Gadag: ಭಾರತೀಯ ಸೇನೆ ಸೇರಬೇಕೆಂಬ ಕನಸು ಕಂಡವರ ಕಣ್ಣಲ್ಲೀಗ ಆತಂಕ: ಪರೀಕ್ಷೆ ನಡೆಸಿ ದೇಶ ಸೇವೆಗೆ ಅವಕಾಶ ಮಾಡಿಕೊಡಿ!
ಅವರೆಲ್ಲ ಸೈನ್ಯ ಸೇರಿ ದೇಶ ಸೇವೆ ಮಾಡ್ಬೇಕು ಅಂತಾ ಕನಸು ಕಂಡವರು. ಕೇವಲ ಕನಸು ಕಾಣೋದಲ್ದೆ, ಹಗಲು ರಾತ್ರಿ ಪರಿಶ್ರಮ ಪಟ್ಟು ಸಿದ್ಧತೆ ಮಾಡ್ಕೊಂಡವರು. ಭಾರತೀಯ ಸೇನೆ ನಡೆಸಿದ ಮೆಡಿಕಲ್ ಹಾಗೂ ಫಿಜಿಕಲ್ ಪರೀಕ್ಷೆಯಲ್ಲಿ ಪಾಸ್ ಕೂಡ ಆಗಿದಾರೆ.
ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ (ಮೇ.27): ಅವರೆಲ್ಲ ಸೈನ್ಯ ಸೇರಿ ದೇಶ ಸೇವೆ ಮಾಡ್ಬೇಕು ಅಂತಾ ಕನಸು ಕಂಡವರು. ಕೇವಲ ಕನಸು ಕಾಣೋದಲ್ದೆ, ಹಗಲು ರಾತ್ರಿ ಪರಿಶ್ರಮ ಪಟ್ಟು ಸಿದ್ಧತೆ ಮಾಡ್ಕೊಂಡವರು. ಭಾರತೀಯ ಸೇನೆ ನಡೆಸಿದ ಮೆಡಿಕಲ್ ಹಾಗೂ ಫಿಜಿಕಲ್ ಪರೀಕ್ಷೆಯಲ್ಲಿ ಪಾಸ್ ಕೂಡ ಆಗಿದಾರೆ. ಆದ್ರೂ ಸೇನೆ ಸೇರುವ ಕನಸು ಇನ್ನೂ ಈಡೇರಿಲ್ಲ. ಯೂನಿಫಾರ್ಮ್ ಹಾಕ್ಕೊಂಡು ದೇಶ ಸೇವೆಯಲ್ಲಿ ಇರಬೇಕಾಗಿದ್ದ ಆ ಯುವಕರೂ ಈಗ್ಲೂ ಬೀದಿ ಅಲೀತಿದಾರೆ. ಹೌದು! ಬರೋಬ್ಬರಿ ವರ್ಷದ ಹಿಂದೆ ಗದಗ ನಗರದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತೀಯ ಸೇನೆ ನಡೆಸಿದ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಸೇನೆ ಸೇರುವ ಉಮೇದಿನಲ್ಲಿದ್ದಾರೆ.
ಆದ್ರೆ ಈಗ್ಲೂ ಲಿಖಿತ ಪರೀಕ್ಷೆ ನಡೆದಿಲ್ಲ. ಇದ್ರಿಂದಾಗಿ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.. ಅಭ್ಯರ್ಥಿಗಳ ವಯೋಮಿತಿ ಮೀರಿ ಹೋಗ್ತಿರೋದ್ರಿಂದ ಸೇನೆ ಸೇರಿವ ಕನಸು ಕನಸಾಗೇ ಉಳಿಯುತ್ತಾ ಅಂತಾ ಅಭ್ಯರ್ಥಿಗಳು ಆತಂಕ ವ್ಯಕ್ತ ಪಡಸ್ತಿದಾರೆ. ಅಂದಹಾಗೆ, ಮಂಗಳೂರು ಆರ್ಮಿ ರಿಕ್ರೂಟ್ಮೆಂಟ್ ಆಫೀಸ್ (ARO) ನಡೆಸಿದ ಸೇನಾ ರ್ಯಾಲಿಗೆ 2019/20 ಸಾಲಿನಲ್ಲಿ ಅಪ್ಲಿಕೇಶನ್ ಹಾಕಿದ್ದ ಗದಗ ಅಭ್ಯರ್ಥಿಗಳು ಮಾರ್ಚ್ 2021 ರಲ್ಲಿ ನಡೆದ ಫಿಜಿಕಲ್ ಪರೀಕ್ಷೆಯಲ್ಲಿ 400ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿದ್ರು. ಜೆಡಿ(ಜನರಲ್ ಡ್ಯೂಟಿ) ಟೆಕ್ನಿಕಲ್, ನರ್ಸಿಂಗ್, ಟ್ರೇಡ್ ಮ್ಯಾನ್, ಕ್ಲರ್ಕ್, ವಿಭಾಗದಲ್ಲಿ ಅಭ್ಯರ್ಥಿಗಳು ಪ್ರವೇಶ ಬಯಸಿದ್ರು.
ಟಿಫನ್ ಮಾಡಲು ಬಂದ ಅಧಿಕಾರಿಗಳು, ಸರ್ವ್ ಮಾಡಲು ಬಂದ ಬಾಲ ಕಾರ್ಮಿಕನ ರಕ್ಷಣೆ
17 ರಿಂದ 23 ವಯೋಮಿತಿ ಹೊಂದಿರುವ ವಿವಿಧ ವಿಭಾಗಳಲ್ಲಿ ಕೆಲಸ ಮಾಡಲು ತರಬೇತಿಯನ್ನ ಪಡೆದು ತಯಾರಿ ನಡೆಸಿದಾರೆ ಧಾರವಾಡ, ವಿಜಯಪುರ ಜಿಲ್ಲೆಯಲ್ಲಿ ನಡೆಯುವ ಸೇನಾ ತರಬೇತಿ ಸಂಸ್ಥೆಗಳಲ್ಲಿ ಹಣ ವೆಚ್ಚಮಾಡಿ ವಿಶೇಷ ತರಬೇತಿಯನ್ನೂ ಪಡೆದಿದಾರೆ. ಫಿಜಿಕಲ್, ಮೆಡಿಕಲ್ ಪಾಸ್ ಆಗಿರೋ ಅಭ್ಯರ್ಥಿಗಳಿಗೆ ಪ್ರವೇಶಾತಿ ಪರೀಕ್ಷೆ ಈವರೆಗೂ ನಡೆಸಿಲ್ಲ. ಏಜ್ ಲಿಮಿಟ್ ಎಲ್ಲಿ ಕ್ರಾಸ್ ಆಗುತ್ತೋ ಅನ್ನೋ ಆತಂಕ ಈಗ ಅಭ್ಯರ್ಥಿಗಳನ್ನ ಕಾಡ್ತಿದೆ. ಹೀಗಾಗಿ ಮುಂದೇನು ಅನ್ನೋ ಪ್ರಶ್ನೆ ಇವ್ರನ್ನ ಕಾಡ್ತಿದೆ. ಕೊರೊನಾ ಹಾಗೂ ಪ್ರಕೃತಿ ವೈಪರಿತ್ಯದಿಂದ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ ಅಂತಾ ಹೇಳಲಾಗ್ತಿದೆ.
ಆದ್ರೆ, ಅಭ್ಯರ್ಥಿಗಳಿಗೆ ಯಾವುದೇ ಸ್ಪಷ್ಟ ಮಾಹಿತಿ ಸಿಗ್ತಿಲ್ಲ. ಅನೇಕ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳು ಸೇನೆ ಸೇರಲೇಬೇಕು ಅಂತಾ ತಾಲೀಮು ನಡೆಸಿ ಈಗ ದಾರಿಕಾಣದಾಗಿದೆ ಅಂತಾ ಅಸಹಾಯಕತೆ ವ್ಯಕ್ತ ಪಡೆಸ್ತಿದ್ದಾರೆ. ವಿಷ್ಯ ತಿಳಿದಿರೋ ಮಾಜಿ ಸೈನಿಕರ ತಂಡ ಅಭ್ಯರ್ಥಿಗಳ ನೆರವಿಗೆ ಬಂದಿದೆ.. ಅವರ ಅಹವಾಲನ್ನ ಸರಕಾರಕ್ಕೆ ಪತ್ರದ ಮೂಲಕ ಮುಟ್ಟಿಸಲು ಮುಂದಾಗಿದೆ. ಸೇನೆ ರ್ಯಾಲಿಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಸಬೇಕು. ಅಲ್ಲದೇ ಕೂಡಲೇ ಪರೀಕ್ಷೆ ನಡೆಸ್ಬೇಕು ಅಂತಾ ಪತ್ರ ಬರೆದು ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನೂ ಮಾಡಿದೆ.
ಗದಗ: ಆಂಟಿ ಮೋಹಕ್ಕೆ ಸಿಲುಕಿದ ರೌಡಿಶೀಟರ್: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಪಾಲಿಗೆ ವಿಲನ್!
ಕೊವಿಡ್ ಕಾರಣದಿಂದ ರಾಜ್ಯದ ಬೆಳಗಾವಿ, ಬೆಂಗಳೂರು, ಆರ್ಮಿ ರಿಕ್ರೂಟ್ಮೆಂಟ್ ಆಫೀಸ್‌ನಿಂದಲೂ ರ್ಯಾಲಿಗಳು ನಡೆದಿಲ್ಲ. ಮತ್ತೊಂದ್ಕಡೆ ಮಂಗಳೂರು ARO ನಿಂದ ನಡೆದ ರ್ಯಾಲಿಯಲ್ಲಿ ಕೇವಲ ಫಿಜಿಕಲ್ ಪರೀಕ್ಷೆ ನಡೆಸಿ ಲಿಖಿತ ಪರೀಕ್ಷೆ ನಡೆಸದೇ ಹಾಗೇ ಬಿಡಲಾಗಿದೆ, ಜೆನರಲ್ ಡ್ಯೂಟಿ ಜವಾನ್ ಆಗುವ ಮೂಲಕ ಉನ್ನತ ಹುದ್ದೆ ಏರಬೇಕು, ದೇಶ ಸೇವೆ ಮಾಡ್ಬೇಕು ಅನ್ನೋ ಕನಸು ಕಂಡ ಕಂಡ ನೂರಾರು ಕಂಗಳಲ್ಲಿ ಈಗ ಬರೀ ಪ್ರಶ್ನಾರ್ಥಕ ಚಿನ್ನೆ ಕಾಣ್ತಿದೆ. ಸರ್ಕಾರ, ಸೇನೆ ಈ ಬಗ್ಗೆ ಗಮನ ಹರಿಸಿ ಪರೀಕ್ಷೆ ನಡೆಸುವ ಮೂಲಕ ನೂರಾರು ಅಭ್ಯರ್ಥಿಗಳ ಕನಸು ನನಸಾಗುವಂತೆ ಮಾಡ್ಬೇಕಿದೆ.