ವಾಟಾಳ್ ನಾಗರಾಜ್ ಇದೀಗ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಎರೆಡೆರಡು ಬಾರಿ ವಿವಾದವಾಗಿದ್ದು ಈ ಸಂಬಂಧ ಇದೀಗ ಪ್ರಕರಣ ದಾಖಲಾಗಿದೆ. 

ಚಾಮರಾಜನಗರ (ಜ.18): ಚಾಮರಾಜನಗರದ ಗಡಿಭಾಗದಲ್ಲಿ ತಮಿಳು ನಾಮಫಲಕ ಕಿತ್ತು ಹಾಕಿ ವಾಟಾಳ್ ನಾಗರಾಜ್ ವಿವಾದ ಒಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಭಾನುವಾರ ಚಾಮರಾಜನಗರದ ಗಡಿಭಾಗಕ್ಕೆ ತೆರಳಿದ್ದ ವಾಟಾಳ್ ಅರಕಲವಾಡಿ ಸಮೀಪ ಎತ್ತಗಟ್ಟಿ ಬೆಟ್ಟದ ರಸ್ತೆಯಲ್ಲಿ ಹಾಕಿದ್ದ ತಮಿಳು ನಾಮಫಲಕ ಕಿತ್ತೆಸೆದರು. 

ಕೇವಲ 8 ದಿನಗಳ ಅಂತರದಲ್ಲಿ ಎರಡು ಬಾರಿ ತಮಿಳು ನಾಮಫಲಕಗಳನ್ನ ವಾಟಾಳ್ ನಾಗರಾಜ್ ಕಿತ್ತೆಸೆದಿದ್ದರು. ಕಳೆದ ವಾರ ಚಾಮರಾಜನಗರ ತಾಲೋಕು ಅಟ್ಟುಗೂಳಿಪುರದ ಬಳಿ ತಮಿಳು ನಾಮ ಫಲಕಗಳನ್ನು ಕೆಡವಿ ಹಾಕಿದ್ದರು. 

ಚಾಮರಾಜನಗರ: ನಡುರಸ್ತೆಯಲ್ಲಿ ಮಲಗಿ ವಾಟಾಳ್ ನಾಗರಾಜ್ ಪ್ರತಿಭಟನೆ

ಕರ್ನಾಟಕ ತಮಿಳುನಾಡು ಗಡಿ ಸಂಧಿಸುವ ಜಾಗದಲ್ಲಿ ಈ ಘಟನೆ ನಡೆದಿದ್ದು, ತಮಿಳುನಾಡಿಗೆ ಸೇರಿದ ಜಾಗದಲ್ಲಿ ನಾಮಫಲಕ ಕೆಡವಿರುವ ಆರೋಪ ಎದುರಾಗಿದೆ. 

ಇದೀಗ ಈ ಸಂಬಂಧ ವಾಟಾಳ್ ನಾಗರಾಜ್ ಹಾಗು ಬೆಂಬಲಿಗರ ವಿರುದ್ಧ ತಾಳವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 143, 147, 270/3(1) ಅನ್ವಯ ಕೇಸು ದಾಖಲು ಮಾಡಲಾಗಿದೆ.