ಬೆಳಗಾವಿ(ಫೆ.28): ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಹದಾಯಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಇಷ್ಟೇ ಆದರೆ ನಮಗೆ ನ್ಯಾಯ ಸಿಗುತ್ತೆ ಅಂತಲ್ಲಾ ಇನ್ನೂ ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಕೆಲಸ ಆಗಬೇಕಿದೆ. ಆದರೆ, ಈಗ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು ಒಳ್ಳೆಯದ್ದೇ ಆಗಿದೆ ಎಂದು ಮಾಜಿ ಸಚಿವ ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. 

ಶುಕ್ರವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಂದಿನ ಸ್ಟೇಪ್ ಸರ್ಕಾರವೇ ಸರಿ ಮಾಡಬೇಕು. ಗೋವಾ ಸರ್ಕಾರ ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ನಾವು ಕೂಡ ಕಾನೂನಾತ್ಮಕವಾಗಿ ಫೈಟ್ ಮಾಡಬೇಕು. ಬಹಳ ದಿನಗಳಿಂದ ಡಿಮ್ಯಾಂಡ್ ಇತ್ತು ರಮೇಶ್ ಜಾರಕಿಹೊಳಿ‌ ಅಥವಾ ಯಾರಿಂದಲೋ ಒಟ್ಟಿನಲ್ಲಿ ಕೆಲಸ ಆಗಿದೆ ಎಂದಿದ್ದಾರೆ.

ಮಹದಾಯಿ: ಕರ್ನಾಟಕಕ್ಕೆ ಜಯ, ಗೋವಾದ ತಕರಾರಿಗೆ ಮಣೆ ಹಾಕದ ಕೇಂದ್ರ!

ಇಷ್ಟಕ್ಕೆ ಮುಗಿದಿಲ್ಲ‌ ಇನ್ನೂ ಬಹಳಷ್ಟು ಸಮಸ್ಯೆ ಇದೆ. ಎಲ್ಲವನ್ನೂ ಸರಿ ಮಾಡಿಕೊಂಡ ಹೆಜ್ಜೆ ಇಟ್ಟರೆ ಒಳ್ಳೆಯದು. ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದರಿಂದ ಕೆಲಸ ಈಗ ಪ್ರಾರಂಭವಾಗಿದೆ. ಇನ್ನೂ ಬಹಳಷ್ಟು ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.