ದೇವನಹಳ್ಳಿ : ವಿಮಾನ ನಿಲ್ದಾಣದಲ್ಲಿ ದಾಖಲೆ ಪ್ರಮಾಣದ ಸರಕು ಸಾಗಣೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸರಕು ಸಾಗಣೆಯಲ್ಲಿ ದಾಖಲೆಯನ್ನು ಬರೆದಿದೆ. ಹಿಮದಿನ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸರಕು ಸಾಗಣೆಯಾಗಿದೆ.
ದೇವನಹಳ್ಳಿ (ಜ.21): ಕಳೆದ 12 ವರ್ಷಗಳ ಹಿಂದೆ ಆರಂಭವಾದ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 2020ರ ಹೊತ್ತಿಗೆ 33,053 ಮೆಟ್ರಿಕ್ ಟನ್‌ಗಳಷ್ಟುಹೊರರಾಜ್ಯಗಳಿಗೆ ಹಾಗೂ ಹೊರದೇಶಗಳಿಗೆ ದಾಖಲೆಯ ಸರಕು ಸಾಗಣೆ ಆಗಿದೆ ಎಂದಿ ಬಿಐಎಎಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸತತ ನಾಲ್ಕು ತಿಂಗಳಲ್ಲಿ ಹಿಂದಿನ ವರ್ಷದ ಸಾಧನೆಯ ಶೇ. ನೂರರಷ್ಟುತಲುಪಿದ ಭಾರತದ ಏಕೈಕ ವಿಮಾನ ನಿಲ್ದಾಣವಾಗಿದೆ. ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರ ಮಂಡಳಿ ಹಣಕಾಸು ಇಲಾಖೆ ಮತ್ತು ವಿಮಾನ ನಿಲ್ದಾಣದ ಸರಕು ಪ್ರಕ್ರಿಯೆ ಪಾಲುದಾರರಾದ ಏರ್ ಇಂಡಿಯಾ ಸ್ಯಾಟ್ಸ್ ಮತ್ತು ಮೆಂಜೀಸ್ ಏವಿಯೇಷನ್ ಸಂಸ್ಥೆ ಇವರ ಸಮನ್ವಯದಲ್ಲಿ ಕೆಲಸ ಮಾಡುತ್ತಲಿದೆ.
ಉಚಿತ ಬಸ್ ಸೇವೆ: ಎಲ್ಲಿಂದ - ಎಲ್ಲಿಗೆ ..?
ಸೆಪ್ಟೆಂಬರ್ ಮತ್ತು ಡಿಸೆಂಬರ್ 20ರ ನಡುವೆ ವರ್ಷದಿಂದ ವರ್ಷಕ್ಕೆ ಆಧಾರದಲ್ಲಿ ಶೇ. ನೂರರಷ್ಟುನ್ನು ತಲುಪಿದ ಏಕೈಕ ವಿಮಾನ ನಿಲ್ದಾಣವಾಗಿದೆ. ಡಿ. 20ರಲ್ಲಿ 20288 ಮೆ. ಟನ್‌ಗಳೊಂದಿಗೆ ಅಂ. ರಾ. ಸರಕು ಸಾಗಣೆ ಪ್ರಮಾಣ ಶೇ. 70ರಷ್ಟುಬೆಳವಣಿಗೆ ಕಂಡಿದೆ ಅಲ್ಲದೆ ಇದು ಕಳೆದ 21 ತಿಂಗಳಲ್ಲಿ ಅತ್ಯುನ್ನತ ಪ್ರಮಾಣವಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ