ್ಧ ಕುಡಿಯುವ ನೀರು ಇದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಗ್ರಾಮೀಣ ಪ್ರದೇಶದವರಿಗೂ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಕೊಡಬೇಕು ಎಂಬುದು ಇದರ ಉದ್ದೇಶ. ಹೀಗಾಗಿ ರಾಜ್ಯ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪನೆ ಮಾಡಿದೆ.

ಆದರೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಇದರ ಪ್ರಯೋಜನ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸೋಲಿಗರಿಗೆ ಸಿಗದಂತಾಗಿದೆ. ಹನೂರು ತಾಲೋಕಿನ ಹಲವೆಡೆ ಪರಿಶಿಷ್ಟ ಪಂಗಡಗಳ ಕಲ್ಯಾಣ  ಇಲಾಖೆಯಿಂದ ತಲಾ 10 ಲಕ್ಷ ರೂಪಾಯಿ ವೆಚ್ಚದಲ್ಲಿ  ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ ಮಾಡಿ ಆರು ವರ್ಷಗಳೆ ಕಳೆದರೂ ಬಹುತೇಕ ಘಟಕಗಳು ಇನ್ನೂ ಕಾರ್ಯಾರಂಭವನ್ನೇ ಮಾಡಿಲ್ಲ.  ಕೆಲವೆಡೆ ಕೆಟ್ಟು ನಿಂತಿವೆ. ಉದ್ದಟ್ಟಿ, ಬಸವನಗುಡಿ, ಹಿರಿಯಂಬಲ, ಕತ್ತೆಕಾಲುಪೋಡು ಸೇರಿದಂತೆ ಎಂಟು ಘಟಕಗಳು ಚಾಲನೆ ಸಿಗದೆ ತುಕ್ಕು ಹಿಡಿಯುತ್ತಿವೆ.  ಇನ್ನು ಕೆಲವು ಕಡೆ ವಿಧ್ಯುತ್ ಸಂಪರ್ಕವೆ ಇಲ್ಲದೆ ಮೀಟರ್ ಬೋರ್ಡ ಕಿತ್ತು ಬಿದ್ದಿದ್ದು ಪೈಪ್ ಲೈನ್ ಹೊಡೆದು ಹೋಗಿದ್ದರೆ ಹಿರಿಯಂಬಲ ಗ್ರಾಮದಲ್ಲಿ ನೀರಿನ ಘಟಕಕ್ಕೆ ಹೋಗಲು ದಾರಿಯೇ ಇಲ್ಲದಾಗಿದ್ದು ಗಿಡಗಂಟೆಗಳು ಬೆಳೆದು ನಿಂತಿದೆ. 

ಸರ್ಕಾರಿ ಹಣ ದುರುಪಯೋಗವಾಗಿದೆ ಹಾಗಾಗಿ ಅಧಿಕಾರಿಗಳು ಕೊಡಲೆ ಇತ್ತ ಗಮನಹರಿಸಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಬೇಕು. ಈ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಇದ್ದೂ ಇಲ್ಲದಂತಾಗಿವೆ.  ಸೋಲಿಗರ ಹಾಡಿಗಳಿಗೆ ಜಲಜೀವನ್ ಮಿಷನ್ ಆಗಲಿ  ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾಗಲಿ ತಲುಪಿಲ್ಲ. ಹಾಗಾಗಿ ಸೋಲಿಗರಿಗೆ ಬೋರ್ವೆಲ್ ನೀರೆ ಗತಿಯಾಗಿದೆ. ಬೇಸಿಗೆ ಕಾಲದಲ್ಲಿ ಬೋರ್ವೆಲ್ಗಳು ಬತ್ತಿಹೋಗಿ ಹಳ್ಳದಲ್ಲಿ ಹರಿಯುವ ನೀರನ್ನು ಹೊತ್ತು ತಂದು ಸೋಸಿ ಕುಡಿಯಬೇಕಾದ ಪರಿಸ್ಥಿತಿ ಇಲ್ಲಿದೆ.  ಇರುವ ಬೋರ್ ವೆಲ್ ಸಂಪರ್ಕತೊಂಬೆಗಳಲ್ಲಿ ನೀರು ತಂದು ಕುಡಿಯುತ್ತಿದ್ದು ತೊಂಬೆ ಗಳನ್ನು ಸ್ವಚ್ಚ ಮಾಡಿ ಅದೇಷ್ಟೋ ವರ್ಷಗಳಾಗಿದ್ದು ಎಲ್ಲಾ ತೊಂಬೆ ನಲ್ಲಿಗಳಲ್ಲಿ ಪಾಚಿ ಕಟ್ಟಿದ್ದು ವಿಧಿ ಇಲ್ಲದೆ ಈ ಕೊಳಕು ನೀರನ್ನೆ ಕುಡಿಯಬೇಕಾದ ಅನಿವಾರ್ಯತೆ ಹಾಡಿ ಜನಗಳದ್ದು.

ಒಳ ಮೀಸಲಾತಿ ಜಾರಿಗೆ ಆಗ್ರಹ: ಚಾಮರಾಜನಗರದಲ್ಲಿ ಬೃಹತ್ ಪಾದಯಾತ್ರೆ

ಹೀಗಾಗಿ ರೋಗ ರುಜಿನಗಳು ಹರಡುತ್ತಿದ್ದು ಆದಷ್ಟು ಬೇಗ ನಮಗೆ ಶುದ್ದ ಕುಡಿಯುವ ನೀರನ್ನು ಒದಗಿಸಬೇಕೆಂದು ಹಾಡಿ ಜನರು ಮನವಿ ಮಾಡುತ್ತಿದ್ದಾರೆ.. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗು ಗ್ರಾಮ ಪಂಚಾಯತಿಗಳ ಸಮನ್ವಯದ ಕೊರತೆ ಇಲ್ಲಿ ಎದ್ದುಕಾಣುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಪಿಡಿಓಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ಶುದ್ಧ ಕುಡಿಯುವ ನೀರು ಘಟಕಗಳನ್ನು  ನಿರ್ವಹಣೆ ಮಾಡಲು ಕ್ರಮ ಜರುಗಿಸಬೇಕಾಗಿದೆ. ಇಲ್ಲವಾದರೆ ಸರ್ಕಾರ ಶುದ್ಧ ಕುಡಿಯುವ ನೀರಿಗಾಗಿ ವೆಚ್ಚ ಮಾಡಿದ ಕೋಟ್ಯಾಂತರ ರೂಪಾಯಿ ಹಣ ಅಧಿಕಾರಿಗಳ ಬೇಜವಬ್ದಾರಿಯಿಂದ  ಹೊಳೆಯಲ್ಲಿ ಹುಣಸೆ ಹಣ್ಣು ತೇಯ್ದಂತೆ ಆಗಲಿದೆ ಅಷ್ಟೇ.

Latest Videos
Follow Us:
Download App:
  • android
  • ios