*  ಸೋಂಕಿತನ ವಿರುದ್ಧವೂ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌*  ಒಮಿಕ್ರೋನ್‌ ರೂಪಾಂತರಿ ಸೋಂಕು ಪತ್ತೆಯಾದ ವ್ಯಕ್ತಿ ಈತ*  ಈ ಸಂಬಂಧ ಪೊಲೀಸರಿಗೆ ದೂರು ನೀಡಿದ ಬಿಬಿಎಂಪಿ ವೈದ್ಯಾಧಿಕಾರಿ  

ಬೆಂಗಳೂರು(ಡಿ.08): ಕೊರೋನಾ(Coronavirus) ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದ ದಕ್ಷಿಣ ಆಫ್ರಿಕಾ(South Africa) ಪ್ರಜೆಯನ್ನು ಹೋಟೆಲ್‌ನಿಂದ ಬಿಟ್ಟು ಕಳುಹಿಸಿದ ಆರೋಪದಡಿ ಖಾಸಗಿ ಐಷಾರಾಮಿ ಹೋಟೆಲ್‌ವೊಂದರ ಆಡಳಿತ ಮಂಡಳಿ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌(FIR) ದಾಖಲಾಗಿದೆ. ಬಿಬಿಎಂಪಿ(BBMP) ವೈದ್ಯಾಧಿಕಾರಿ ಡಾ.ಎಂ.ನವೀನ್‌ ಕುಮಾರ್‌ ನೀಡಿದ ದೂರಿನ ಮೇರೆಗೆ ಸಾಂಸ್ಥಿಕ ಕ್ವಾರಂಟೈನ್‌ನಿಂದ(Quarantine) ಪರಾರಿಯಾಗಿರುವ 66 ವರ್ಷದ ದಕ್ಷಿಣ ಆಫ್ರಿಕಾ ಪ್ರಜೆ ಹಾಗೂ ಖಾಸಗಿ ಐಷಾರಾಮಿ ಹೋಟೆಲ್‌(Hotel) ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರಜೆ ನ.20ರಂದು ದಕ್ಷಿಣ ಆಫ್ರಿಕಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Kempegowda International Airport) ಬಂದಿದ್ದರು. ಈ ವೇಳೆ ಕೊರೋನಾ ಸೋಂಕು ಪರೀಕ್ಷೆಗೆ ಮಾಡಿದಾಗ ಸೋಂಕಿರುವುದು ದೃಢಪಟ್ಟಿತ್ತು. ಬಳಿಕ ಈ ವ್ಯಕ್ತಿಗೆ ಒಮಿಕ್ರೋನ್‌(Omicron) ಸೋಂಕಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಕೊರೋನಾ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆಯನ್ನು 14 ದಿನಗಳ ಕಾಲ ಖಾಸಗಿ ಹೋಟೆಲ್‌ನ ಪ್ರತ್ಯೇಕ ಕೋಣೆಯಲ್ಲಿ ಕ್ವಾರಂಟೈನ್‌ ಮಾಡಿದ್ದರು. ಆದರೆ, ಹೋಟೆಲ್‌ ಆಡಳಿತ ಮಂಡಳಿ ಪಾಲಿಕೆ ಆರೋಗ್ಯಾಧಿಕಾರಿ ಗಮನಕ್ಕೆ ತರದೆ ನ.27ರ ಮಧ್ಯಾಹ್ನ ಸೋಂಕಿತನನ್ನು ಹೋಟೆಲ್‌ನಿಂದ ಕಳುಹಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Omicron Threat: ಕೊರೋನಾ ಲಸಿಕೆ ಪಡೆಯದವರಿಗೆ ಮನೆ ಮನೆ ಹುಡುಕಾಟ..!

ಈ ಬಗ್ಗೆ ಹೋಟೆಲ್‌ ಆಡಳಿತ ಮಂಡಳಿಯನ್ನು ವಿಚಾರಿಸಿದಾಗ, ದಕ್ಷಿಣ ಆಫ್ರಿಕಾ ಪ್ರಜೆ ಕೊರೋನಾ ನೆಗೆಟಿವ್‌ ವರದಿ ತೋರಿಸಿದ್ದಕ್ಕೆ ಹೋಟೆಲ್‌ನಿಂದ ಹೊರಹೋಗಲು ಅವಕಾಶ ನೀಡಿದ್ದಾಗಿ ಹೇಳಿದ್ದಾರೆ. ಹೀಗಾಗಿ ಕೊರೋನಾ ಸೋಂಕಿತ ಹಾಗೂ ಈ ಹೋಟೆಲ್‌ ಆಡಳಿತ ಮಂಡಳಿ ಕೊರೋನಾ ಸಾಂಕ್ರಾಮಿಕ ಸಾರ್ವಜನಿಕವಾಗಿ ಹರಡಲು ಕಾರಣರಾಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರಿಟನ್ನಿಂದ ಬಂದ ಸೋಂಕಿತ ಮಹಿಳೆ ದಿಲ್ಲಿಯಿಂದ ಎಸ್ಕೇಪ್‌!

ಬ್ರಿಟನ್‌ನಿಂದ(Britain) ದೆಹಲಿಗೆ(Delhi) ಆಗಮಿಸಿದ ಮಹಿಳೆಯೊಬ್ಬರಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಆಕೆ ದೆಹಲಿಯ ಕ್ವಾರಂಟೈನ್‌ ಕೇಂದ್ರದಿಂದ ಪರಾರಿಯಾಗಿ ಆಂಧ್ರಪ್ರದೇಶದಲ್ಲಿ(Andhra Pradesh) ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ 2020ರ ಡಿ.25 ರಂದು ನಡೆದಿದೆ.

ಡಿ.21ರಂದು ಬ್ರಿಟನ್‌ನಿಂದ ಶಿಕ್ಷಕಿಯೊಬ್ಬರು ದೆಹಲಿಗೆ ಆಗಮಿಸಿದ್ದರು. ಕೊರೋನಾ ಟೆಸ್ಟ್‌ನಲ್ಲಿ ಆಕೆಗೆ ಪಾಸಿಟಿವ್‌ ಬಂದಿದ್ದರಿಂದ ಕ್ವಾರಂಟೈನ್‌ ಕೇಂದ್ರದಲ್ಲಿರಿಸಲಾಗಿತ್ತು. ಆದರೆ, ತನ್ನನ್ನು ಕರೆದುಕೊಂಡು ಹೋಗಲು ಆಂಧ್ರಪ್ರದೇಶದಿಂದ ಬಂದಿದ್ದ ಮಗನ ಜೊತೆಗೆ ಆಕೆ ಅಲ್ಲಿಂದ ಪರಾರಿಯಾಗಿದ್ದರು.

ನಂತರ ಅವರು ಎಪಿ ಎಕ್ಸ್‌ಪ್ರೆಸ್‌ ರೈಲಿನ(Train) ಫಸ್ಟ್‌ ಕ್ಲಾಸ್‌ ಬೋಗಿಯಲ್ಲಿ ಆಂಧ್ರಕ್ಕೆ ಪ್ರಯಾಣಿಸಿದ ವಿಷಯವನ್ನು ದೆಹಲಿ ಪೊಲೀಸರು ಆಂಧ್ರಪ್ರದೇಶದ ಪೊಲೀಸರಿಗೆ ತಿಳಿಸಿದ್ದರು. ಮತ್ತೆ ಆಕೆ ಮತ್ತು ಮಗ ರಾಜಮಹೇಂದ್ರವರಮ್‌ಗೆ ಬಂದಿಳಿಯುತ್ತಿದ್ದಂತೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಆಸ್ಪತ್ರೆಗೆ(Hospital) ದಾಖಲಿಸಿದ್ದರು.

Omicron variant : ಎಚ್ಚರ ತಪ್ಪಿದರೆ 3 ನೇ ಅಲೆ, ಅಂಕಿ ಅಂಶ ನೋಡಿ!

ಕ್ವಾರಂಟೈನ್‌ನಿಂದ ಎಸ್ಕೇಪ್‌ ಆದ​ವರ ಪತ್ತೆ, ಮತ್ತೆ ಕ್ವಾರಂಟೈ​ನ್‌

ಪ್ರತ್ಯೇಕ ಪ್ರಕರಣಗಳಲ್ಲಿ ಬೆಳಗಾವಿ(Belagavi) ಮತ್ತು ಬಾಗಲಕೋಟೆ(Bagalkot) ಜಿಲ್ಲೆಯ ಕ್ವಾರಂಟೈನ್‌ ಕೇಂದ್ರಗಳಿಂದ ಪರಾರಿಯಾಗಿದ್ದ ಮಹಿಳೆ ಸೇರಿ ಇಬ್ಬರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅವರನ್ನು ಕ್ವಾರಂಟೈನ್‌ ಮಾಡಿದ ಘಟನೆ 2020 ರ ಮೇ.25 ರಂದು ನಡೆದಿತ್ತು.

ಮಹಾರಾಷ್ಟ್ರದಿಂದ(Maharashtra) ಪೆರೋಲ್‌ ಮೇಲೆ ಬಿಡುಗಡೆಯಾಗಿದ್ದ ಗಂಡನನ್ನು ನೋಡಲು ಗೋಕಾಕಿನ(Gokak) ಕ್ವಾರೈಂಟನ್‌ ಕೇಂದ್ರದಿಂದ ಪರಾರಿಯಾಗಿದ್ದ ಗೋಕಾಕ ತಾಲೂಕಿನ ಪಂಜಾನಟ್ಟಿಯ ಮಹಿಳೆಯನ್ನು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದದಲ್ಲಿ ಪತ್ತೆ ಹಚ್ಚಿದ ಪೊಲೀಸರು ಮಗು, ಪತಿ ಸಮೇತ ಕ್ವಾರಂಟೈನ್‌ ಮಾಡಿದ್ದರು. 

ಇನ್ನು ಬಾಗಲಕೋಟೆಯ ಹುನಗುಂದದ(Hungund) ಕ್ವಾರಂಟೈನ್‌ ಕೇಂದ್ರದಿಂದ ನಾಪತ್ತೆಯಾಗಿದ್ದ ವ್ಯಕ್ತಿಯಲ್ಲಿ ವಿಜಯಪುರ(Vijayapura) ಜಿಲ್ಲೆಯ ಕನಕಲ್ಲ ಗ್ರಾಮದಲ್ಲಿ ಪತ್ತೆ ಹಚ್ಚಿದ ಪೊಲೀಸ್‌ರು ಮತ್ತೆ ಕ್ವಾರಂಟೈನ್‌ ಮಾಡಿ ಪ್ರಕರಣ ದಾಖಲಿಸಿದ್ದರು.