Asianet Suvarna News Asianet Suvarna News

ಧಾರವಾಡ: ಮೊಹರಂ ಹಬ್ಬದಲ್ಲಿ ಕಾಂಗ್ರೆಸ್ ಮುಖಂಡನ ಸಮ್ಮುಖದಲ್ಲೇ ಹಣ ತೂರಾಟ..!

ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದ ಘಟನೆ

Cash on Singer During Muharram Festival in Dharwad grg
Author
Bengaluru, First Published Aug 10, 2022, 1:19 PM IST

ಧಾರವಾಡ(ಆ.10):  ಮೊಹರಂ ಹಬ್ಬದಲ್ಲಿ ಹಣ ತೂರಾಟ ನಡೆಸಿದ ಘಟನೆ ತಾಲೂಕಿನ ಗರಗ ಗ್ರಾಮದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಸಮ್ಮುಖದಲ್ಲಿ ಹಣ ತೂರಾಟ ನಡೆದಿದೆ. 

ಕರ್ನಾಟಕ ವಿಧಾನಸಭೆ ಚುಣಾವಣೆಗೆ ಇನ್ನೂ 7 ತಿಂಗಳು ಇರುವಾಗಲೇ ತಮಾಟಗಾರ ಬೆಂಬಲಿಗ ಹಣದ ಸುರಿಮಳೆಯನ್ನೇ ಸುರಿಸಿದ್ದಾರೆ. ಹಾಡು ಹಾಡುವಾಗ ಮೆರವಣಿಗೆಯಲ್ಲಿ ಗಾಯಕನ ಮೇಲೆ ಹಣ ತೂರಾಟ ನಡೆಸಲಾಗಿದೆ. ನಗರದ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.  

ಆನ್ಲೈನ್ ಗೇಮ್ ಮೂಲಕ ಕೋಟ್ಯಂತರ ರೂ. ಹಣ ಗೆದ್ದಿದ್ದ, 1 ಕೋಟಿ‌ ನೀಡುವಂತೆ ಸ್ನೇಹಿತರಿಂದಲೇ ಕಿಡ್ನಾಪ್‌..!

ತೆರೆದ ವಾಹನದಲ್ಲಿ ಗಾಯಕ ಹಾಡುವಾಗ ಇಸ್ಮಾಯಿಲ್ ತಮಾಟಗಾರ ಬೆಂಬಲಿಗರು ಹಣ ತೂರಾಟ ನಡೆಸಿದ್ದಾರೆ. ಇಸ್ಮಾಯಿಲ್ ತಮಾಟಗಾರ ಕೂಡ ತಮ್ಮ ಬೆಂಬಲಿಗರೊಂದಿಗೆ ಹಣವನ್ನು ತೂರಾಡಿದ್ದಾರೆ. ಹಣ ತೂರಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. 

ಗ್ರಾಮೀಣ ಕ್ಷೇತ್ರದಲ್ಲಿ ಈಗಾಗಲೇ ಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಇಸ್ಮಾಯಿಲ್ ತಮಾಟಗಾರ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಬೃಹತ್ ಜನ ಜಂಗುಳಿಯ ಎದುರಲ್ಲೇ ಗಾಯಕನ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಹಣ ತೂರಾಟ ನಡೆಸಲಾಗಿದೆ. 
 

Follow Us:
Download App:
  • android
  • ios