ಬೆಂಗಳೂರು; ಒಂದೇ ದಿನ 19 ಕಡೆ ಸರಗಳ್ಳತ ಮಾಡಿದ್ದ ಶಾಮ್ಲಿ ಗ್ಯಾಂಗ್ ಅರೆಸ್ಟ್!

* ಕೊನೆಗೂ ಬಲೆಗೆ ಬಿದ್ದ ಐಷಾರಾಮಿ ಕಳ್ಳರ ಗ್ಯಾಂಗ್
* ಉತ್ತರ ಪ್ರದೇಶದಿಂದ ಬಂದು ಬೆಂಗಳೂರಿನಲ್ಲಿ ಕಳ್ಳತನ
* ಒಂದೇ ದಿನ ಹತ್ತೊಂಭತ್ತು ಕಡೆ ಸರಗಳ್ಳತನ ಮಾಡಿದ್ದರು 

Two members of Shamli gang arrested by Bengaluru Police mah

ಬೆಂಗಳೂರು(ಜು. 31)  ಮೂರು ವರ್ಷಕ್ಕೊಮ್ಮೆ ಒಂದೊಂದು ರಾಜಧಾನಿಗೆ  ಈ ಗ್ಯಾಂಗ್ ಎಂಟ್ರಿ ಕೊಡುತ್ತದೆ.  ಬರೋದು ಪ್ಲೈಟ್ ನಲ್ಲಿ, ಹೋಗೋದು ರೈಲಿನಲ್ಲಿ!  ಐಷಾರಾಮಿ ಲೈಫ್ ಗೆ ಎಂಟ್ರಿ ಕೊಟ್ಟಿದ್ದ ಆ ಗ್ಯಾಂಗ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದೆ.

ಬೆಂಗಳೂರು ಗ್ರಾಮಾಂತರ ಪೊಲೀಸರ ನಿದ್ದೆಗೆಡಿಸಿದ್ದವರು ಅಂದರ್ ಆಗಿದ್ದಾರೆ ಬರೋಬ್ಬರಿ ಹತ್ತೊಂಬತ್ತು ಕಡೆ ಚೈನ್ ಸ್ನಾಚಿಂಗ್ ಮಾಡಿ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದರು.

ಫುಲ್ ಟೈಟಾದ ಮೇಲೆ ಸರಗಳ್ಳತನಕ್ಕೆ ಇಳಿಯುತ್ತಿದ್ದ ಕಿಲಾಡಿ

ಇದು ಇರಾನಿ ಗ್ಯಾಂಗ್ ಅಲ್ಲ, ಬವೇರಿಯಾ ಗ್ಯಾಂಗ್ ಅಲ್ಲ.. ಇದು ಉತ್ತರ ಪ್ರದೇಶದ ಶಾಮ್ಲಿ ಗ್ಯಾಂಗ್!  ಉತ್ತರ ಪ್ರದೇಶ, ಪಂಜಾಬ್ ನಲ್ಲಿ ಈ ಶಾಮ್ಲಿ ಗ್ಯಾಂಗ್ ನದ್ದೇ ಹವಾ ಇದೆ. ಇಡೀ ಊರಿಗೆ ಊರೇ ಕಳ್ಳತನವನ್ನೇ ಕಸಬು ಮಾಡಿಕೊಂಡಿದ್ದಾರೆ. ಪೊಲೀಸರ ಚಲನವಲನ ಅಬ್ಸರ್ವ್ ಮಾಡಿ ಸರಗಳ್ಳತನ  ಮಾಡೋದು ಇವರ ಕೆಲಸ.

ಜೂನ್ 30 ರಂದು ಸಿಎಂ ಕಾರ್ಯಕ್ರಮದ ಬಂದೋಬಸ್ತ್ ನಲ್ಲಿ  ಪೊಲೀಸರು ಬ್ಯುಸಿಯಾಗಿದ್ದರು. ಇದೇ ಅವಕಾಶ ಬಳಸಿಕೊಂಡು  ನಗರದ ಹೊರಹೊಲಯದಲ್ಲಿ  ಒಂದೇ ದಿನ 19 ಕಡೆ ಸರಗಳ್ಳತನ ಮಾಡಿದ್ದರು. ಬ್ಲಾಕ್ ಫಲ್ಸರ್ ಗಳಲ್ಲಿ ಬಂದಿದ್ದ ಖದೀಮರು ಕೊನೆಗೂ  ಉತ್ತರ ಪ್ರದೇಶದಲ್ಲಿ ಬಲೆಗೆ ಬಿದ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ  ಅರ್ಜುನ್ ಸಿಂಗ್ , ಸೋನುಕುಮಾರ್  ಎಂಬುವರನ್ನು ಬಂಧಿಸಲಾಗಿದ್ದು ಮಾಹಿತಿ ಕೆಲೆಹಾಕಲಾಗುತ್ತಿದೆ. 

Latest Videos
Follow Us:
Download App:
  • android
  • ios