ಬಾಗಲಕೋಟೆ(ಜ.12): 2ಎ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಬಗ್ಗೆ ಅವಹೇಳನ ವಿಚಾರವಾಗಿ ಅವಹೇಳನ ಮಾಡಿದ ಮುಖಂಡನ  ವಿರುದ್ಧ ಕೇಸ್ ದಾಖಲಿಸಲಾಗಿದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಜನವರಿ 9ರಂದು ನಡೆದಿದ್ದ ಪೂರ್ವಭಾವಿ ಸಭೆ ನಡೆದಿತ್ತು. ಸಭೆಯಲ್ಲಿ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವಾಗ ಮುಖಂಡ ಮಹಾಂತೇಶ ಹಳ್ಳೂರು ಎಂಬ ವ್ಯಕ್ತಿಯೊಬ್ಬರು ಅವಹೇಳನ ಮಾಡಿದ್ದಾರೆ.

ಚಿರತೆ ದಾಳಿ ತಪ್ಪಿಸಲು ಗ್ರಾಮಸ್ಥರಿಗೆ ರೇಡಿಯಂ ಜಾಕೇಟ್

ಬ್ಯಾನರ್ ನಲ್ಲಿ ಸಂಗೊಳ್ಳಿ ರಾಯಣ್ಣ ಫೋಟೋ ಹಾಕಿದ್ದನ್ನು ವಿರೋಧಿಸಿ ಅವಹೇಳನ ಮಾಡಿದ್ದು, ಸಂಗೋಳ್ಳಿ ರಾಯಣ್ಣ ವಾಲಿಕಾರ, ಚನ್ನಮ್ಮ ಅವನ ವಾಲಿಕಾರ ಆಗೋದು ಬೇಡವೆಂದು ಅವಹೇಳನ ಮಾಡಿದ್ದಾರೆ.

ಅವಹೇಳನದ ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಮಹಾಂತೇಶ ಹಳ್ಳೂರು ವಿರುದ್ಧ ಮಹಾಂತಪ್ಪ ಉಂಡೋಡಿ ದೂರು ದಾಖಲಿಸಿದ್ದಾರೆ. ಹುನಗುಂದ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು, ಐಪಿಸಿ ಸೆಕ್ಷನ್ 1860,298,505(2) ರಡಿ ಕೇಸ್ ದಾಖಲಿಸಲಾಗಿದೆ.