ಟಿಫನ್ ಮಾಡಲು ಬಂದ ಅಧಿಕಾರಿಗಳು, ಸರ್ವ್ ಮಾಡಲು ಬಂದ ಬಾಲ ಕಾರ್ಮಿಕನ ರಕ್ಷಣೆ

* ಗದಗ ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಬಾಲಕಾರ್ಮಿಕನ ಬಳಕೆ
* ಸರ್ವ್ ಮಾಡಲು ಬಂದ ಬಾಲಕನನ್ನು ರಕ್ಷಿಸಿದ ಅಧಿಕಾರಿಗಳು
* ಬಾಲಕನನ್ನ ರಕ್ಷಿಸಿ ಶಾಲೆಗೆ ಸೇರಿಸುವಂತೆ ತಾಕೀತು..!

Officers recuses child labour Who Came Surve In hotel at gadag rbj

ವರದಿ: ಗಿರೀಶ್ ಕುಮಾರ್

ಗದಗ, (ಮೇ.26):
ನಗರದ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾದ ಶಿವಾನಿ ವೆಜ್ ಹೋಟೆಲ್ ಗೆ ಹೋಗಿದ್ದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯ ಟೇಬಲ್ ಗೆ ಅಪ್ರಾಪ್ತ ಬಾಲಕ ಸರ್ವ್ ಮಾಡಲು ಮುಂದಾಗಿದ್ದ, ಸದ್ಯ ಬಾಲಕನ್ನ ರಕ್ಷಿಸಿ ಕುಟುಂಬಸ್ಥರ ಸುಪರ್ದಿಗೆ ಒಪ್ಪಿಸಲಾಗಿದೆ.

ಕಚೇರಿ ಕೆಲಸದ ಮಧ್ಯೆ ಮಕ್ಕಳ ರಕ್ಷಣಾ ಘಟಕದ ಡಿಸಿಪಿಒ ಅನುಪಮಾ ಅವರು ಸಿಬ್ಬಂದಿಯೊಂದಿಗೆ ತಿಂಡಿ ತಿನ್ನೋದಕ್ಕೆ ಹೋಟೆಲ್ ಗೆ ಹೋಗಿದ್ರು.. ಈ ವೇಳೆ ಅವರ ಟೇಬಲ್ ಗೆ ಬಾಲಕನೋರ್ವ ಸರ್ವ್ ಮಾಡಿದ್ದ. ಈ ವೇಳೆ ವಿಚಾರಿಸಿದಾಗ ಬಾಲಕನಿಗೆ 15 ವರ್ಷ ಅಂತಾ ತಿಳಿದು ಬಂದಿದೆ‌. ಕೂಡಲೇ ವಿಷಯವನ್ನ ಕಾರ್ಮಿಕರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯ್ತು. 

ಲೇಬರ್ ಇನ್ಸಪೆಕ್ಟರ್ ಗಿರೀಶ್ ಬಂಕದಮನಿ, ಬಾಲ ಕಾರ್ಮಿಕರ ಯೋಜನಾ ನಿರ್ದೇಶಕ ಸಂದೇಶ ಪಾಟೀಲ ಸ್ಥಳಕ್ಕೆ ಬಂದಿದ್ರು.. ಹೋಟೆಲ್ ಮ್ಯಾನೇಜರ್, ಬಾಲಕನಿಂದ ಮಕ್ಕಳ ಘಟಕ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕಿದೆ.. ಅಲ್ದೆ, ಬಾಲಕನ್ನ ಶಾಲೆಗೆ ಸೇರಿಸಿ ದಾಖಲಾತಿಗಳನ್ನ ಒದಗಿಸುವಂತೆ ತಾಕೀತು ಮಾಡಿದ್ದಾರೆ.. 

Gadag: ಮುಸ್ಲಿಂ ಬಾಬಾನಿಂದ ಲಿಂಗಪೂಜೆ.. ಹಿಂದೂ ದೇವರ ಆರಾಧನೆ!

 ಕೆಲಸ ಮಾಡುತ್ತಿದ್ದ ಅಣ್ಣನನ್ನ ಭೇಟಿಯಾಗಲು ಬಂದಿದ್ದ ಬಾಲಕ..!?
ಧಾರವಾಡ ಮೂಲದ 15 ವರ್ಷದ ಬಾಲಕ ಕಳೆದ ಕೆಲ ದಿನಗಳಿಂದ ಹೋಟೆಲ್ ನಲ್ಲಿ ಕೆಲಸ ಮಾಡ್ತಿದ್ನಂತೆ.. ಹೋಟೆಲ್ ನಲ್ಲಿ ಬಾಲಕ ನೆಲ ಸ್ವಚ್ಛಗೊಳಿಸುವ ಕೆಲಸ ಮಾಡ್ತಿದ್ದ ಅಂತಾ ಪ್ರತ್ಯಕ್ಷ ದರ್ಶಿಗಳು ಹೇಳ್ತಿದಾರೆ..  ಆದ್ರೆ, ಅಧಿಕಾರಿಗಳ ಎದ್ರು ಹೋಟೆಲ್ ಮ್ಯಾನೇಜರ್ ನಮ್ಮಲ್ಲಿ ಧಾರವಾಡ ಮೂಲದ ಬಾಲು ಎಡಗೆ ಎಂಬ ವ್ಯಕ್ತಿ ಕೆಲಸ ಮಾಡ್ತಿದ್ದಾನೆ.. ಆತನ ಸಹೋದರನಾಗಿರೋ ಈ ಬಾಲಕ ಅಣ್ಣನ ಭೇಟಿಗೆ ಹೋಟೆಲ್ ಗೆ ಬಂದಿದ್ದ ಅಂತಾ ಹೇಳ್ತಿದಾರೆ.. 

ಹೋಟೆಲ್ ಸಿಬ್ಬಂದಿ ಹೇಳುವ ಪ್ರಕಾರ ಬಾಲಕ ಅಣ್ಣನನ್ನ ನೋಡೋದಕ್ಕೆ ಬಂದಿದ್ದ.. ಅಣ್ಣ ಹೊರಗಡೆ ಹೋಗಿದ್ದ ಅನ್ನೋ ಕಾರಣಕ್ಕೆ ಟೇಬಲ್ ಗೆ ಸರ್ವಿಸ್ ಕೊಡ್ತಿದ್ನಂತೆ.. ಕೇವಲ ಎರಡು ದಿನಗಳಿಂದ ಬಾಲಕ ಕೆಲಸ ಮಾಡ್ತುದ್ದ ಅನ್ನೋದನ್ನ ಸಿಬ್ಬಂದಿ ಹೇಳಿದ್ದಾರೆ.. ಕಳೆದ 4 ದಿನದಿಂದ ಬಂದಿದ್ದ ಅಂತಾ ಬಾಲು ಹೇಳಿದಾರೆ.. ತಲೆಗೊಂದು ಹೇಳಿಕೆ ನೀಡಿ ಅಧಿಕಾರಿಗಳಿಗೆ ಗೊಂದಲ ಹುಟ್ಟಿಸೋದಕ್ಕೆ ಹೋಟೆಲ್ ಸಿಬ್ಬಂದಿ ಮುಂದಾಗಿದಾರೆ.. 

ಸದ್ಯ ಅಣ್ಣನ ಸುಪರ್ದಿಗೆ ಬಾಲಕನನ್ನ ಕೊಟ್ಟಿರೋ ಅಧಿಕಾರಿಗಳು ಶಾಲೆಗೆ ಸೇರಿಸುವಂತೆ ತಾಕೀತು ಮಾಡಿದ್ದಾರೆ.. ಅಲ್ಲದೇ ದಾಖಲೆಗಳನ್ನ ಕಾರ್ಮಿಕ ಇಲಾಖೆಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.. 

ದೊಡ್ಡ ಹೋಟೆಲ್ ಗಳ ಪರಿಸ್ಥಿತಿಯೆ ಹೀಗಾದ್ರೆ ಹಳ್ಳಿಗಳಲ್ಲಿ ಹೇಗಿರಬೇಡ? ಅಧಿಕಾರಿಗಳು ಇಂಥ ಪ್ರಕರಣಗಳನ್ನ ಗಂಭೀರವಾಗಿ ತೆಗೆದುಕೊಳ್ಳವ ಮೂಲಕ ಹೋಟೆಲ್ ಮಾಲೀಕರಿಗೆ ಖಡಕ್ ಸಂದೇಶ ನೀಡ್ಬೇಕಿದೆ.. ಈ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನ ಸಂಪೂರ್ಣ ತೊಡೆದುಹಾಕಲು ಪಣ ತೊಡಬೇಕಿದೆ.

Latest Videos
Follow Us:
Download App:
  • android
  • ios