ಬೆಂಗಳೂರಿನ ಅರ್ಧ ಭಾಗಕ್ಕೆ ನಾಳೆ ನೀರೂ ಇಲ್ಲ, ಕರೆಂಟೂ ಇಲ್ಲ: ನಿಮ್ಮ ಏರಿಯಾ ಇದೆನಾ ನೋಡಿ
ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಬುಧವಾರ ಜಲಮಂಡಳಿಯಿಂದ ಕುಡಿಯುವ ಕಾವೇರಿ ನೀರು ಹಾಗೂ ಬೆಸ್ಕಾಂನಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ.
ಬೆಂಗಳೂರು (ಸೆ.12): ಬೆಸ್ಕಾಂನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಬುಧವಾರ ಬೆಳಗ್ಗೆ10.30 ರಿಂದ ಮಧ್ಯಾಹ್ನ 1.30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜೊತೆಗೆ, ಬೆಂಗಳೂರಿನ ಚಂದ್ರಾ ಲೇಔಟ್ ಜಲಗಾರಕ, ನೀರು ಪೂರೈಕೆಯ ಮಾರ್ಗಗಳಲ್ಲಿರುವ ಪೈಪ್ ವಾಲ್ವ್ ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಕಾವೇರಿ 4ನೇ ಹಂತದ 1ನೇ ಫೇಸ್ ನ ಮೂರು ಪಂಪ್ ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಆದ್ದರಿಂದ ನಗರದ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಯಾವ ಏರಿಯಾಗಳಲ್ಲಿ ಕರೆಂಟ್ ಇರೊಲ್ಲ: ಜಯನಗರ, ಬಿಡಿಎ ಕಾಂಪ್ಲೆಕ್ಸ್, ಚನ್ನಮ್ಮನ ಕೆರೆ ಅಚ್ಚುಕಟ್ಟು, ಪದ್ಮನಾಭನಗರ, ರಾಜೀವ್ ನಗರ, ಟಾಟಾ ಸಿಲ್ಕ್ ಫಾರ್ಮ್, ಶಾಸ್ತ್ರಿನಗರ ಸುತ್ತಮುತ್ತ ಹಲವೆಡೆ ವಿದ್ಯುತ್ ಇರುವುದಿಲ್ಲ. ಈ ಸಮಯದಲ್ಲಿ ಗ್ರಾಹಕರು ವ ಇದ್ಯುತ್ ಸರಬರಾಜು ಕಂಪನಿಯೊಂದಿಗೆ ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.
Bengaluru ಖಾಸಗಿ ವಾಹನಗಳ ಸಂಚಾರ ಬಂದ್ ಮಾಡಿದ್ದಕ್ಕೆ, ಬಿಎಂಟಿಸಿಗೆ 6 ಕೋಟಿ ರೂ. ಆದಾಯ ಬಂತು!
ಯಾವ್ಯಾವ ಪ್ರದೇಶಗಳಲ್ಲಿ ಕಾವೇರಿ ನೀರು ಬರುವುದಿಲ್ಲ: ಮಹಾಲಕ್ಷ್ಮಿ ಲೇಔಟ್, ಜೆ.ಸಿ ನಗರ ಸುತ್ತಮುತ್ತ, ಆತ್ಮೀಯ ಗೆಳೆಯರ ಬಳಗ, ಶ್ರೀರಾಮ ನಗರ, ಮುನೇಶ್ವರ ಬ್ಲಾಕ್, ಜೆ.ಎಸ್ ನಗರ, ಮಹಾಲಕ್ಷ್ಮೀ ಲೇಔಟ್ಪ, ಬೋವಿ ಪಾಳ್ಯ, ಮೈಕೊ ಲೇಔಟ್, ಗಣೇಶ ಬ್ಲಾಕ್, ರಾಜಾಜಿನಗರ 2ನೇ ಬ್ಲಾಕ್ ಸುತ್ತಮುತ್ತ, ಡಾ ರಾಜ್ ಕುಮಾರ್ ರಸ್ತೆ, ಗುಬ್ಬಣ ಇಂಡಸ್ಟ್ರಿಯಲ್ ಲೇಔಟ್, ರಾಜಾಜಿನಗರ 4ನೇ ಎನ್ & ಎಮ್ ಬ್ಲಾಕ್, ರಾಜಾಜಿನಗರ ಡಿ ಬ್ಲಾಕ್, ಪ್ರಕಾಶ್ ನಗರ ಮತ್ತು ಪ್ರಕಾಶ್ ನಗರ 3ನೇ ಹಂತ, ಸುಬ್ರಹ್ಮಣ್ಯ ನಗರ, ಗಾಯತ್ರಿ ನಗರ, ನಂದಿನಿ ಲೇಔಟ್, ಜೆ.ಸಿ.ನಗರ, ಯಶವಂತಪುರ ಎ.ಪಿ.ಎಂ.ಸಿ, ಆರ್.ಎಂ.ಸಿ ಯಾರ್ಡ್, ಗೊರಗುಂಟೆಪಾಳ್ಯ, ಗಜಾನನ ಸ್ಲಮ್ 1 ಮತ್ತು 2, ಬಸವೇಶ್ವರ ನಗರ, ಬಿ.ಎಂ.ಇ.ಎಲ್ ಲೇಔಟ್, ಎನ್.ಜಿ.ಓ.ಎಸ್ ಕಾಲೋನಿ ನೀರು ಪೂರೈಕೆಯಲ್ಲಿ ಸ್ಥಗಿತ ಉಂಟಾಗಲಿದೆ.
ಓದಿದ್ದು ಬಿಟೆಕ್ ಮಾಡ್ತಿದ್ದ ಕೆಲಸ ಮಾತ್ರ ಸೈಬರ್ ಹ್ಯಾಕ್: ಗಿಪ್ಟ್ ವೋಚರ್‌ಗೆ ಕನ್ನ ಹಾಕುವುದೇ ಕಾಯಕ
ಈಗಲೇ ನೀರು ಸಂಗ್ರಹಿಸಿಟ್ಟುಕೊಳ್ಳಿ: ಗೃಹಲಕ್ಷ್ಮೀ ಲೇಔಟ್, ಜೆಸಿ ನಗರ, ಕಮಲನಗರ, ಕುರುಬರಹಳ್ಳಿ ಹೌಸಿಂಗ್ ಬೋರ್ಡ್, ಶಾರದ ಕಾಲೋನಿ, ವ್ಯಷಭಾವತಿ ನಗರ, ಎಸ್.ಬಿ.ಐ. ಸ್ಕ್ಯಾಫ್ ಕಾಲೋನಿ, ಮಾರುತಿನಗರ, ಚಂದ್ರನಗರ, ಚೆನ್ನಿಗಪ್ಪ ಲೇಔಟ್,ವಿನಾಯಕ ನಗರ, ಗಂಗಣ್ಯ ಲೇಔಟ್, ಎ.ಕೆ ಕಾಲೋನಿ, ನಂಜಪ್ಪ ಲೇಔಟ್, ದಾಸರಹಳ್ಳಿ ಸೇರಿದಂತೆ ಹಲವೆಡೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ. ನೀರಿನ ವ್ಯತ್ಯಯ ಹಿನ್ನಲೆ ಸಾರ್ವಜನಿಕರು ನೀರು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಜಲಮಂಡಳಿಯಿಂದ ಮನವಿ ಮಾಡಲಾಗಿದೆ.