ದೆಹಲಿಯಿಂದ ಆಗಮಿಸಿದ ಸಿಬಿಐ ಅಧಿಕಾರಿಗಳು| ಬಿಎಸ್ಸೆನ್ನೆಲ್‌ ಕಚೇರಿ ಮೇಲೆ ದಿಢೀರ್‌ ದಾಳಿ| ಕಚೇರಿ ಕಡತ ಪರಿಶೀಲನೆ ನಡೆಸಿದ ಅಧಿಕಾರಿಗಳು| ಕಡತ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡ ಸಿಬಿಐ ಅಧಿಕಾರಿಗಳು|

ವಿಜಯಪುರ(ಮಾ.20): ನಗರದ ಬಿಎಸ್ಸೆನ್ನೆಲ್‌ ಕೇಂದ್ರ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಶುಕ್ರವಾರ ಸಂಜೆ ದಿಢೀರ್‌ ದಾಳಿ ನಡೆಸಿ, ಕಚೇರಿ ಕಡತ ಪರಿಶೀಲನೆ ನಡೆಸಿದ್ದಾರೆ.

ದೆಹಲಿಯಿಂದ ಆಗಮಿಸಿದ ಸಿಬಿಐ ಅಧಿಕಾರಿಗಳು ಶುಕ್ರವಾರ ಸಂಜೆ 6.30ರ ಸುಮಾರಿಗೆ ಬಿಎಸ್ಸೆನ್ನೆಲ್‌ ಕಚೇರಿ ಮೇಲೆ ದಿಢೀರ್‌ ದಾಳಿ ನಡೆಸಿದ್ದಾರೆ. 

ವಚನ ಸಾಹಿತ್ಯದ ತವರೂರು, ಗುಮ್ಮಟಗಳ ನಗರಿ ವಿಜಯಪುರ ವೈಶಿಷ್ಟ್ಯತೆಗಳ ಕಣಜ..!

ಕೇಂದ್ರ ಸರ್ಕಾರದ ಡಿಜಿಟಲ್‌ ಇಂಡಿಯಾ ಯೋಜನೆಯ ಫೈಬರ್‌ ಕೇಬಲ್‌ ಅಳವಡಿಕೆ ಯೋಜನೆ ಅಡಿ, ಪ್ರತಿ ಗ್ರಾಮ ಪಂಚಾಯತಿಗೆ ಫೈಬರ್‌ ಕೇಬಲ್‌ ಸಂಪರ್ಕ ನೀಡಬೇಕಿದ್ದ ಬಿಎಸ್ಸೆನ್ನೆಲ್‌, ಕೆಲವು ಪಂಚಾಯತಿಗಳಿಗೆ ಮಾತ್ರ ಸಂಪರ್ಕ ನೀಡಿದ್ದು, ಬಹುತೇಕ ಪಂಚಾಯತಿಗಳಿಗೆ ಬಿಲ್‌ ಪಾವತಿ ಮಾಡಿರುವುದು ಮತ್ತು ಫೈಬರ್‌ ಕೇಬಲ್‌ ಅಳವಡಿಕೆಯಲ್ಲಿ ಗುತ್ತಿಗೆದಾರರಿಂದ ಹಣ ಪಡೆದು ಅಕ್ರಮ ಎಸಗಿರುವ ಆರೋಪದ ಹಿನ್ನೆಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕುರಿತು ಸಿಬಿಐ ಅಧಿಕಾರಿಗಳು ಕಡತ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.