Chitradurga: ಕೋಟೆನಾಡಿನಲ್ಲಿ ರಸ್ತೆಗಳ ಮೇಲೆ ಬಿಡಾಡಿ ದನಗಳ ಹಾವಳಿಗೆ ಹೈರಾಣಾದ ಸವಾರರು!
ಕೋಟೆನಾಡಿನ ಜನತೆಗೆ ನಿತ್ಯ ತಪ್ಪುತ್ತಿಲ್ಲ ಪ್ರಾಣಿಗಳ ಕಾಟ. ಹಗಲು ಹೊತ್ತಿನಲ್ಲಿಯೇ ರಸ್ತೆ ಮೇಲೆ ಬೀದಿ ನಾಯಿಗಳು, ಬಿಡಾಡಿ ದನಗಳ ಹಾವಳಿಗೆ ರೋಸಿ ಹೋಗ್ತಿದ್ದಾರೆ ಜನರು. ಇನ್ನೂ ರಾತ್ರಿಯಾದ್ರೆ ಸಾಕು ಕಾಡು ಪ್ರಾಣಿಗಳ ಉಪಟಳಕ್ಕೆ ಬೇಸತ್ತಿರೋ ಜನರು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಜು.01): ಕೋಟೆನಾಡಿನ ಜನತೆಗೆ ನಿತ್ಯ ತಪ್ಪುತ್ತಿಲ್ಲ ಪ್ರಾಣಿಗಳ ಕಾಟ. ಹಗಲು ಹೊತ್ತಿನಲ್ಲಿಯೇ ರಸ್ತೆ ಮೇಲೆ ಬೀದಿ ನಾಯಿಗಳು, ಬಿಡಾಡಿ ದನಗಳ ಹಾವಳಿಗೆ ರೋಸಿ ಹೋಗ್ತಿದ್ದಾರೆ ಜನರು. ಇನ್ನೂ ರಾತ್ರಿಯಾದ್ರೆ ಸಾಕು ಕಾಡು ಪ್ರಾಣಿಗಳ ಉಪಟಳಕ್ಕೆ ಬೇಸತ್ತಿರೋ ಜನರು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಸ್ತೆ ಮೇಲೆ ನಮಗ್ಯಾರು ಕೇಳೋರು ಎಂದು ಅರಾಮಾಗಿ ಓಡಾಡ್ತಿರೋ ಜಾನುವಾರುಗಳು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳ ಬಳಿ.
ಕಳೆದ ಹದಿನೈದು ದಿನಗಳಿಂದಲೂ ನಿತ್ಯ ಪ್ರಾಣಿಗಳ ಕಾಟ ಜನರಲ್ಲಿ ತಲೆ ನೋವು ತಂದೊದಗಿದೆ. ಅದ್ರಲ್ಲಂತೂ ರಾತ್ರಿ ವೇಳೆ ಜಾನುವಾರುಗಳ ಹಾವಳಿ ಮಿತಿ ಮೀರಿದೆ. ಇಷ್ಟೇ ಅಲ್ಲದೇ ಚಿತ್ರದುರ್ಗ ಬಹುತೇಕ ಏರಿಯಾಗಳ ಪ್ರಮುಖ ರಸ್ತೆಗಳಲ್ಲಿಯೂ ನಿತ್ಯ ಜಾನುವಾರುಗಳ ಕಾಟಕ್ಕೆ ಜನರು ರೋಸಿ ಹೋಗಿದ್ದಾರೆ. ರಸ್ತೆಯ ಮಧ್ಯ ಭಾಗದಲ್ಲಿಯೇ ನಿತ್ಯ ಬಿಡಾರ ಹೂಡ್ತಿರೋ ಬಿಡಾಡಿ ದನಗಳು ಜನರ ನಿತ್ಯ ಸಂಚಾರಕ್ಕೆ ಅಡ್ಡಗಾಲಾಗಿವೆ. ಅನೇಕ ಬಾರಿ ಸಾರ್ವಜನಿಕರು ರಸ್ತೆ ಮೇಲೆ ವಾಹನಗಳಲ್ಲಿ ಸಂಚಾರ ಮಾಡುವ ವೇಳೆ ದನಗಳು, ಬೀದಿ ನಾಯಿಗಳು ಏಕಾಏಕಿ ವಾಹನಗಳಿಗೆ ಅಡ್ಡ ಬರೋದ್ರಿಂದ ಜನರು ರಸ್ತೆಯಲ್ಲಿ ಅಪಘಾತವಾಗಿ ಬಿದ್ದಿದ್ದಾರೆ.
ನಾವು ಕೂಡ ಎರಡು ಬಾರಿ ಬೈಕ್‌ನಿಂದ ಬಿದ್ದಿರೋ ಅನುಭವ ಆಗಿದೆ. ರಸ್ತೆ ಮೇಲೆ ರಾಜಾರೋಷವಾಗಿ ಓಡಾಡುವ, ಮಲಗುವ ಜಾನುವಾರುಗಳಿಗೆ ಕಡಿವಾಣ ಹಾಕಬೇಕಿದೆ ಅಂತಾರೆ ಬೈಕ್ ಸವಾರರೊಬ್ಬರು. ಇನ್ನೂ ಈ ಬಗ್ಗೆ ನಗರಸಭೆ ಪೌರಾಯುಕ್ತರನ್ನೇ ವಿಚಾರಿಸಿದ್ರೆ, ಈ ಬಗ್ಗೆ ನಮ್ಮ ಗಮನಕ್ಕೂ ವಿಷಯ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬಿಡಾಡಿ ದನಗಳ ಮಾಲೀಕರು ಕೆಲವರು ಅವುಗಳನ್ನು ಸಾಕುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಕೂಡಲೇ ಅವರಿಗೆ ಮಾಹಿತಿ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ರಾಜ, ರಾಜ್ಯ ಮತ್ತು ಕೇಂದ್ರವಾಗಲಿ ತೆರಿಗೆ ವಸೂಲಿ ಮಾಡಿಯೇ ಆಡಳಿತ ನಡೆಸೋದು: ಸಿಎಂ ಸಿದ್ದರಾಮಯ್ಯ
ಜೊತೆಗೆ ಪ್ರಮುಖ ರಸ್ತೆ ಮೇಲೆ ಬೆಳಗಿನ ಸಮಯದಲ್ಲಿಯೇ ಜಾನುವಾರುಗಳ ಓಡಾಟ ಕಂಡು ಬಂದಲ್ಲಿ ನಮ್ಮ ಸಿಬ್ಬಂದಿಗಳ ಮುಖಾಂತರ ವಾಹನ ಸವಾರರಿಗೆ ಯಾವುದೇ ತೊಂದರೆ ಆಗದ ರೀತಿ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ಒಟ್ಟಾರೆಯಾಗಿ ಜಾನುವಾರುಗಳ ಹಾವಳಿಗೆ ಬೆಚ್ಚಿ ಬಿದ್ದಿರೋ ನಗರದ ಜನತೆಯ ನೆಮ್ಮದಿ ಇಲ್ಲದಂತಾಗಿದೆ. ಇನ್ನಾದ್ರು ಅಧಿಕಾರಿಗಳ ಜನರ ನೆಮ್ಮದಿ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂಬುದು ಎಲ್ಲರ ಬಯಕೆ.