ಉಡುಪಿ(ಜೂ.28): ಜೂನ್‌ 25ರಂದು ಪಡುಬಿದ್ರಿಯ ನಡ್ಸಾಲು ಗ್ರಾಮದ 42 ವರ್ಷ (ರೋಗಿ ಸಂಖ್ಯೆ 10186) ಮತ್ತು 37 ವರ್ಷ (ರೋಗಿ ಸಂಖ್ಯೆ 10187)ದ ಸಹೋದರರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು.

ಅವರಿಂದ ಮನೆಯ 1 ವರ್ಷದ ಮಗುವೂ ಸೇರಿದಂತೆ 4 ಮಂದಿಗೆ ಕೊರೋನಾ ಸೋಂಕು ಹರಡಿದೆ. ಆರಂಭದಲ್ಲಿ ಅವರು ತಾವೆಲ್ಲೂ ಹೋಗಿರಲಿಲ್ಲ, ಮನೆಯಲ್ಲಿಯೇ ಇದ್ದೆವು, ಸೋಂಕು ಹೇಗೆ ಬಂತು ಎಂಬುದು ಗೊತ್ತಿಲ್ಲ ಎಂದು ಆರೋಗ್ಯಾಧಿಕಾರಿಗಳಿಗೆ ಹೇಳಿದ್ದರು. ಆದರೆ ಅವರು ಮಂಗಳೂರು, ಉಳ್ಳಾಲ, ಬಂಟ್ವಾಳ ಮುಂತಾದ ಕಡೆಗಳಿಗೆ ಹೋಗಿ ಬಂದಿರುವುದು ಇದೀಗ ಪತ್ತೆಯಾಗಿದೆ.

ಉಳ್ಳಾ​ಲ: ಕುಟುಂಬದ ಎಲ್ಲ 17 ಮಂದಿಗೆ ಪಾಸಿ​ಟಿ​ವ್‌!

ಅವರು ತಮ್ಮ ಟ್ರಾವೆಲ್‌ ಹಿಸ್ಟರಿಯನ್ನು ಮತ್ತು ತಮ್ಮ ಪ್ರಾಥಮಿಕ ಸಂಪರ್ಕದ ಬಗ್ಗೆ ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡಿದ್ದರಿಂದ ಅವರ ಸಂಪರ್ಕಿತರನ್ನು ತಕ್ಷಣ ಪತ್ತೆ ಹಚ್ಚಲು ಸಾಧ್ಯವಾಗದೆ ಜಿಲ್ಲಾಡಳಿತಕ್ಕೆ ತೊಂದರೆಯಾಗಿತ್ತು. ಆದ್ದರಿಂದ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.