ಮೈಸೂರು(ಫೆ.28): ಮಹಾದಾಯಿ ಕುರಿತಂತೆ ಗೆಜೆಟ್ ಅಧಿಸೂಚನೆ ಸದ್ಯ ರಾಜ್ಯಕ್ಕೆ ಅನುಕೂಲಕರವಾಗಿದೆ. ಆದರೆ ಇದು ತೃಪ್ತಿಕರವಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಗೆಜೆಟ್ ನೋಟಿಫಿಕೇಷನ್ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರ ಮಹಾದಾಯಿ ಕುರಿತಂತೆ ಗೆಜೆಟ್ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಇದು ರಾಜ್ಯಕ್ಕೆ ತಕ್ಷಣಕ್ಕೆ ಅನುಕೂಲಕರವಾಗಿದೆ. ಆದರೆ ತೃಪ್ತಿ ಇಲ್ಲ.ಕುಡಿಯುವ ನೀರಿಗೆ ಅನುಕೂಲವಾಗಬಹುದು.ಆದರೆ ಶಾಶ್ವತ ಆದೇಶ ರಾಜ್ಯದ ಪರ ಬರಬೇಕು. ಅದಕ್ಕಾಗಿ ಅಂತಿಮ ತೀರ್ಪು ಬರಲಿ ಎಂದು ಆಗ್ರಹಿಸಿದ್ದಾರೆ.

ಮಹದಾಯಿ: ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ರೆ ನ್ಯಾಯ ಸಿಕ್ತು ಅಂತಲ್ಲ, ಜಾರಕಿಹೊಳಿ

ಬಜೆಟ್ ಕುರಿತಂತೆ ಚರ್ಚೆ ನಡೆಯಬೇಕು ಎಂಬುದೇ ನಮ್ಮ ಆಶಯ. ಯಾವುದೇ ಹೇಳಿಕೆಗಳ ಚರ್ಚೆ ಬೇಡ. ಹಣಕಾಸು ಅಭಿವೃದ್ಧಿ ಬಗ್ಗೆ ಶಾಸನ ಸಭೆಯಲ್ಲಿ ಚರ್ಚೆ ನಡೆಯಲಿ. ಈ ಸಂಬಂಧ ವಿರೋಧ ಪಕ್ಷಗಳೊಟ್ಟಿಗೆ ಮಾತನಾಡುತ್ತೆನೆ ಎಂದಿದ್ದಾರೆ.