ಶಾಲಾ ವಿದ್ಯಾರ್ಥಿನಿಯರಿಂದಲೇ ತರಗತಿ ನೆಲ ಒರೆಸೋ ಕೆಲಸ ಮಾಡಿಸಿದ ಶಿಕ್ಷಕಿ!
ತರಗತಿಯಲ್ಲಿ ಪಾಠ ಮಾಡುವ ಶಿಕ್ಷಕಿಯೇ ಶಾಲಾ ವಿದ್ಯಾರ್ಥಿನಿಯರಿಂದಲೇ ತರಗತಿ ನೆಲ ಒರೆಸೋ ಕೆಲಸ ಮಾಡಿಸಿದ ಘಟನೆ ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ನಡೆದಿದೆ.
ವಿಜಯಪುರ (ಜು.19): ತರಗತಿಯಲ್ಲಿ ಪಾಠ ಮಾಡುವ ಶಿಕ್ಷಕಿಯೇ ಶಾಲಾ ವಿದ್ಯಾರ್ಥಿನಿಯರಿಂದಲೇ ತರಗತಿ ನೆಲ ಒರೆಸೋ ಕೆಲಸ ಮಾಡಿಸಿದ ಘಟನೆ ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ನಡೆದಿದೆ. ಇಂಡಿ ಪಟ್ಟಣದ ಬಸ್ ನಿಲ್ದಾಣದ ಬಳಿಯ ಸರ್ಕಾರಿ ಉರ್ದು ಪಾರ್ಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಂದ ದೈಹಿಕ ಶಿಕ್ಷಕಿ ಲಲಿತಾ ತೋಟದ ನೆಲ ಒರೆಸೆಸಿದ್ದಾರೆ. ಶಾಲಾ ಆವರಣದ ನೀರಿನ ಟ್ಯಾಂಕ್‌ನಿಂದ ನೀರನ್ನು ತಂದು ವಿದ್ಯಾರ್ಥಿನಿಯರು ತರಗತಿಯ ನೆಲ ಒರೆಸಿದ ದೈಹಿಕ ಶಿಕ್ಷಕಿ ನಡೆಗೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ನಿಮ್ಮ ಮಕ್ಕಳನ್ನು ತರಗತಿ ಸ್ವಚ್ಛ ಮಾಡುವ ಕೆಲಸಕ್ಕೆ ಹಚ್ಚುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಬಡವರ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ ವಿದ್ಯಾಬ್ಯಾಸ ಮಾಡಿಸದೇ ತರಗತಿ ನೆಲ ಸ್ವಚ್ಛ ಮಾಡುವ ಕೆಲಸಕ್ಕೆ ಹಚ್ಚುತ್ತೀರಾ ಎಂದು ಶಿಕ್ಷಕಿಗೆ ತರಾಟೆ ತೆಗೆದುಕೊಂಡರಲ್ಲದೇ ಜನರ ಪ್ರಶ್ನೆಗೆ ಉತ್ತರ ನೀಡದೇ ದೈಹಿಕ ಶಿಕ್ಷಕಿ ಲಲಿತಾ ತೋಟದ ನಿಂತುಕೊಂಡಿದ್ದಾರೆ. ಇಂದು ಬೆಳಿಗ್ಗೆ ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆ ಕುರಿತು ಶಾಲಾ ಮುಖ್ಯೋಪಾಧ್ಯಾಯ ಎಂ ಕೆ ಮಕಾನದಾರ ಸರಿಯಾದ ಮಾಹಿತಿ ನೀಡದೇ ಸುಮ್ಮನಿದ್ದಾರೆ. ಇನ್ನು ಶಾಲಾ ದೈಹಿತ ಶಿಕ್ಷಕಿ ಹಾಗೂ ಮುಖ್ಯೋಪಾಧ್ಯಾಯರ ಮೇಲೆ ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ.
ಬಂಡೀಪುರದಲ್ಲೊಂದು ದಿ ಎಲಿಫೆಂಟ್ ವಿಸ್ಪರರ್ಸ್ ಕಥನ: ಅನಾಥ ಆನೆ ಮರಿಗೆ ಆಸರೆಯಾದ ಕಾವಾಡಿ ದಂಪತಿ
ಝಳಕಿಯಲ್ಲಿ ಮಳೆಗಾಗಿ ಕತ್ತೆಗಳ ಮದುವೆ: ತಾಲೂಕಿನ ಝಳಕಿ ಗ್ರಾಮಸ್ಥರು ಮಳೆಗಾಗಿ ಬುಧವಾರ ಸಂಪ್ರದಾಯದಂತೆ ಕತ್ತೆಗಳ ಮದುವೆ ಮಾಡಿದರು. ವಿಳಂಬವಾಗಿರುವ ಮುಂಗಾರು ಮಳೆ, ಹಿನ್ನಡೆ ಕಂಡಿರುವ ಬಿತ್ತನೆ ಕಾರ್ಯ, ಒಣಗಿ ಭಣಗುಡುತ್ತಿರುವ ಕೆರೆಕುಂಟೆಗಳು, ದನ ಕರುಗಳಿಗೆ, ಮೇವಿನ ಕೊರತೆ, ಜನರಿಗೆ ನೀರಿನ ಕೊರತೆಯ ನಡುವೆ ತಮ್ಮ ನಂಬಿಕೆಯಂತೆ ಗ್ರಾಮಸ್ಥರು ಕತ್ತೆಗಳನ್ನು ತಂದು ಮದುವೆ ಮಾಡಿ, ಗ್ರಾಮದಲ್ಲಿ ಮೆರವಣಿಗೆ ಮಾಡಿ ಬೇಗನೆ ಮಳೆ ಬರಲಿ ಎಂದು ಪ್ರಾರ್ಥಿಸಿದರು.
ಗ್ರಾಮದಲ್ಲಿರುವ ಶ್ರೀ ಬೀರಲಿಂಗೆಶ್ವರ ಪಲ್ಲಕ್ಕಿ ಮನೆ ಮುಂದೆ ಕತ್ತೆಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ನಂತರ ಗ್ರಾಮದ ಮಲ್ಲಿಕಾರ್ಜುನ ದೇಗುಲಕ್ಕೆ ತೆರಳಿ ನಮಿಸಲಾಯಿತು. ಆಮೇಲೆ ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ಕತ್ತೆ ಜೋಡಿ ಸಾಗುವ ದಾರಿಯಲ್ಲಿ ನೀರು ನೀಡಿ ಸ್ವಾಗತಿಸಲಾಯಿತು. ಗ್ರಾಮಸ್ಥರು ಹೆಣ್ಣು, ಗಂಡಿನ ಕಡೆಯ ನೆಂಟರಿಷ್ಟರಾಗಿ ಮದುವೆಯಲ್ಲಿ ಓಡಾಡಿ ಸಂಭ್ರಮಿಸಿದರು. ಸಂಪ್ರದಾಯ, ಸಂಸ್ಕೃತಿಗಳಿಗೆ ಅನುಗುಣವಾಗಿ ಕತ್ತೆಗಳ ಮದುವೆ ನೆರವೇರಿತು. ಮದುವೆಗೆ ಬಂದವರಿಗೆ ಭರ್ಜರಿ ಹುಗ್ಗಿಯೂಟ ಉಣಬಡಿಸಲಾಯಿತು.
ಕೆಂಪೇಗೌಡ ಪ್ರಶಸ್ತಿಗೆ ಬೆಂಗಳೂರು ವಾಸ ಕಡ್ಡಾಯ: ಬಿಬಿಎಂಪಿ
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಅಣ್ಣಪ್ಪ ತಳವಾರ, ಅಶೋಕ ಕಾಪಸೆ, ಪರಮೇಶ್ವರ ತಳವಾರ, ಹಣಮಂತ ಕೋಳಿ, ಶಂಕರಗೌಡ ಬಿರಾದಾರ, ಶ್ರೀಶೈಲ ಹಿರೇಮಠ, ತುಕಾರಾಂ ಕಾಗರ, ಯಲ್ಲಪ್ಪ ಮಾವಿನಳ್ಳಿ, ಕಲ್ಲಪ್ಪ ಶಿರಶ್ಯಾಡ, ರವಿ ಹೂಗಾರ, ರಾಗು ಕೆಂಗಾರ, ಹುಸೇನಿ ಪಾಚ್ಚಂಗೆ, ಮುರಳಿಧರ ಹೂಗಾರ, ರಾಜು ತೇಲಿ, ಸುನೀಲ ಹೂಗಾರ, ಸಂಗಪ್ಪ ಕಾಗರ, ಸಂತೋಷ ಡೊಳ್ಳಿ, ಗ್ರಾಮಸ್ಥರು ಇದ್ದರು.