ಹಿಟ್ಟಿನ ಗಿರಣಿಯ ಬೆಲ್ಟ್‌ಗೆ ಆಕಸ್ಮಿಕವಾಗಿ ತಾಯಿಯ ತಲೆ ಕೂದಲು ಸಿಲುಕಿದ ಸಂದರ್ಭ ಸಮಯಪ್ರಜ್ಞೆ ಮೆರೆದು ಆಕೆಯನ್ನು ರಕ್ಷಿಸಿದ ಕೊಡಗಿನ ಬಾಲಕ ದೀಕ್ಷಿತ್‌, 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಪಾತ್ರನಾಗಿದ್ದಾನೆ.

ಶನಿವಾರಸಂತೆ (ಜ.12) : ಹಿಟ್ಟಿನ ಗಿರಣಿಯ ಬೆಲ್ಟ್‌ಗೆ ಆಕಸ್ಮಿಕವಾಗಿ ತಾಯಿಯ ತಲೆ ಕೂದಲು ಸಿಲುಕಿದ ಸಂದರ್ಭ ಸಮಯಪ್ರಜ್ಞೆ ಮೆರೆದು ಆಕೆಯನ್ನು ರಕ್ಷಿಸಿದ ಕೊಡಗಿನ ಬಾಲಕ ದೀಕ್ಷಿತ್‌, 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಪಾತ್ರನಾಗಿದ್ದಾನೆ.

ಇಂಡಿಯನ್‌ ಕೌನ್ಸಿಲ್‌ ಫಾರ್‌ ಚಿಲ್ಡ್ರನ್‌ ವೆಲ್ಫೇರ್‌ನಿಂದ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ, ದೀಕ್ಷಿತ್‌ ಆಯ್ಕೆಯಾಗಿದ್ದಾನೆ. ದೆಹಲಿಯಲ್ಲಿ 26ರಂದು ಗಣರಾಜ್ಯೋತ್ಸವ ಅಂಗವಾಗಿ ನಡೆಯಲಿರುವ 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾನೆ.

9ರ ಹರೆಯದ ದೀಕ್ಷಿತ್‌, ಸೋಮವಾರಪೇಟೆ ತಾಲೂಕು ಕೂಡ್ಲೂರು ಗ್ರಾಮದ ನಿವಾಸಿ ರವಿ ಕುಮಾರ್‌-ಅರ್ಪಿತಾ ದಂಪತಿಯ ಪುತ್ರ. ಗ್ರಾಮದ ಸರ್ಕಾರಿ ಕಿ.ಪ್ರಾ.ಶಾಲೆಯ 3ನೇ ತರಗತಿ ವಿದ್ಯಾರ್ಥಿ. ಈತನ ತಾಯಿ ಅರ್ಪಿತ, 2022ರ ನ.24ರಂದು ಕೂಡ್ಲೂರು ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ಅಕ್ಕಿ ಹಿಟ್ಟು ಮಾಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಚಾಲನೆಯಲ್ಲಿದ್ದ ಗಿರಣಿಯ ಬೆಲ್ಟ್‌ಗೆ ಅವರ ತಲೆಕೂದಲು ಸಿಲುಕಿತ್ತು. ಗಿರಣಿ ಪಕ್ಕ ಆಟವಾಡುತ್ತಿದ್ದ ದೀಕ್ಷಿತ್‌, ತಾಯಿಯ ಕಿರುಚಾಟ ಕೇಳಿ, ಓಡಿ ಬಂದು, ಕರೆಂಟ್‌ನ ಸ್ವಿಚ್‌ನ್ನು ಆಫ್‌ ಮಾಡುವ ಮೂಲಕ ಸಮಯಪ್ರಜ್ಞೆ ಮೆರೆದು ತಾಯಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದ.

ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರಕಟ: 22 ಮಕ್ಕಳಲ್ಲಿ ಕರ್ನಾಟಕದ ಇಬ್ಬರು ಆಯ್ಕೆ