ಚಾಮರಾಜನಗರ(ಜ.17):  ತಾಳವಾಡಿ ಕರ್ನಾಟಕಕ್ಕೆ ಸೇರಬೇಕೆಂದು ಆಗ್ರಹಿಸಿ ವಾಟಾಳ್ ನಾಗರಾಜ್ ಅವರು ನಡುರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ ಘಟನೆ ಇಂದು(ಭಾನುವಾರ) ನಗರದಲ್ಲಿ ನಡೆದಿದೆ.

ತಾಳವಾಡಿ ಅಚ್ಚಕನ್ನಡಿಗರ ಪ್ರದೇಶವಾಗಿದೆ. ತಮಿಳುನಾಡು ಸರ್ಕಾರ ಮೈಲುಗಟ್ಟಲೆ ಜಾಗವನ್ನ ಒತ್ತುವರಿ ಮಾಡಿಕೊಂಡಿದೆ. ಜಿಲ್ಲೆಯ ಗಡಿಭಾಗದಲ್ಲಿ ಜಂಟಿ ಸರ್ವೇ ಆಗಬೇಕು. ಗಡಿಭಾಗದಲ್ಲಿ ತಮಿಳು ನಾಮಫಲಕ ತೆರವು ಮಾಡಿದ್ದಕ್ಕೆ ನನಗೆ ತಮಿಳರಿಂದ ಬೆದರಿಕೆ ಕರೆಗಳು ಬರುತ್ತಿವೆ. ಅಮೆರಿಕಾ, ಕೆನಡಾ, ಮಲೇಶಿಯ, ತಮಿಳುನಾಡು ಸೇರಿದಂತೆ ದೇಶ ವಿದೇಶಗಳಲ್ಲಿರು ತಮಿಳರಿಂದ  ಬೆದರಿಕೆ ಕರೆ ಬರುತ್ತಿವೆ. ಈ ಬಗ್ಗೆ ದಾಖಲೆ ಸಮೇತ ಸರ್ಕಾರಕ್ಕೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ. 

3 ವರ್ಷದ ನಂತ್ರ ದೇವಾಲಯಕ್ಕೆ ಬಂದ ಆನೆ: ಪ್ರಸಾದ ತಿನ್ನಿಸಿದ IAS ಅಧಿಕಾರಿಗೆ ಟೀಕೆ

ನಾನು ಯಾವ ಬೆದರಿಕೆಗೂ ಮಣಿಯುವುದಿಲ್ಲ. ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ. ನಾನು ಹೋರಾಟವನ್ನ ಮುಂದುವರಿಸುತ್ತೇನೆ. ತಾಳವಡಿ ಕರ್ನಾಟಕಕ್ಕೆ ಸೇರಬೇಕೆಂದು ಆಗ್ರಹಿಸಿ ಫೆ. 13 ಜಿಲ್ಲೆಯ ಪುಣಜನೂರು ಬಳಿ ಗಡಿ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.