ಮಂಗಳೂರು(ಏ.18): ಮಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ನ ಲಿಫ್ಟ್‌ನಲ್ಲಿ ಉಗುಳಿ ಅವಾಂತರ ನಡೆಸಿದ ವಿಯೆಟ್ನಾಂನ ಐವರು ಪ್ರಜೆಗಳ ವಿರುದ್ಧ ನಗರ ಪೊಲೀಸರು ಶುಕ್ರವಾರ ಸಂಜೆ ಕೇಸು ದಾಖಲಿಸಿದ್ದಾರೆ.

ಅಡಕೆ ವಹಿವಾಟು ಸಲುವಾಗಿ ವಿಯೆಟ್ನಾಂ ಕಂಪನಿಯೊಂದರ ಇಬ್ಬರು ಯುವತಿಯರು ಸೇರಿದಂತೆ ಐವರು ಮಾಚ್‌ರ್‍ ಮಧ್ಯಭಾಗದಲ್ಲಿ ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ನಗರದ ಪಿವಿಎಸ್‌ ಬಳಿಯ ಅಪಾರ್ಟ್‌ಮೆಂಟ್‌ಗೆ ಆಗಮಿಸಿ ಬಾಡಿಗೆಯಲ್ಲಿ ಇದ್ದರು. ಈ ವೇಳೆ ವಿದೇಶದಿಂದ ಬಂದ ಕಾರಣ ಇವರೆಲ್ಲರನ್ನು ಅಪಾರ್ಟ್‌ಮೆಂಟ್‌ನಲ್ಲೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿತ್ತು.

ಅದಮಾರು ಮಠದಿಂದ ಕೊರೋನಾ ನಿಧಿಗೆ 55 ಲಕ್ಷ ರು. ದೇಣಿಗೆ

14 ದಿನಗಳ ನಿಗಾ ನಾಲ್ಕು ದಿನಗಳ ಹಿಂದೆ ಮುಕ್ತಾಯಗೊಂಡಿತ್ತು. ನಿಗಾದಿಂದ ಹೊರಬಂದ ಇವರು ಅಪಾರ್ಟ್‌ಮೆಂಟ್‌ನಲ್ಲೇ ಅಸಹಜ ವರ್ತನೆ ತೋರಿಸಲಾರಂಭಿಸಿದ್ದರು. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಕದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಚ್ಚರಿಕೆ ನೀಡಿದ್ದರು.

ಅಪಾರ್ಟ್‌ಮೆಂಟ್‌ನಲ್ಲಿ ಇರುತ್ತಿದ್ದ ಈ ಮಂದಿ ಪೊಲೀಸರ ಎಚ್ಚರಿಕೆ ಹೊರತೂ ತಮ್ಮ ಅಸಹಜ ವರ್ತನೆ ಮುಂದುವರಿಸಿದ್ದರು. ಅಪಾರ್ಟ್‌ಮೆಂಟ್‌ನ ಬಿ ಬ್ಲಾಕ್‌ನ 12ನೇ ಮಹಡಿಯಲ್ಲಿ ವಾಸ್ತವ್ಯ ಇದ್ದ ಇವರು ಶುಕ್ರವಾರ ಲಿಫ್ಟ್‌ನೊಳಗೆ ಉಗುಳಿ ದುರ್ವರ್ತನೆ ತೋರಿದ್ದರು. ಇದು ಲಿಫ್ಟ್‌ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಹೆಲ್ತ್‌ ಕೇರ್ ಸಿಬ್ಬಂದಿಗೆ 25 ಸಾವಿರ ಪಿಪಿಇ ಕಿಟ್ ಕೊಟ್ಟ ಬಾಲಿವುಡ್ ಬಾದ್‌ಶಾ..!

ಈ ಬಗ್ಗೆ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ಶುಕ್ರವಾರ ಕದ್ರಿ ಪೊಲೀಸರಿಗೆ ದೂರು ನೀಡಿತ್ತು. ಸ್ಥಳಕ್ಕಾಗಮಿಸಿದ ಕದ್ರಿ ಪೊಲೀಸರು ಐದು ಮಂದಿ ವಿರುದ್ಧ ಅನುಚಿತ ವರ್ತನೆಯ ಬಗ್ಗೆ ಕೇಸು ದಾಖಲಿಸಿದ್ದಾರೆ. ಅಲ್ಲದೆ ಅವರನ್ನು ಮರಳಿ ಕ್ವಾರಂಟೈನ್‌ಗೆ ಇಎಸ್‌ಐ ಆಸ್ಪತ್ರೆಗೆ ದಾಖಲಿಸಿದ್ದಾರೆ.