Asianet Suvarna News Asianet Suvarna News

Shaurya Puraskar : ದಾವಣಗೆರೆಗೆ ಕೀರ್ತಿ: ಬಾಲಕನ ಸಮಯ ಪ್ರಜ್ಞೆ, ಸಾಹಸಕ್ಕೆ ಶೌರ್ಯ ಪ್ರಶಸ್ತಿ!

ದಾವಣಗೆರೆ ಜಿಲ್ಲೆಯ ಜಗಳೂರಿನ ನಿವಾಸಿ ಮಂಜುನಾಥ್ ಶೃತಿ ದಂಪತಿಯ 12 ವರ್ಷದ  ಪುತ್ರ ಕೀರ್ತಿ ಗೆ  ಶೌರ್ಯ ಪ್ರಶಸ್ತಿ ಸಿಕ್ಕಿದೆ.  ಅಗಸ್ಟ್ 21 2022 ರಲ್ಲಿ ನಡೆದಿದ್ದಾ ಕಾರು ಅಪಘಾತದಲ್ಲಿ ಪ್ರಾಣ ಪಣಕ್ಕಿಟ್ಟು ಮೂವರ ಜೀವ ಉಳಿಸಿದ್ದ ಬಾಲಕ ಕೀರ್ತಿಗೆ  2022-23 ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ದಕ್ಕಿದೆ..  

Central Bravery Award for Davangere child keerti rav
Author
First Published Jan 28, 2023, 9:18 AM IST

ವರದಿ :ವರದರಾಜ್ 

ದಾವಣಗೆರೆ (ಜ.28) : ನಾವಿಬ್ಬರು ನಮಗಿಬ್ಬರು ಎಂಬ ನಾಲ್ವರ ಸುಂದರವಾದ ಕುಟುಂಬ, ಈ ಕುಟುಂಬ ತಮ್ಮದೇ ಕಾರಿನಲ್ಲಿ ದೇವಸ್ಥಾನಕ್ಕೆ ಪಯಣ ಬೆಳಿಸಿತ್ತು, ಕಾರಿನಲ್ಲಿ ಪಯಣಿಸುವ ವೇಳೆ ಕಾರಿಗೆ ಅಡ್ಡ ಬಂದ ಪುಟ್ಟ ನಾಯಿ ಮರಿಯ ಪ್ರಾಣ ಉಳಿಸಲು ಹೋಗಿ ಬ್ರೇಕ್ ಹಾಕಿದ ಪರಿಣಾಮ ಕಾರು ಪಲ್ಪಿಯಾಗಿ ಅನಾಹುತ ಸಂಭವಿಸಿತ್ತು, ಅದರೆ ಅ ವೇಳೆ ಕಾರಿ‌ನಲ್ಲದ್ದ ಬಾಲಕ ಎದೆಗುಂದದೆ ಧೈರ್ಯ ಮಾಡಿ ತನ್ನ ತಂದೆ ತಾಯಿ ಹಾಗು ಸಹೋದರಿಯ ಪ್ರಾಣ ಉಳಿಸುವಲ್ಲಿ ಸಫಲನಾಗಿದ್ದಾವನಿಗಿದ್ದು, ಬಾಲಕನ ಸಾಹಸಕ್ಕೆ ಇದೀಗ ಶೌರ್ಯ ಪ್ರಶಸ್ತಿ ದಕ್ಕಿದೆ

ದಾವಣಗೆರೆ(Davanagere) ಜಿಲ್ಲೆಯ ಜಗಳೂರಿನ ನಿವಾಸಿ ಮಂಜುನಾಥ್ ಶೃತಿ ದಂಪತಿಯ 12 ವರ್ಷದ  ಪುತ್ರ ಕೀರ್ತಿ ಗೆ  ಶೌರ್ಯ ಪ್ರಶಸ್ತಿ ಸಿಕ್ಕಿದೆ.  ಅಗಸ್ಟ್ 21 2022 ರಲ್ಲಿ ನಡೆದಿದ್ದಾ ಕಾರು ಅಪಘಾತದಲ್ಲಿ ಪ್ರಾಣ ಪಣಕ್ಕಿಟ್ಟು ಮೂವರ ಜೀವ ಉಳಿಸಿದ್ದ ಬಾಲಕ ಕೀರ್ತಿಗೆ  2022-23 ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ(Gallantry Awards) ದಕ್ಕಿದೆ.  

21 ಆಗಸ್ಟ್ 2022ರಂದು ಬಾಲಕ ಕೀರ್ತಿ ವಿವೇಕ್ ಸಾಹುಕಾರ್ ಸೇರಿದಂತೆ ತನ್ನ   ತಾಯಿ ತಂದೆ ಸಹೋದರಿ ಒಟ್ಟು ನಾಲ್ವರು ತಮ್ಮ ಕಾರಿನಲ್ಲಿ ಪಯಣ ಬೆಳೆಸಿದ್ದರು. ದಾವಣಗೆರೆ ಜಿಲ್ಲೆಯ ಜಗಳೂರಿನಿಂದ 25 ಕಿಲೋಮೀಟರ್ ಅಂತರದಲ್ಲಿರುವ ಅಗಸನಹಳ್ಳಿ(agasanahalli)ಯಲ್ಲಿರುವ ಸುಬ್ರಹ್ಮಣ್ಯ ಸ್ವಾಮೀ ದೇವರ ದರ್ಶನಕ್ಕೆ ತೆರಳಿದ್ದರು. ಆ ದಿನದ ಮುಂಜಾನೆ ಅ ಕುಟುಂಬದ ಪಯಣವು ಪ್ರಾರಂಭವಾಗಿತ್ತು, ಬಾಲಕ ಕೀರ್ತಿಯ ತಂದೆ ಕಾರನ್ನು ಚಲಾಯಿಸುವ ವೇಳೆ ಕಾರು ಅನಾಹುತ ಆಗಿ ಕಾರು ಅಪಘಾತಕ್ಕೀಡಾಗಿತ್ತು.  

National Bravery Award: ಕರ್ನಾಟಕದ 3 ಬಾಲಕರಿಗೆ ಶೌರ್ಯ ಪ್ರಶಸ್ತಿ

ಕಿರಿದಾದ ರಸ್ತೆಯಲ್ಲಿ ಕಾರಿನ ಚಕ್ರಕ್ಕೆ ನಾಯಿ ಮರಿ ಸಿಲುಕುತ್ತದೆ ಎಂದು ಅ ನಾಯಿಯ ಜೀವ ಉಳಿಸುವ ಸಲುವಾಗಿ ಕಾರಿನ ಬ್ರೇಕ್ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ಉರುಳಿ ಐದು ಅಡಿ ಆಳದ ಕಂದಕಕ್ಕೆ ಉರುಳಿತ್ತು. ಕಾರಿನ ಬಾಗಿಲುಗಳು ತೆಗೆಯಲು ಬಾರದಂತೆ ಲಾಕ್ ಆಗಿದ್ದವು ,ಆದ್ದರಿಂದ ಯಾರಿಗೂ ಕಾರಿನಿಂದ ಹೊರಬರಲು ಸಾಧ್ಯವಾಗದೆ ನಾಲ್ವರ ಪ್ರಾಣಕ್ಕೆ ಕಂಠಕ ಎದುರಾಗಿತ್ತು. ತಂದೆ ತಾಯಿ ಸಹೋದರಿ ಮೂವರು ಪ್ರಜ್ಞೆ ತಪ್ಪಿದ್ದರು.

ಎದೆಗುಂದದೆ ಧೈರ್ಯ ಮಾಡಿದ ಬಾಲಕ ಕೀರ್ತಿ ಕಾರಿನ ಗಾಜು ಒಡೆದು ಏನ್ ಮಾಡಿದ ಗೊತ್ತಾ? 

ಕಾರು ಅಪಘಾತವಾಗಿ ಸಣ್ಣಪುಟ್ಟ ಗಾಯಗಳಾಗಿದ್ದ ಕೀರ್ತಿಯ ಸಹೋದರಿ ಅಳುತ್ತಿದ್ದಳು, ತಾಯಿ ಕೈ ಮುರಿದುಕೊಂಡು ಪ್ರಜ್ಞೆತಪ್ಪಿ ಬಿದ್ದಿದ್ದರು, ಬೆನ್ನುಮೂಳೆಗೆ ಪೆಟ್ಟು ಬಿದ್ದಿದ್ದರಿಂದ ಆತನ ತಂದೆ ಡ್ರೈವರ್ ಸೀಟಿನಿಂದ ಏಳಲು ಸಾಧ್ಯವಾಗಲಿಲ್ಲ, ಇಂಥ ಬಿಕ್ಕಟ್ಟಿನ, ಗಂಭೀರ ಕ್ಷಣದಲ್ಲಿಯೇ ಕೀರ್ತಿ ಧೈರ್ಯ ಮಾಡಿ ತನ್ನ ಗಾಯಗಳಿಗೆ ಸ್ವಲ್ಪವೂ ಕಾಳಜಿ ತೋರಿಸದೆ ಇಡೀ ಕುಟುಂಬದ ರಕ್ಷಣಾ ಕಾರ್ಯಚರಣೆ ಪ್ರಾರಂಭಿಸಿದ್ದ.

 ಕಾರಿನ ಬಾಗಿಲು ಲಾಕ್ ಆಗಿದ್ದರಿಂದ ಲೋಹದ ನೀರಿನ ಬಾಟಲ್ ನಿಂದ ಕಾರಿನ ಮುಂದಿರುವ ಗಾಜನ್ನು ಒಡೆದು ಮೊದಲು ತಂಗಿಯನ್ನು ರಕ್ಷಿಸಿ ಕಾರಿಂದ ಹೊರಗೆ ಕರೆತಂದಿದ್ದಾನೆ. ಪ್ರಯತ್ನ ಮತ್ತು  ಸಂಕಲ್ಪದಿಂದ ಅವನು ತನ್ನ ತಂದೆಯನ್ನು ಕಾರಿನ ಹೊರಗೆ ಕರೆತರುವಲ್ಲಿ ಯಶಸ್ವಿಯಾದನು, ಕೊನೆಗೂ ಎಚ್ಚರ ತಪ್ಪಿದ ಸ್ಥಿತಿಯಲ್ಲಿದ್ದ ತಾಯಿಯನ್ನು ತಂದೆ-ಮಗ ಇಬ್ಬರೂ ಸೇರಿ ಹೊರಗೆ ಕರೆತರುವಲ್ಲಿ ಯಶಸ್ವಿಯಾಗಿದ್ದ.

 ಪೋಲಿಸ್, ಅಂಬುಲೆನ್ಸ್ ಗೆ ಕರೆ ಮಾಡಿದ ಕೀರ್ತಿ

ಧೈರ್ಯಶಾಲಿ ಹುಡುಗ ಅಷ್ಟಕ್ಕೆ ನಿಲ್ಲದೆ ಅವನು ಪೊಲೀಸ್ ಆಂಬುಲೆನ್ಸ್ ಮತ್ತು ಸಂಬಂಧಿಕರಿಗೆ ಫೋನ್ ಕರೆಗಳನ್ನು ಮಾಡಲು ಪ್ರಾರಂಭಿಸಿದ್ದಾನೆ. ಅರ್ಧ ಗಂಟೆ ನಂತರ ಪೊಲೀಸ್ ಹಾಗೂ ಸಂಬಂಧಿಕರು ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದುವಲ್ಲಿ ಯಶಸ್ವಿಯಾಗಿದ್ದಾರೆ. ಅಂದು ಕೀರ್ತಿಯ ಶೌರ್ಯ ಮತ್ತು ಸಾಹಸ ಮನೋಭಾವವನ್ನು ಕಂಡು ಸುತ್ತಮುತ್ತಲಿನ ಎಲ್ಲರೂ ಮೆಚ್ಚಿದ್ದರು. ಕೀರ್ತಿಯ ಈ ಸಾಮರ್ಥ್ಯವನ್ನು ಗುರುತಿಸಿ ಅವನ ಶಾಲೆಯ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. 

ಕೀರ್ತಿಯ ಶೌರ್ಯಕ್ಕೆ ದಕ್ಕಿದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ:

ಇಂಡಿಯನ್ ಕೌನ್ಸಿಲ್ ಫಾರ್ ಚಿಲ್ಡ್ರನ್ ವೆಲ್‌ಫೇರ್ ಇಲಾಖೆ(Indian Council for Children Welfare Department)ಯಿಂದ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಜಗಳೂರಿನ ಕೀರ್ತಿ ವಿವೇಕ್ ಸಾಹುಕಾರ್ ಆಯ್ಕೆಯಾಗಿ, ದೇಶದ ರಾಜಧಾನಿ ದಿಲ್ಲಿಯಲ್ಲಿಂದು ಗಣರಾಜ್ಯೋತ್ಸವ ಅಂಗವಾಗಿ ನಡೆದ 2022 _23 ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೀರ್ತಿ ವಿವೇಕ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾನೆ.

ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಬಾಲಕ ಕೀರ್ತಿ ವಿವೇಕ್ ಸಾಹುಕಾರ್ ಜಗಳೂರಿನ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ಯನ್ನು ವ್ಯಾಸಂಗ ಮಾಡ್ತಿದ್ದಾನೆ. ತಂದೆ ಮಂಜುನಾಥ್ ಸಾಹುಕಾರ್ ರವರು ಜಗಳೂರಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಶೃತಿಯವರು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Shaurya Puraskar : ಗಿರಣಿಯಿಂದ ತಾಯಿ ರಕ್ಷಿಸಿದ ಕೊಡಗಿನ ದೀಕ್ಷಿತ್‌ಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ!

ಈ ಬಗ್ಗೆ ಮಂಜುನಾಥ್   ಬಾಲಕನ ತಂದೆ ಮಂಜುನಾಥ್ ಪ್ರತಿಕ್ರಿಯಿಸಿ ನನ್ನ ಮಗ ಕೀರ್ತಿ ಶೌರ್ಯದಂತಹ ಕೆಲಸ ಮಾಡಿದ್ದರಿಂದ ಅವನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ದಕ್ಕಿದೆ.‌   ಶೌರ್ಯ ಪ್ರಶಸ್ತಿ ಸ್ವೀಕರಿಸಿದ್ದು, ಇಡೀ ಕುಟುಂಬಕ್ಕೆ  ಅತೀವ ಸಂತಸವಾಗಿದೆ.

Follow Us:
Download App:
  • android
  • ios