ದೇಶದ ಎಲ್ಲಾ ರಾಜ್ಯಗಳ,  ಪೊಲೀಸರಿಗೆ ಅನ್ವಯಾಗುವಂತಹ  ಏಕರೂಪದ, ಯೂನಿಫಾರ್ಮ್ ಪದ್ಧತಿ ಜಾರಿಗೆ ತರಲು, ಕೇಂದ್ರದ ಗೃಹ ಇಲಾಖೆ ರಾಜ್ಯ ಸರಕಾರಗಳ ಅಭಿಪ್ರಾಯ ಕೇಳಿದ್ದು, ಕರ್ನಾಟಕ ರಾಜ್ಯ ಸರ್ಕಾರ 'ಒನ್ ನೇಷನ್ ಒನ್ ಯೂನಿಫಾರ್ಮ್' ವ್ಯವಸ್ಥೆ ಜಾರಿಗೊಳಿಸಲು ತಾತ್ವಿಕ ಒಪ್ಪಿಗೆ ನೀಡಿದೆ. 

ಬೆಂಗಳೂರು (ಜ.17): ದೇಶದ ಎಲ್ಲಾ ರಾಜ್ಯಗಳ, ಪೊಲೀಸರಿಗೆ ಅನ್ವಯಾಗುವಂತಹ ಏಕರೂಪದ, ಯೂನಿಫಾರ್ಮ್ ಪದ್ಧತಿ ಜಾರಿಗೆ ತರಲು, ಕೇಂದ್ರದ ಗೃಹ ಇಲಾಖೆ ರಾಜ್ಯ ಸರಕಾರಗಳ ಅಭಿಪ್ರಾಯ ಕೇಳಿದ್ದು, ಕರ್ನಾಟಕ ರಾಜ್ಯ ಸರ್ಕಾರ 'ಒನ್ ನೇಷನ್ ಒನ್ ಯೂನಿಫಾರ್ಮ್' ವ್ಯವಸ್ಥೆ ಜಾರಿಗೊಳಿಸಲು ತಾತ್ವಿಕ ಒಪ್ಪಿಗೆ ನೀಡಿದೆ. 

ಕೇಂದ್ರ ಸರ್ಕಾರದಿಂದ ದೇಶದ ಎಲ್ಲ ರಾಜ್ಯಗಳ ಪೊಲೀಸ್‌ ಅಧಿಕಾರಿಗಳ ಸಮವಸ್ತ್ರಗಳು ಒಂದೇ ರೀತಿಯಾಗಿ ಇರಬೇಕು ಎಂದು ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿತ್ತು. ಈ 'ಒನ್ ನೇಷನ್ ಒನ್ ಯೂನಿಫಾರ್ಮ್' ಹೆಸರಿನಲ್ಲಿ ಪ್ರಸ್ತಾವನೆ ಸಿದ್ಧಪಡಿಸಿ ಎಲ್ಲ ರಾಜ್ಯಗಳಿಗೂ ಇದನ್ನು ಕಳುಹಿಸಿ ಒಪ್ಪಿಗೆಯ ಬಗ್ಗೆ ಅಭಿಪ್ರಾಯ ಕೇಳಲಾಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕೇಂದ್ರದ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಪ್ರಸ್ತಾವನೆ ಕುರಿತ ರಾಜ್ಯ ಒಳಾಡಳಿತ ಇಲಾಖೆಯ ಪ್ರಸ್ತಾವನೆಗೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಸಮ್ಮತಿ ಸೂಚಿಸಿದ್ದಾರೆ.

ಆ್ಯಂಬುಲೆನ್ಸ್‌ಗಾಗಿ ಸೆನ್ಸರ್ ಸಿಗ್ನಲ್: ಸಲೀಂ

ಬದಲಾಗಲಿದೆಯೇ ಸಮವಸ್ತ್ರ..? 
ದೇಶದಲ್ಲಿ ಕೇಂದ್ರದ ಒನ್ ನೇಷನ್ ಒನ್ ಯೂನಿಫಾರ್ಮ್ ಯೋಜನೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರ ಸಮವಸ್ತ್ರ ಬದಲಾಗಲಿದೆಯೇ ಎಂಬ ಪ್ರಶ್ನೆಗಳು ಕಾಡುತ್ತಿವೆ. ಈಗ ಕೇಂದ್ರದ ಯೋಜನೆ ಜಾರಿಗೊಳಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಸಮ್ಮತಿ ಸೂಚಿಸಿದ್ದು, ಪೊಲೀಸರಿಗೆ ದೇಶದಾದ್ಯಂತ ಒಂದೇ ಮಾದರಿಯ ಯೂನಿಫಾರ್ಮ್ ಜಾರಿ ಆಗುವ ಸಾಧ್ಯತೆಯಿದೆ. ಎಲ್ಲಾ ರಾಜ್ಯಗಳಲ್ಲಿ ಒಂದೇ ಮಾದರಿಯ ಯೂನಿಫಾರ್ಮ್ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ಮಾಡಿದ್ದರಿಂದ ಎಷ್ಟು ರಾಜ್ಯಗಳು ಅಂತಿಮವಾಗಿ ಒಪ್ಪಿಗೆ ಸೂಚಿಸುತ್ತವೆ ಎಂದು ನೋಡಿಕೊಂಡು ನಂತರ ಜಾರಿಗೆ ತರುವ ಸಾಧ್ಯತೆ ಇದೆ.

ಕಳೆದ ವರ್ಷವೇ ಬಂದಿದ್ದ ಪ್ರಸ್ತಾವನೆ: ಇನ್ನು ಒಂದು ದೇಶ ಒಂದು ಸಮವಸ್ತ್ರ ಪ್ರಸ್ತಾವನೆಯನ್ನು ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿಯೇ ಕೇಂದ್ರ ಸರ್ಕಾರ ಸಿದ್ಧಪಡಿಸಿತ್ತು. ಈ ಪ್ರಸ್ತಾವನೆ ರಾಜ್ಯದಲ್ಲಿ ಡಿಸೆಂಬರ್‌ ತಿಂಗಳು ಲಭ್ಯವಾಗಿದ್ದು, ಸಚಿವ ಸಂಪುಟದಲ್ಲಿ ಚರ್ಚೆಯನ್ನೂ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈಗ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಾತ್ವಿಕ ಒಪ್ಪಿಗೆಯನ್ನು ಸೂಚಿಸಿದ್ದು, ಕೆಲವು ದಿನಗಳಲ್ಲಿ ಅಧಿಕೃತ ಒಪ್ಪಿಗೆಯೊಂದಿಗೆ ಕೇಂದ್ರ ಸರ್ಕಾರಕ್ಕೆ ತಲುಪಲಿದೆ. ನಂತರ, ಪ್ರಸ್ತಾವನೆಯಲ್ಲಿ ಸೂಚಿಸಲಾಗಿದ್ದ ಸಮವಸ್ತ್ರಗಳು ಜಾರಿಗೆ ಬರಬಹುದು. 

ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಕಿರಿಕ್‌ ಕೊಟ್ಟ ಕುಡುಕ: ಬೇಕಂತಲೇ ಕುಡಿಸಿ ಕಳಿಸ್ತಾರೆ ಎಂದು ಆಕ್ರೋಶ

ಟೊಪ್ಪಿಗೆ, ಬೆಲ್ಟ್‌ ಕಲರ್ ಬದಲು ಸಾಧ್ಯತೆ :ಇಡೀ ದೇಶಾದ್ಯಂತ ಪೊಲೀಸ್‌ ಸಮವಸ್ತ್ರ ಎಂದರೆ ಖಾಕಿ ಬಟ್ಟೆಯೇ ಇದೆ. ಆದರೆ, ಬೆಲ್ಟ್‌, ಟೊಪ್ಪಿಗೆ, ಹುದ್ದೆಗೆ ತಕ್ಕಂತೆ ಶೂಗಳ ಬಣ್ಣಗಳು ಬದಲಾಗುತ್ತದೆ. ಇನ್ನು ಆಯಾ ರಾಜ್ಯಗಳ ಬ್ಯಾಡ್ಜ್‌ಗಳು ಬದಲಾಗುತ್ತವೆ. ಜೊತೆಗೆ, ಪೊಲೀಸ್‌ ಕಾನ್ಸ್‌ಸ್ಟೇಬಲ್‌, ರಿಸರ್ವ್‌ ಪೊಲೀಸ್‌, ಹೆಡ್‌ ಕಾನ್‌ಸ್ಟೇಬಲ್, ಎಎಸ್‌ಐ, ಪಿಎಸ್‌ಐ, ಸಿಪಿಐ, ಎಸ್‌ಪಿ, ಎಡಿಜಿಪಿ, ಡಿಜಿಪಿ ಹುದ್ದೆಗಳಿಗೆ ತಕ್ಕಂತೆ ಸ್ಟಾರ್‌ಗಳು, ಲಾಂಛನ ಮತ್ತು ಕೆಲವು ಸಮವಸ್ತ್ರದ ಪರಿಕರ ಬದಲಾಗುತ್ತದೆ. ಅದೇ ರೀತಿ ಕೇಂದ್ರ ಕಳುಹಿಸಿದ್ದ ಪ್ರಸ್ತಾವನೆಯಲ್ಲಿಯೂ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್‌, ಟ್ರಾಫಿಕ್‌ ಪೊಲೀಸ್, ಮಹಿಳಾ ಪೊಲೀಸ್, ಆರ್ಮಿ ಪೊಲೀಸ್‌, ಎಎಸ್‌ಐ, ಮಹಿಳಾ ಎಎಸ್‌ಐ, ಪಿಎಸ್‌ಐ, ಮಹಿಳಾ ಪಿಎಸ್‌ಐ ಸಮವಸ್ತ್ರಗಳ ಮಾಹಿತಿಯನ್ನು ಕೊಡಲಾಗಿದೆ.