ಉಡುಪಿ(ಏ.18): ಇಲ್ಲಿನ ಅದಮಾರು ಮಠ ಮತ್ತು ಮಠದ ಶಿಕ್ಷಣ ಸಂಸ್ಥೆಗಳ ವತಿಯಿಂದ ಪ್ರಧಾನ ಮಂತ್ರಿ ಕೊರೋನಾ ಸಂತ್ರಸ್ತರ ನಿಧಿಗೆ 55,55,555 (ಐವತ್ತೈದು ಲಕ್ಷದ ಐವತ್ತೈದು ಸಾವಿರದ ಐನೂರ ಐವತ್ತೈದು ) ರು. ನೀಡಲಾಗಿದೆ.

ಅದಮಾರು ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶುಕ್ರವಾರ ಮಠದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈ ಮೊತ್ತದ ಚೆಕ್‌ ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಜಿ.ಜಗದೀಶ್‌, ಶಾಸಕ ಕೆ.ರಘುಪತಿ ಭಟ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ಉಪಸ್ಥಿತರಿದ್ದರು.

ಹೆಲ್ತ್‌ ಕೇರ್ ಸಿಬ್ಬಂದಿಗೆ 25 ಸಾವಿರ ಪಿಪಿಇ ಕಿಟ್ ಕೊಟ್ಟ ಬಾಲಿವುಡ್ ಬಾದ್‌ಶಾ..!

ಈಗಾಗಲೇ ಅದಮಾರು ಮಠದ ವತಿಯಿಂದ 2 ಲಕ್ಷ ರು.ಗಳನ್ನು ಪ್ರಧಾನ ಮಂತ್ರಿಯವರ ಕೊರೋನಾ ಪರಿಹಾರ ನಿಧಿಗೆ ನೀಡಲಾಗಿದೆ. ಶ್ರೀಕೃಷ್ಣ ಮಠದ ವತಿಯಿಂದ 1,000ದಷ್ಟು ದಿನವಹಿ ಸಾಮಗ್ರಿಗಳ ಕಿಟ್‌ಗಳನ್ನೂ ಹಾಗೂ ಅದಮಾರು ಮಠದ ಆಡಳಿತದಲ್ಲಿರುವ ಕುಂಜಾರುಗಿರಿ ಶ್ರೀ ದುರ್ಗಾದೇವಾಸ್ಥಾನದಿಂದ 250 ಕಿಟ್‌ಗಳನ್ನೂ ನೀಡಲಾಗಿದೆ.