ಮಂಗಳೂರು(ಜೂ. 03): ಭೂಗತ ಪಾತಕಿ ರವಿ ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಪ್ರಮುಖ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರವಿ ಪೂಜಾರಿಗೆ ಸಹಾಯ ಮಾಡುತ್ತಿದ್ದ ಗುಲಾಮನನ್ನು ಪೊಲೀಸರು ಮಂಗಳೂರಲ್ಲಿ ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಮತ್ತೋರ್ವನನ್ನು ಬಂಧಿಸಿದ ಸಿಸಿಬಿ ಪೊಲೀಸರು ಗುಲಾಮನನ್ನು ಬಂಧಿಸಿದ್ದಾರೆ. ಗುಲಾಮ ರವಿ ಪೂಜಾರಿ ಮಾಡುವ ಕೃತ್ಯಕ್ಕೆ ಸಹಾಯ ಮಾಡುತ್ತಿದ್ದ. ರವಿ ಪೂಜಾರಿ ಮಾಡುತ್ತಿದ್ದ ಸುಲಿಗೆಗೆ ಸಹಾಯ ಮಾಡುತ್ತಿದ್ದ ಗುಲಾಮ ಕೊನೆಗೂ ಮಂಗಳೂರಿನಲ್ಲಿ ಸೆರೆಯಾಗಿದ್ದಾನೆ.

ಮೊಬೈಲ್‌ ಕಂಪನಿಗಳನ್ನು ಸೆಳೆಯಲು ಕೇಂದ್ರದ ಬಿಗ್ ಆಫರ್!

ಮಂಗಳೂರಿನಲ್ಲಿ ಗುಲಾಮನನ್ನ ಬಂಧಿಸಿದ ಸಿಸಿಬಿ ಅಧಿಕಾರಿಗಳು ಮಂಗಳೂರಿನಲ್ಲಿರುವ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಸದ್ಯ ಗುಲಾಮನನ್ನ ಸಿಸಿಬಿ ಅಧಿಕಾರಿಗಳು 10 ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸಿಸಿಬಿ ಅಧಿಕಾರಿಗಳು ಗುಲಾಮನನ್ನ ವಿಚಾರಣೆಗೆ ಒಳಪಡಿಸಲಿದ್ದಾರೆ.

ಭೂಗತ ಜಗತ್ತನ್ನೇ ಬೆದರಿಸಿದ್ದ ರವಿ ಫುಜಾರಿ ಇತ್ತೀಚೆಗೆ ತನ್ನನ್ನು ಮುಂಬೈಗೆ ಕರೆದೊಯ್ಯದಂತೆ ರಚ್ಚೆ ಹಿಡಿದ ಘಟನೆಯೂ ನಡೆದಿತ್ತು. ತನಗೆ ಮುಂಬೈನಲ್ಲಿ ಜೀವ ಬೆದರಿಕೆ ಇರುವುದರಿಂದ ತನ್ನ ವಿಚಾರಣೆಯನ್ನು ಕರ್ನಾಟಕದಲ್ಲಿಯೇ ನಡೆಸಬೇಕೆಂದು ಅಂಗಲಾಚಿದ್ದ.

ರವಿ ಪೂಜಾರಿ ಕೇಸ್ ನಲ್ಲಿ ಟ್ವಿಸ್ಟ್; ಸಿಸಿಬಿಯಿಂದ ಮುತ್ತಪ್ಪ ರೈ ವಿಚಾರಣೆ

15 ವರ್ಷಗಳಿಂದ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಸೆನೆಗಲ್ ನಂಟಿತ್ತು. ಭೂಗತ ಪಾತಕಿ ರವಿ ಪೂಜಾರಿ ಕಳೆದ ವರ್ಷ ಸೆನೆಗಲ್‌ನಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದಿದ್ದ. ಪ್ರಾರಂಭದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಜತೆ ಸಂಬಂಧ ಹೊಂದಿದ್ದ ಪೂಜಾರಿ ಬಳಿಕ ದಾವೂದ್ ಇಬ್ರಾಹಿಂ ಜತೆಗೆ ಸಹ ಕೆಲಸ ಮಾಡಿದ್ದ.