ಧಾರವಾಡ(ನ.20): ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಬಳಿಕ ದೀಪಾವಳಿ ನಿಮಿತ್ತ ಕೆಲ ದಿನಗಳ ಕಾಲ ತನಿಖೆಗೆ ವಿರಾಮ ಹೇಳಿದ್ದ ಸಿಬಿಐ ಅಧಿಕಾರಿಗಳು ಮತ್ತೆ ಗುರುವಾರ ತನಿಖೆ ಶುರು ಮಾಡಿದ್ದಾರೆ.

ಸಿಬಿಐ ತನಿಖಾಧಿಕಾರಿ ರಾಕೇಶ ರಂಜನ್‌ ನೇತೃತ್ವದ ತಂಡ ಬೆಳಗ್ಗೆಯಿಂದಲೇ ಹಲವರ ವಿಚಾರಣೆ ನಡೆಸಿದೆ. ಸಾಮಾನ್ಯವಾಗಿ ಇಲ್ಲಿನ ಉಪನಗರ ಪೊಲೀಸ್‌ ಠಾಣೆಯಲ್ಲಿ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಗುರುವಾರ ಬೆಳಗ್ಗೆಯಿಂದ ಸಂಜೆಯ ವರೆಗೆ ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ವಿನಯ್‌ ಕುಲಕರ್ಣಿ ಅರೆಸ್ಟ್‌: ಬಿಜೆಪಿ ವಿರುದ್ಧ ಹೆಚ್.ಕೆ. ಪಾಟೀಲ್‌ ವಾಗ್ದಾಳಿ

ಸಂಜೆ ಹೊತ್ತಿಗೆ ಮತ್ತೆ ಉಪನಗರ ಠಾಣೆಗೆ ಆಗಮಿಸಿದ ಅಧಿಕಾರಿಗಳು, ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿಗೆ ಬುಲಾವ್‌ ನೀಡಿದ್ದರು. ಒಂದು ಹಂತದಲ್ಲಿ ತನಿಖೆಯನ್ನು ಪೂರ್ಣಗೊಳಿಸಿರುವ ಅಧಿಕಾರಿಗಳು ಹಣದ ಹರಿವಿನ ಮಾಹಿತಿ ಕಲೆ ಹಾಕುತ್ತಿದ್ದು, ಇದೇ ವಿಚಾರವಾಗಿ ಗುರುವಾರವೂ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.