Asianet Suvarna News Asianet Suvarna News

ವಿವಾದಿತ ಕಪಾಲ ಬೆಟ್ಟದಲ್ಲಿ ಸಿಸಿ ಕ್ಯಾಮೆರಾ ಅಳ​ವ​ಡಿ​ಕೆ

ವಿವಾ​ದದ ಕೇಂದ್ರ ಬಿಂದು​ವಾ​ಗಿ​ರುವ ರಾಮನಗರ ಜಿಲ್ಲೆ ಕನ​ಕ​ಪುರ ತಾಲೂ​ಕಿನ ಹಾರೋ​ಬೆಲೆ ಬಳಿಯ ಕಪಾ​ಲ​ಬೆ​ಟ್ಟದಲ್ಲಿ ಸಿಸಿ ಕ್ಯಾಮೆ​ರಾ ಅಳ​ವ​ಡಿ​ಸ​ಲಾ​ಗಿದೆ. 

CC Camera  implemented in Ramanagara Kapala Betta
Author
Bengaluru, First Published Jan 3, 2020, 9:57 AM IST
  • Facebook
  • Twitter
  • Whatsapp

ರಾಮ​ನಗರ [ಜ.03] :  ಏಸು ಪ್ರತಿಮೆ ಸ್ಥಾಪ​ನೆ​ಯಿಂದಾಗಿ ವಿವಾ​ದದ ಕೇಂದ್ರ ಬಿಂದು​ವಾ​ಗಿ​ರುವ ರಾಮನಗರ ಜಿಲ್ಲೆ ಕನ​ಕ​ಪುರ ತಾಲೂ​ಕಿನ ಹಾರೋ​ಬೆಲೆ ಬಳಿಯ ಕಪಾ​ಲ​ಬೆ​ಟ್ಟದಲ್ಲಿ ಸಿಸಿ ಕ್ಯಾಮೆ​ರಾ ಅಳ​ವ​ಡಿ​ಸ​ಲಾ​ಗಿದೆ. ಕಪಾ​ಲ​ಬೆಟ್ಟಅಭಿ​ವೃದ್ಧಿ ಟ್ರಸ್ಟ್‌ ಬೆಟ್ಟದ ಮೇಲೆ ಏಸು ಪ್ರತಿಮೆ ಸ್ಥಾಪಿ​ಸಲು ಉದ್ದೇ​ಶಿ​ಸಿ​ರುವ ಸ್ಥಳ​ದಿಂದ 50 ಮೀಟರ್‌ ದೂರ​ದ​ಲ್ಲಿಯೇ ಕಂಬದಲ್ಲಿ ಸಿಸಿ ಕ್ಯಾಮೆರಾ ಅಳ​ವ​ಡಿ​ಸಿದೆ. 

ಪ್ರತಿಮೆ ವಿವಾದದ ಸ್ವರೂಪ ಪಡೆ​ಯು​ತ್ತಿ​ದ್ದಂತೆ ಬೆಟ್ಟಕ್ಕೆ ಭೇಟಿ ನೀಡು​ವ​ವರು ಸಂಖ್ಯೆ ಹೆಚ್ಚಾ​ಗಿ​ರುವ ಹಿನ್ನೆ​ಲೆ​ಯಲ್ಲಿ ಸಿಸಿ ಕ್ಯಾಮೆರಾ ಹಾಕ​ಲಾ​ಗಿದೆ. ಅಲ್ಲದೆ, ಬೆಟ್ಟದ ಮೇಲಕ್ಕೆ ಹಾದು ಹೋಗುವ ರಸ್ತೆ​ಯನ್ನು ಅಗೆದು ಗುಂಡಿ ನಿರ್ಮಿ​ಸಿ​ರು​ವು​ದ​ರಿಂದ ವಾಹ​ನ​ಗ​ಳನ್ನು ಸಂಚ​ರಿ​ಸಲು ಸಾಧ್ಯ​ವಾ​ಗು​ತ್ತಿಲ್ಲ. ರಸ್ತೆ ಅಗೆ​ದಿ​ರು​ವು​ದ​ರಿಂದ ಬೆಟ್ಟದ ಮೇಲೆ ತೆರ​ಳಲು ಸುಮಾರು ಎರಡು ಕಿ.ಮೀ. ನಡೆ​ಯಬೇಕು. 

ಸರ್ಕಾರಿ ಗೋಮಾ​ಳ​ದಲ್ಲಿ ಏಸು ಪ್ರತಿಮೆ ಸ್ಥಾಪ​ನೆಗೆ ತೀವ್ರ ವಿರೋಧ ವ್ಯಕ್ತ​ಪ​ಡಿ​ಸಿ​ರುವ ಬಿಜೆಪಿ ಹಾಗೂ ಹಿಂದೂ ಪರ ಸಂಘ​ಟ​ನೆ​ಗಳ ಮುಖಂಡರು ಆಗಿಂದಾಗ್ಗೆ ಬೆಟ್ಟಕ್ಕೆ ಭೇಟಿ ನೀಡು​ತ್ತಲೇ ಇದ್ದಾರೆ. ಹಾಗಾಗಿ ಬೆಟ್ಟದ ಮೇಲೆ ಪೊಲೀಸ್‌ ಕಾವಲು ಹಾಕ​ಲಾ​ಗಿ​ದೆ.

ಯೇಸು ಕ್ರಿಸ್ತನ ಪೋಟೋಕ್ಕೆ ಡಿಕೆಶಿ ಮುಖ.. ಇದೆಂಥಾ ಕುಚೇಷ್ಟೆ!...

ಕನ​ಕ​ಪುರ ನೂತನ ತಹ​ಸೀ​ಲ್ದಾರ್‌ ಆಗಿ ವರ್ಷಾ ಗುರು​ವಾರ ಅಧಿ​ಕಾರ ವಹಿ​ಸಿ​ಕೊಂಡಿ​ದ್ದಾರೆ. ತಹ​ಸೀ​ಲ್ದಾರ್‌ ಹಾಗೂ ಉಪ​ವಿ​ಭಾ​ಗಾ​ಧಿ​ಕಾ​ರಿ​ಗಳು ಮೂರು ನಾಲ್ಕು ದಿನ​ದೊ​ಳಗೆ ಜಿಲ್ಲಾ​ಡ​ಳಿ​ತಕ್ಕೆ ವರದಿ ರವಾ​ನಿ​ಸ​ಲಿದ್ದು, ಆನಂತರ ಜಿಲ್ಲಾ​ಡ​ಳಿತ ವರ​ದಿ​ಯನ್ನು ಪರಿ​ಶೀ​ಲಿಸಿ ಅಂತಿ​ಮ​ವಾಗಿ ರಾಜ್ಯ ಸರ್ಕಾ​ರಕ್ಕೆ ವರದಿ ಸಲ್ಲಿಸಲಿದೆ.

Follow Us:
Download App:
  • android
  • ios