ಸರ ಕದ್ದು ಓಡುತ್ತಿದ್ದ ಕಳ್ಳನ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
- ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದ ಸಾರ್ವಜನಿಕರು
- ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ.
ತುಮಕೂರು (ಅ.01): ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ.
ತುಮಕೂರು (Tumakur) ಜಿಲ್ಲೆಯ ಮಧುಗಿರಿ ಪಟ್ಟಣದ ಕೆ.ಆರ್.ಬಡಾವಣೆಯಲ್ಲಿಂದು ಘಟನೆ ನಡೆದಿದೆ.
ಹೂ ಮಾರಿಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ (Gold chain) ಕಸಿದ ಕಳ್ಳ ಪರಾರಿಯಾಗುವ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆಂಜಿನಮ್ಮ ಎಂಬ ಮಹಿಳೆಯ 40 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗುತ್ತಿದ್ದ, ಅದನ್ನ ಗಮನಿಸಿದ ಅಲ್ಲಿಯೇ ಇದ್ದ ಸ್ಥಳೀಯರು ಕಳ್ಳನನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆತನನ್ನು ಹಿಡಿದು ಪೊಲೀಸರಿಗೆ (Police) ಒಪ್ಪಿಸಿದ್ದಾರೆ.
ಬೆಂಗಳೂರು; ಒಂದೇ ದಿನ 19 ಕಡೆ ಸರಗಳ್ಳತ ಮಾಡಿದ್ದ ಶಾಮ್ಲಿ ಗ್ಯಾಂಗ್ ಅರೆಸ್ಟ್!
ಆಂಧ್ರಪ್ರದೇಶ (Andhra Pradesh) ಮೂಲದ ನಾಗ ಅಲಿಯಾಸ್ ನಾಗಯ್ಯ ಬಂಧಿತ ಎನ್ನಲಾಗಿದೆ.
ಸರಗಳ್ಳನನ್ನು ಸದ್ಯ ಮಧುಗಿರಿ ಪೊಲೀಸರಿಗೆ ಒಪ್ಪಿಸಿದ್ದು, ಆತನನ್ನು ಬಂಧಿಸಿದ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಮಧುಗಿರಿ (Madhugiri) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕೋವಿಡ್ (Covid), ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟದಿಂದಾಗಿ ಅಪರಾಧ ಪ್ರಕರಣಗಲು ಹೆಚ್ಚಾಗುತ್ತಲೇ ಇದ್ದು, ಸರಗಳ್ಳತನದ ಪ್ರಕರಣಗಳು ದಿನ ದಿನವೂ ಹೆಚ್ಚಾಗಿ ಕೇಳಿ ಬರುತ್ತಿದೆ. ನಗರ ಪ್ರದೇಶಗಳಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿಯೂ ಅಪರಾಧಗಳು ಹೆಚ್ಚಾಗುತ್ತಿವೆ.
ಕಳ್ಳನಾಗಿ ಬದಲಾದ ಗ್ರಾಜುಯೇಟ್
ಕೊರೋನಾ ಕಾಲದಲ್ಲಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ವ್ಯಕ್ತಿ ಕಳ್ಳನಾಗಿ ಬದಲಾಗಿದ್ದಾನೆ. ವಿದ್ಯಾವಂತರನ್ನೇ ಕೊರೋನಾ ಬೀದಿಗೆ ತಳ್ಳಿದೆ. ಮಾಡಿದ್ದು ಎಂಬಿಎ ಇಳಿದದ್ದು ಸರಗಳ್ಳತನಕ್ಕೆ!
ಹೌದು ಲಾಕ್ ಡೌನ್ ಎಫೆಕ್ಟ್ ಗೆ ಪದವೀಧರ ಕಳ್ಳನಾಗಿದ್ದಾನೆ. ಶೇಖ್ ಗೌಸ್ ಬಾಷಾ ಸರಗಳ್ಳತನಕ್ಕೆ ಇಳಿದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಬೈಕ್ ನಲ್ಲಿ ಬಂದು ಸರ ಎಗರಿಸುತ್ತಾರೆ ಹುಷಾರ್!
ಖಾಸಗಿ ಕಂಪನಿಯ ಮ್ಯಾನೇಜರ್ ಆಗಿದ್ದ ಗೌಸ್ 35,000 ಸಾಲ ತೀರಿಸಲು ಕಳ್ಳತನವನ್ನ ಶುರು ಹಚ್ಚಿಕೊಂಡಿದ್ದ. ಜಯನಗರದ ಪೂರ್ಣಿಮಾ ಕನ್ವೆನ್ಷನ್ ಹಾಲ್ ನಿಂದ ಬರ್ತಿದ್ದ ಮಹಿಳೆಯ ಸರ ಎಗರಿಸಿದ್ದ.
ಜಯನಗರ ಪೊಲೀಸರಿಂದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ,"ಸರ್..ಎಂಬಿಎ ಪದವೀಧರ ನಾನು..ಕರೋನಾ ವೇಳೆ ಕೆಲಸದಿಂದ ತೆಗೆದುಹಾಕಿದ್ರು. "ಸಾಲಗಾರರ ಕಿರುಕುಳ ಹೆಚ್ಚಾಗಿತ್ತು.. "ಬೇರೆಡೆ ಕೆಲಸಕ್ಕೆ ಟ್ರೈ ಮಾಡಿದ್ದೆ, ಆದರೇ ಕೆಲಸ ಸಿಕ್ಕಿರ್ಲಿಲ್ಲ.. ಹೀಗಾಗಿ ಸರಗಳ್ಳತನ ಕ್ಕೆ ಮುಂದಾದೆ' ಎಂದು ಹೇಳಿದ್ದಾನೆ.