ದಗದಗಿಸಿ ಉರಿದ ಮಹದೇಶ್ವರ ಭಕ್ತರ ಕಾರು : 6 ಮಂದಿಗೆ ಗಂಭೀರ ಗಾಯ
- ಮಾದಪ್ಪನ ದರ್ಶನಕ್ಕೆ ತೆರಳುತ್ತಿದ್ದವರ ಕಾರು ಬೆಂಕಿಗಾಹುತಿ
- ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿಗೆ ಗಂಭೀರ ಗಾಯ
- ಚಾಮರಾಜನಗರ ಜಿಲ್ಲೆಯ ಹನೂರು ತಾ. ಮಹದೇಶ್ವರ ಬೆಟ್ಟದ ಸಮೀಪ ಘಟನೆ
ಚಾಮರಾಜನಗರ (ಜು.12): ಮಾದಪ್ಪನ ದರ್ಶನಕ್ಕೆ ತೆರಳುತ್ತಿದ್ದವರ ಕಾರು ಬೆಂಕಿಗಾಹುತಿಯಾಗಿದೆ. ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿಗೆ ಗಂಭೀರ ಗಾಯವಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾ. ಮಹದೇಶ್ವರ ಬೆಟ್ಟದ ಸಮೀಪದ ತಾಳಬೆಟ್ಟದಲ್ಲಿ ಭಾನುವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ.
ಬೆಂಕಿ ಹೊತ್ತಿಕೊಂಡು ಕಾರು ದಗದಗಿಸಿ ಉರಿದಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಬಾಯ್‌ಫ್ರೆಂಡ್ ಕೆಲಸದಿಂದ ತೆಗೆದ ಕಂಪನಿಗೆ ಬೆಂಕಿ ಇಟ್ಟ ಗರ್ಲ್‌ಫ್ರೆಂಡ್!
ಅಷ್ಟರಲ್ಲಾಗಲೇ ಕಾರು ಬಹುತೇಕ ಸುಟ್ಟು ಹೋಗಿದ್ದು, ಮೈಸೂರು ಮೂಲದ ಬಸವರಾಜು (23), ಗಣೇಶ್ (23), ನವೀನ್(23), ಪ್ರತಾಪ್(25), ಶ್ರೀನಿವಾಸ್(25), ಅಜಯ್(22) ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.
ಮಲೆ ಮಹದೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.