Davanagere ಸೂಪರ್ ಕಾಪ್ ದೇವರಾಜ್‌ಗೆ ಕೇಂದ್ರ ಗೃಹ ಸಚಿವ ಪದಕ: ಜಿಲ್ಲಾ ಪೊಲೀಸರ ಅಭಿನಂದನೆ
ದಾವಣಗೆರೆ ಸೇರಿದಂತೆ ಹೊನ್ನಾಳಿ ತಾಲ್ಲೂಕಿನಲ್ಲಿ ಸರ್ಕಲ್ ಇನ್ಸಪೆಕ್ಟರ್ ಆಗಿ ತಮ್ಮದೇ ಶೈಲಿಯಲ್ಲಿ ಹಲವು ಕೊಲೆ ಪ್ರಕರಣ ಭೇದಿಸಿದ್ಧ ಟಿ.ವಿ.ದೇವರಾಜ್‌ಗೆ ಗೃಹ ಸಚಿವ ಪದಕಕ್ಕೆ ಬಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಗೃಹ ಸಚಿವ ಪದಕ ಪ್ರದಾನ ಮಾಡಿದ್ದಾರೆ.
ವರದಿ: ವರದರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ದಾವಣಗೆರೆ (ಜ.22): ದಾವಣಗೆರೆ ಸೇರಿದಂತೆ ಹೊನ್ನಾಳಿ ತಾಲ್ಲೂಕಿನಲ್ಲಿ ಸರ್ಕಲ್ ಇನ್ಸಪೆಕ್ಟರ್ ಆಗಿ ತಮ್ಮದೇ ಶೈಲಿಯಲ್ಲಿ ಹಲವು ಕೊಲೆ ಪ್ರಕರಣ ಭೇದಿಸಿದ್ಧ ಟಿ.ವಿ.ದೇವರಾಜ್‌ಗೆ ಗೃಹ ಸಚಿವ ಪದಕಕ್ಕೆ ಬಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಗೃಹ ಸಚಿವ ಪದಕ ಪ್ರದಾನ ಮಾಡಿದ್ದಾರೆ.
ತನಿಖಾ ಶ್ರೇಷ್ಠತೆಗಾಗಿ ಕೊಡ ಮಾಡುವ "ಕೇಂದ್ರ ಗೃಹ ಸಚಿವ ಪದಕ"ಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ವಿ. ದೇವರಾಜ್ ಭಾಜನರಾಗಿದ್ದರು. ಇದೀಗ ಮಂಗಳೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟಿ ವಿ ದೇವರಾಜ್ ಅವರಿಗೆ ಗೃಹ ಸಚಿವ ಪದಕ ಬಂದಿರುವುದಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಪ್ರಕರಣದಲ್ಲಿ ಟೆಕ್ನಿಕಲ್ ಬಳಕೆ, ಭೌತಿಕ ತನಿಖೆ, ತನಿಖೆ ಮಾಡುವ ವಿಧಾನದ ಕಾರ್ಯ ವೈಖರಿ ಹೇಗಿತ್ತು ಎಂಬ ಆಧಾರದ ಮೇಲೆ ಈ ಪದಕ ನೀಡಲಾಗುತ್ತದೆ. ಅಂತಹ ಪ್ರಶಸ್ತಿಗೆ ಟಿವಿ ದೇವರಾಜ್ ಸಿಕ್ಕಿರುವುದರ ಕೊಲೆ ಹಿಂದಿನ ರಹಸ್ಯ ಇಲ್ಲಿದೆ.
ಬದಲಾಗಲಿದೆಯೇ ಪೊಲೀಸ್ ಡ್ರೆಸ್.? : ಒನ್ ನೇಷನ್ ಒನ್ ಯೂನಿಫಾರ್ಮ್‌ಗೆ ರಾಜ್ಯ ತಾತ್ವಿಕ ಒಪ್ಪಿಗೆ
24 ಗಂಟೆಗಳಲ್ಲಿ ಪ್ರಕರಣ ಆರೋಪಿ ಪತ್ತೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹುಣಸಘಟ್ಟದ ಮದರಸಾ ಬಳಿ ಕಳೆದ ವರ್ಷ ಡಿಸಂಬರ್ 20, 2020 ರಂದು ವೃದ್ಧ ನಜೀರ್ ಅಹಮದ್ ಕೊಲೆ ಪ್ರಕರಣವನ್ನು ಟಿವಿ ದೇವರಾಜ್ ಬೇಧಿಸಿದ್ದರು. ಕೊಲೆ ನಡೆದ ಸ್ಥಳದಿಂದ ರಕ್ತದ ಜಾಡು ಹಿಡಿದು ಕೇವಲ 24 ಗಂಟೆಗಳಲ್ಲಿ ಸಿಪಿಐ ಟಿ.ವಿ.ದೇವರಾಜ್ ಪ್ರಕರಣ ಭೇದಿಸಿದ್ದರು. ಆಧುನಿಕ ತಂತ್ರಜ್ಞಾನ ವಿಧಾನ ಬಳಸಿ ಪ್ರಕರಣ ಭೇದಿಸಿದ ಹಿನ್ನೆಲೆಯಲ್ಲಿʻಅಪರಾಧ ಪ್ರಕರಣಗಳ ತನಿಖೆಯಲ್ಲಿನ ಅನನ್ಯ ಸಾಧನೆʼ ಎಂದು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಸುಳಿವು ನೀಡಿದ ರಕ್ತ ಅಂಟಿದ ನೋಟುಗಳು: ಕೊಲೆಯಾದ ದಿನ ಸತ್ಯಾಸತ್ಯತೆ ತಿಳಿಯಲು ಸಿಪಿಐ ದೇವರಾಜ್ ಅವರು ಕೊಲೆಯಾದ ಸ್ಥಳವಾದ ಮದರಸದ ಸುತ್ತ ಪರಿಶೀಲನೆ ನಡೆಸಿದರು. ಕೊಲೆಯಾದ ದೇಹವನ್ನು ತೋಟದತ್ತ ಎಳೆದುಕೊಂಡು ಹೋಗುವ ವೇಳೆ ರಕ್ತದ ಹನಿಗಳು ಬಿದ್ದಿರುವುದನ್ನು ಗಮನಿಸಿದರು. ಆಗ ಕೊಲೆ ಮಾಡಿದ ವ್ಯಕ್ತಿಯ ಕೈಗೆ ಗಾಯವಾಗಿರುವ ಬಗ್ಗೆ ಅನುಮಾನ ಬಂದು, ಪೊಲೀಸ್ ನಾಯಿ 'ತುಂಗಾ'ಳನ್ನು ಕರೆದುಕೊಂಡು ಬಂದು ಶೋಧಿಸಲಾಯಿತು. ಸಮೀಪ ಇರುವ ಆಸ್ಪತ್ರೆಯ ವೈದ್ಯರನ್ನು ವಿಚಾರಿಸಲಾಯಿತು. ಆಗ ಇದೇ ಗ್ರಾಮದ ಶೊಯಿಬ್ ಅಕ್ತರ್ ಎಂಬಾತನ ಕೈಗೆ ಪೆಟ್ಟಾಗಿದ್ದು, ಅವನು ಬ್ಯಾಂಡೇಜ್ ಹಾಕಿಸಿಕೊಂಡ ಬಗ್ಗೆ ಮಾಹಿತಿ ತಿಳಿಯಿತು. ಗಾಯಗೊಂಡವನ ಮನೆಯಲ್ಲಿ ಹುಡುಕಾಟ ನಡೆಸಿದಾಗ ರಕ್ತ ಮೆತ್ತಿಕೊಂಡಿರುವ ನೋಟುಗಳು ಪತ್ತೆಯಾದವು. ಹೆಚ್ಚಿನ ವಿಚಾರಣೆ ನಡೆಸಿದಾಗ ಸ್ನೇಹಿತನ ಜತೆಗೂಡಿ ಕೊಲೆ ಮಾಡಿರುವುದಾಗಿ ಆರೋಪಿ ಬಾಯಿಬಿಟ್ಟಿದ್ದ.
ಆ್ಯಂಬುಲೆನ್ಸ್‌ಗಾಗಿ ಸೆನ್ಸರ್ ಸಿಗ್ನಲ್: ಸಲೀಂ
1.11 ಲಕ್ಷ ರೂಪಾಯಿ ದರೋಡೆ: ಕೊಲೆಯಾದ ನಜೀರ್ ಅಹಮದ್ ಒಬ್ಬಂಟಿಯಾಗಿದ್ದ. ಮದುವೆಯೂ ಆಗಿರಲಿಲ್ಲ. ತಾನು ದುಡಿದ ಹಣವನ್ನು ಜೇಬಿನಲ್ಲಿ ಕೂಡಿಟ್ಟುಕೊಂಡು ಮದರಸದ ಆವರಣದಲ್ಲಿ ಮಲಗುತ್ತಿದ್ದ. ಆತನ ಬಳಿ 1.11 ಲಕ್ಷ ರೂಪಾಯಿ ಇತ್ತು. ಆರೋಪಿಗಳು ಇದರ ಮೇಲೆ ಕಣ್ಣಿಟ್ಟು ಕೊಲೆ ಮಾಡಿದ್ದರು. ಮದರಸಾದ ಆವರಣದ ಬಳಿ ಬಿದ್ದ ರಕ್ತದ ಹನಿ, ಗೋಡೆಗೆ ಅಂಟಿಕೊಂಡಿದ್ದ ರಕ್ತದ ಬೆರಳಚ್ಚು, ಚಪ್ಪಲಿಯ ಗುರುತು, ಕೊಲೆ ಮಾಡಿದ ರಕ್ತಸಹಿತ ಬಟ್ಟೆ ಪ್ರಮುಖ ಸಾಕ್ಷಿಯಾಯಿತು. ಆರೋಪಿಯ ಮೊಬೈಲ್ ಸೀಜ್ ಮಾಡಿದಾಗ ಡಿ.5ಕ್ಕೆ ಫ್ಲಿಫ್ ಕಾರ್ಟ್‌ನಲ್ಲಿ ಡ್ರ್ಯಾಗರ್ ಬುಕ್ ಮಾಡಿರುವುದು ಗೊತ್ತಾಯಿತು. ಮೊಬೈಲ್‌ನಲ್ಲಿದ್ದ ಡ್ರ್ಯಾಗರ್ ಚಿತ್ರ ಮತ್ತು ಕೊಲೆ ಮಾಡಿದ್ದ ಡ್ರ್ಯಾಗರ್ ಎರಡೂ ಒಂದೇ ಆಗಿತ್ತು. ಇದೆಲ್ಲವೂ ಮಾಹಿತಿಗಳನ್ನು ಹಿಡಿದುಕೊಂಡು ಆರೋಪಿಗಳನ್ನು ಜೈಲಿಗೆ ಅಟ್ಟಲಾಯಿತು. ಇವರಿಬ್ಬರ ಜತೆಗೆ ಸಾಕ್ಷಿಗಳನ್ನು ನಾಶಪಡಿಸಿದ ಮೂವರನ್ನು ಬಂಧಿಸಲಾಗಿತ್ತು.
ಪ್ರಕರಣ ಬೇಧಿಸಿದ್ದಕ್ಕೆ ಅವಾರ್ಡ್: ಒಟ್ಟು ರಾಜ್ಯದಿಂದ ಕೇಂದ್ರ ಗೃಹ ಇಲಾಖೆಗೆ 12 ಜನರ ಪಟ್ಟಿಯನ್ನು ಕಳಿಸಿಕೊಡಲಾಗಿತ್ತು. ದೀ ಬೆಸ್ಟ್ ಅನ್ನುವ ಪ್ರಕರಣಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳಿಸಿಕೊಡಲಾಗಿತ್ತು. ಕನಿಷ್ಟ ಆರು ಜನರ ಘೋಷಣೆಗೆ ಅವಕಾಶ ಇದ್ದರು 2021 ರ ಸಾಲಿನಲ್ಲಿ ಟಿ ವಿ ದೇವರಾಜ್ ರಿಗೆ ಕೇಂದ್ರ ಗೃಹ ಸಚಿವ ಪದಕ ಪ್ರಶಸ್ತಿ ಆರಿಸಿ ಬಂದಿದೆ.
2018 ಮುಖ್ಯಮಂತ್ರಿ ಪದಕ: ಟಿ.ವಿ ದೇವರಾಜ್ ಈ ಪ್ರಕರಣವಲ್ಲದೇ ಹಲವಾರು ಸೂಕ್ಷ್ಮ ಪ್ರಕರಣಗಳನ್ನು ಬೇಧಿಸಿದ ಹೆಗ್ಗಳಿಕೆ ಇವರಿಗಿದೆ. ಸಧ್ಯ ಮಣಿಪಾಲ್ ನಲ್ಲಿ ಸರ್ಕಲ್ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಟಿ ವಿ ದೇವರಾಜ್ ಗೆ 2018 ಮುಖ್ಯಮಂತ್ರಿ ಮೆಡಲ್ ಪಡೆದಿದ್ದಾರೆ. ಟಿವಿ ದೇವರಾಜ್ ತನಿಖೆಗೆ ಕೈಹಾಕಿದ್ದಾರೆಂದ್ರೆ ಆರೋಪಿಗಳ ಕತೆ ಮುಗಿದಂಗೆ. ದಾವಣಗೆರೆ ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ವೈದ್ಯರ ಬಂಧನ, ಎನ್ ಡಿ ಪಿ ಹೊನ್ನಾಳಿ ಗಣಮಗ ಹತ್ಯೆ ಪ್ರಕರಣ, ಶಿವಮೊಗ್ಗ ಕೃಷಿ ವಿಜ್ಞಾನಿ ಗಂಗಾಪ್ರಸಾದ್ ನಿಗೂಢ ಸಾವಿನ ಪ್ರಕರಣ, ಸಿಇನ್ ಇನ್ಸಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಸೈಬರ್ ಕ್ರೈಮ್ ನಲ್ಲಿ ಪೇಸ್ ಬುಕ್ ಕೇಸ್, ಡಿವೈಎಸ್ ಕಾಪಿ ಹಗರಣ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಟಿ ವಿ ದೇವರಾಜ್ ತನಿಖೆಯಲ್ಲಿ ನಿಷ್ಣಾತ ಸೂಪರ್ ಕಾಪ್ ಸಹ ಹೌದು. ಇವರಿಗೆ ಕೇಂದ್ರ ಗೃಹ ಸಚಿವ ಪದಕ ಪ್ರಶಸ್ತಿ ಬಂದಿರುವುದು ಇಡೀ ಕುಟುಂಬಕ್ಕೆ , ಪೊಲೀಸ್ ಇಲಾಖೆಗೆ ಖುಷಿಯ ಸಂಗತಿ.