Asianet Suvarna News Asianet Suvarna News

ಮಿಲಿಟರಿ ವಸತಿ ಪ್ರದೇಶದಲ್ಲಿ ಬೀದಿ ನಾಯಿ ಗಣತಿಗೆ ಸಿಗುತ್ತಿಲ್ಲ ಅವಕಾಶ

ನಗರದಲ್ಲಿ ಬೀದಿ ನಾಯಿ ಗಣತಿ ನಡೆಸುತ್ತಿರುವ ಬಿಬಿಎಂಪಿಯ ಗಣತಿದಾರರಿಗೆ ರಕ್ಷಣಾ ಪಡೆಗಳ ವಸತಿ ಪ್ರದೇಶ ಸೇರಿದಂತೆ ವಿವಿಧ ಕಡೆ ಪ್ರವೇಶಕ್ಕೆ ಅವಕಾಶ ನೀಡದಿರುವುದು ಗಣತಿ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ. 

Census of street dogs is not allowed in military housing area at bengaluru gvd
Author
First Published Jul 19, 2023, 9:07 AM IST

ಬೆಂಗಳೂರು (ಜು.19): ನಗರದಲ್ಲಿ ಬೀದಿ ನಾಯಿ ಗಣತಿ ನಡೆಸುತ್ತಿರುವ ಬಿಬಿಎಂಪಿಯ ಗಣತಿದಾರರಿಗೆ ರಕ್ಷಣಾ ಪಡೆಗಳ ವಸತಿ ಪ್ರದೇಶ ಸೇರಿದಂತೆ ವಿವಿಧ ಕಡೆ ಪ್ರವೇಶಕ್ಕೆ ಅವಕಾಶ ನೀಡದಿರುವುದು ಗಣತಿ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ. ಕಳೆದೊಂದು ವಾರದಿಂದ 100 ಮಂದಿ ಸಿಬ್ಬಂದಿ 50 ತಂಡಗಳಾಗಿ ಬೈಕ್‌ನಲ್ಲಿ ನಿರ್ದಿಷ್ಟಪ್ರದೇಶಗಳಿಗೆ ತೆರಳಿ ಅಲ್ಲಿನ ಬೀದಿ ನಾಯಿಗಳ ಗಣತಿ ನಡೆಸುತ್ತಿದ್ದಾರೆ.

ಅದಕ್ಕಾಗಿ ಬಿಬಿಎಂಪಿಯ 840 ಚದರ ಕಿಲೋ ಮೀಟರ್‌ ವ್ಯಾಪ್ತಿಯನ್ನು 1,368 ಮೈಕ್ರೋ ವಲಯಗಳಾಗಿ ರಚಿಸಿಕೊಳ್ಳಲಾಗಿದೆ. ಆದರೆ, ನಗರದ ವಿವಿಧ ಭಾಗದಲ್ಲಿರುವ ಭಾರತೀಯ ರಕ್ಷಣಾ ಪಡೆಗಳ ವಸತಿ ಪ್ರದೇಶ(ಕಾಲೋನಿ), ಬಿಎಚ್‌ಇಎಲ್‌, ರೈಲ್ವೆ ಚಕ್ರದ ಕಾರ್ಖಾನೆಯ ವಸತಿ ಪ್ರದೇಶದ ಆವರಣದಲ್ಲಿ ಬೀದಿ ನಾಯಿಗಳ ಗಣತಿದಾರರಿಗೆ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ, ಆ ಪ್ರದೇಶದಲ್ಲಿರುವ ಬೀದಿ ನಾಯಿಗಳ ಗಣತಿ ನಡೆಸುವುದು ಹೇಗೆ ಎಂಬ ಚಿಂತೆಗೆ ಬಿಬಿಎಂಪಿಯ ಪಶುಪಾಲನೆ ವಿಭಾಗದ ಅಧಿಕಾರಿಗಳು ಒಳಗಾಗಿದ್ದಾರೆ.

Chitradurga: ದೇವಸಮುದ್ರದಲ್ಲಿ ಪೊಲೀಸರ ದಾಳಿ: 81 ನಾಡಬಾಂಬ್ ವಶ

ಈ ಕುರಿತು ವಿವರಣೆ ನೀಡಿದ ಬಿಬಿಎಂಪಿ ಪಶುಪಾಲನಾ ವಿಭಾಗ ಜಂಟಿ ನಿರ್ದೇಶಕ ಡಾ.ರವಿಕುಮಾರ್‌, ಜುಲೈ 11ರಿಂದ ನಗರದಲ್ಲಿ ಬೀದಿ ನಾಯಿಗಳ ಗಣತಿ ನಡೆಸಲಾಗುತ್ತಿದೆ. ಪ್ರತಿದಿನ ಒಂದೊಂದು ವಲಯಕ್ಕೆ ಭೇಟಿ ನೀಡಿ ಗಣತಿ ಮಾಡುತ್ತಿದೆ. ಆದರೆ, ಕೆಲವು ಪ್ರದೇಶದಲ್ಲಿ ಗಣತಿದಾರರ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಗಣತಿದಾರರು ತೆರಳಿದಾಗ ಈ ಸ್ಥಳದಲ್ಲಿ ಬೀದಿ ನಾಯಿಗಳೇ ಇಲ್ಲ ಎಂದು ಅಲ್ಲಿನ ಸಿಬ್ಬಂದಿ ಗೇಟ್‌ ಬಳಿ ಹೇಳಿ ವಾಪಸ್‌ ಕಳುಹಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳನ್ನು ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಮೊದಲ ಹಂತದ ಗಣತಿ ಪೂರ್ಣ: ಕಳೆದ ಜುಲೈ 11ರಿಂದ ಆರಂಭಿಸಿದ ಬೀದಿ ನಾಯಿಗಳ ಗಣತಿಯ ಮೊದಲ ಹಂತ ಪೂರ್ಣಗೊಂಡಿದೆ. 1368 ವಲಯಗಳ ಪೈಕಿ 1323 ವಲಯಗಳಿಗೆ ಗಣತಿದಾರರು ಭೇಟಿ ನೀಡಿ ಬೀದಿ ನಾಯಿಗಳ ಲೆಕ್ಕ ಹಾಕಿದ್ದಾರೆ. ಮುಂದಿನ ಆರು ದಿನ ಅದೇ ಸ್ಥಳಗಳಿಗೆ ಮತ್ತೊಂದು ಬಾರಿ ಭೇಟಿ ನೀಡಿ ಗಣತಿ ನಡೆಸಲಿದ್ದಾರೆ. ಅದಾದ ಬಳಿ ಅಧಿಕಾರಿಗಳು ಆಯ್ದ ಪ್ರದೇಶಗಳಿಗೆ ಭೇಟಿ ಪರೀಕ್ಷೆ ನಡೆಸಲಿದ್ದಾರೆ ಎಂದು ಡಾ.ರವಿಕುಮಾರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಡ್ರೋನ್‌ ಬಳಕೆ: ಪ್ರಥಮ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಗಣತಿಗೆ ಬಿಬಿಎಂಪಿಯು ಡ್ರೋನ್‌ ಬಳಸುತ್ತಿದೆ. ಕಳೆದ ಒಂದು ವಾರದಿಂದ ಬೈಕ್‌ ಮೇಲೇರಿದ ಸಿಬ್ಬಂದಿಯು ನಗರದ ಬೀದಿ ಬೀದಿ ಸುತ್ತಿ ಬೀದಿ ನಾಯಿಗಳ ಗಣತಿಗೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಬಿಬಿಎಂಪಿಯ ಪಶುಪಾಲನಾ ವಿಭಾಗವೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹಯೋಗದಲ್ಲಿ ಪ್ರಮುಖ ಸ್ಥಳದಲ್ಲಿ ಡ್ರೋನ್‌ ಬಳಕೆ ಮಾಡುತ್ತಿದೆ.

ಬಿಬಿಎಂಪಿ ವ್ಯಾಪ್ತಿಯ 840 ಚದರ ಕಿಲೋ ಮೀಟನ್ನು ತಲಾ 0.5 ಚ.ಕಿ.ಮೀ. ವ್ಯಾಪ್ತಿಯಂತೆ 6,850 ಮೈಕ್ರೋ ವಲಯಗಳಾಗಿ ವಿಂಗಡಿಸಿಕೊಂಡು ಪ್ರತಿ ದಿನ 0.5 ಕಿ.ಮೀ. ವ್ಯಾಪ್ತಿಯಲ್ಲಿ ತಲಾ ಒಂದು ತಂಡ ಬೈಕ್‌ನಲ್ಲಿ ಗಣತಿ ನಡೆಸುತ್ತಿದ್ದಾರೆ. ಆದರೆ, ಕೆರೆ ಅಂಗಳದಲ್ಲಿ ಬೈಕ್‌ ಸಂಚಾರ ಮಾಡುವುದಕ್ಕೆ ಸಾಧ್ಯವಿಲ್ಲ.

ಶಾಲಾ ವಿದ್ಯಾರ್ಥಿನಿಯರಿಂದಲೇ ತರಗತಿ ನೆಲ ಒರೆಸೋ ಕೆಲಸ ಮಾಡಿಸಿದ ಶಿಕ್ಷಕಿ!

ಕೆರೆ ಅಂಗಳದಲ್ಲಿ ಡ್ರೋನ್‌ ಹಾರಾಟ: ನೂರಾರು ಎಕರೆ ಪ್ರದೇಶದಲ್ಲಿ ಸಿಬ್ಬಂದಿ ಓಡಾಟ ಮಾಡಿ ಗಣತಿ ನಡೆಸುವುದು ದುಸ್ತರ ಎಂಬ ಕಾರಣಕ್ಕೆ ಪ್ರಮುಖವಾಗಿ ಸಾರಕ್ಕಿ ಕೆರೆ, ಎಲೆಮಲ್ಲಪ್ಪ ಚೆಟ್ಟಿಕೆರೆ (ಹಗಲು ಕನಸಿನ ಕೆರೆ) ಹಾಗೂ ಹುಳಿಮಾವು ಕೆರೆಯಲ್ಲಿ ಡ್ರೋನ್‌ ಬಳಕೆ ಮಾಡಲಾಗುತ್ತಿದೆ. ಒಂದು ಕೆರೆಯಲ್ಲಿ ಒಂದು ದಿನ ಡ್ರೋನ್‌ನಲ್ಲಿ ಬೀದಿ ನಾಯಿಗಳ ಗಣತಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios