‘ಕ್ಯಾನ್ಸರ್‌ ಗುಣಪಡಿಸಬಹುದು : ಭಯ, ಆತಂಕ ಬೇಡ’

ಮಾರಕ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಬಹುದು ಎಂದು ವೈದ್ಯರು ಭರವಸೆ ನೀಡಿದ್ದಾರೆ. ಅಲ್ಲದೇ ಆತಂಕ ಖಿನ್ನತೆಯಿಂದ ಮಾತ್ರ ಕಾಯಿಲೆ ಉಲ್ಬಣವಾಗುತ್ತದೆ ಎಂದಿದ್ದಾರೆ

Cancer Is Curable Disease Says Dr Srinivas in Shivamogga

ಶಿಕಾರಿಪುರ [ಫೆ.09]:  ಮಾನಸಿಕ ಖಿನ್ನತೆಯಿಂದ ಕ್ಯಾನ್ಸರ್‌ ಕಾಯಿಲೆ ಉಲ್ಬಣವಾಗಲಿದ್ದು, ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದಾದ ಕ್ಯಾನ್ಸರ್‌ ಬಗ್ಗೆ ಭಯ, ಆತಂಕ ಪಡದೆ ರೋಗಿಗೆ ಧೈರ್ಯ, ಆತ್ಮಸ್ಥೈರ್ಯ ಹೆಚ್ಚಳದ ಮೂಲಕ ಕಾಯಿಲೆಯಿಂದ ಪಾರು ಮಾಡಬಹುದಾಗಿದೆ ಎಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್‌ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್‌ಸಿಡಿ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ವಿಶ್ವ ಕ್ಯಾನ್ಸರ್‌ ದಿನಾಚರಣೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಯಾನ್ಸರ್‌ ಮಾರಣಾಂತಿಕ ಕಾಯಿಲೆ. ರೋಗ ಗುಣಮುಖರಾಗುವ ಸಾಧ್ಯತೆ ಇಲ್ಲ ಎಂಬ ಆತಂಕ ಸಹಜವಾಗಿದೆ. ಇತ್ತೀಚಿನ ವರ್ಷದಲ್ಲಿ ಕ್ಯಾನ್ಸರ್‌ಗೆ ಸೂಕ್ತ ಔಷಧಿ ಕಂಡುಹಿಡಿಯಲಾಗಿದೆ. ಸೂಕ್ತ ಚಿಕಿತ್ಸೆ ಮೂಲಕ ಸಂಪೂರ್ಣ ಗುಣಪಡಿಸಬಹುದಾಗಿದೆ ಎಂದು ತಿಳಿಸಿದರು.

ಕ್ಯಾನ್ಸರ್‌ ಪೀಡಿತ ರೋಗಿಗಳು ಮಾನಸಿಕ ಖಿನ್ನತೆಗೊಳಗಾದಲ್ಲಿ ರೋಗ ಉಲ್ಬಣವಾಗುವ ಸಾಧ್ಯತೆ ಹೆಚ್ಚು. ಪದೇಪದೆ ಜ್ವರ, ದೇಹದ ತೂಕ ವಿಪರೀತ ಕಡಿಮೆಯಾಗುವುದು, ಮಲಬದ್ಧತೆ ಮತ್ತಿತರ ಸಮಸ್ಯೆ ರೋಗದ ಪ್ರಮುಖ ಲಕ್ಷಣ. ಈ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸದೆ ತಜ್ಞ ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಿದರು.

ರಕ್ತಸಿಕ್ತವಾಗಿ ನರಳಾಡ್ತಾ ಪ್ರಾಣಬಿಟ್ಟ ಗಿರೀಶ್, ಶಿವಮೊಗ್ಗದ ಘೋರ ಹತ್ಯೆಯ ಸಿಸಿಟಿವಿ ದೃಶ್ಯ...

ದೈನಿಂದಿನ ಆಹಾರ ಪದ್ಧತಿ, ಮದ್ಯಪಾನ, ಧೂಮಪಾನ, ಕುರಕಲು ತಿಂಡಿಯ ಅನಿಯಮಿತ ಸೇವನೆ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗಲಿವೆ. ರೋಗ ನಾಲ್ಕು ಹಂತದಲ್ಲಿ ಗುರುತಿಸಬಹುದಾಗಿದ್ದು ಪ್ರಥಮ ಹಾಗೂ ಎರಡನೆ ಹಂತದಲ್ಲಿ ತಜ್ಞ ವೈದ್ಯರ ಸೂಕ್ತ ಚಿಕಿತ್ಸೆಯಿಂದ ಸಂಪೂರ್ಣ ಗುಣಪಡಿಸಬಹುದಾಗಿದೆ. ನಂತರದ ಹಂತದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ರೋಗವನ್ನು ಹತೋಟಿಗೆ ತರಲು ಸಾಧ್ಯ. ಈ ಸಂದರ್ಭದಲ್ಲಿ ರೋಗಿ ದೃತಿಗೆಡದೆ ದೈರ್ಯ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ರೀತಿಯಲ್ಲಿ ಕುಟುಂಬಸ್ಥರು ಹೆಚ್ಚಿನ ನಿಗಾವಹಿಸಬೇಕು ಎಂದು ತಿಳಿಸಿದರು.

ಕ್ಯಾನ್ಸರ್‌ ಭಯಾನಕ ಕಾಯಿಲೆ ಎಂಬ ಭೀತಿಯಿಂದ ತತ್ತರಿಸಿರುವ ಜನತೆ, ರೋಗಕ್ಕೆ ಕಾರಣವಾಗುವ ಆಹಾರ ಪದ್ಧತೆ ಬದಲಾಯಿಸಿಕೊಂಡು ಸ್ವಚ್ಛತೆ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಬಗೆಯನ್ನು ರೂಡಿಸಿಕೊಳ್ಳುವಂತೆ ತಿಳಿಸಿದರು. ರೋಗಮುಕ್ತ ಸಮಾಜಕ್ಕೆ ಇಲಾಖೆಗೆ ಜನತೆಯ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಕೋಲಾರ ಕೋಚ್‌ ಫ್ಯಾಕ್ಟರಿ ಕೈಬಿಟ್ಟು ಶಿವಮೊಗ್ಗಕ್ಕೆ ಶೆಡ್ : ಸಿಎಂ ತವರಿಗೆ ಕೊಡುಗೆ...

ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಫಿಜಿಷಿಯನ್‌ ಡಾ. ರವೀಂದ್ರ ನಾಯಕ್‌ ಮಾತನಾಡಿ, ಗುಟ್ಕಾ, ಧೂಮಪಾನ, ಮದ್ಯಪಾನ ಸೇವನೆ ಮಾರಕ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದ್ದು ಸೇವನೆಯಿಂದ ಗಂಟಲು, ಬಾಯಿ, ವಸಡು, ಸ್ತನ ಮತ್ತಿತರ ಭಾಗದಿಂದ ಕಾಯಿಲೆ ದೇಹವನ್ನು ಆವರಿಸಲಿದೆ. ಚಿಕ್ಕದಾಗಿ ದೇಹದಲ್ಲಿ ಆರಂಭವಾದ ಕ್ಯಾನ್ಸರ್‌ ಗಡ್ಡೆ ರಕ್ತ ಕಣದ ಸಹಕಾರದಿಂದ ಸಂಪೂರ್ಣ ದೇಹಕ್ಕೆ ವ್ಯಾಪಿಸಲಿದೆ ಎಂದರು.

ದಂತ ವೈದ್ಯೆ ಡಾ.ಉಷಾ ರವೀಂದ್ರ ನಾಯಕ್‌, ಸ್ತ್ರಿರೋಗ ತಜ್ಞ ಡಾ.ಪ್ರಕಾಶ್‌, ಮಹಿಳಾ ದೌರ್ಜನ್ಯ ತಡೆಕೋಶ ಸಂಚಾಲಕಿ, ಉಪನ್ಯಾಸಕಿ ಡಾ. ಮಂಜುಳಾ, ಮಹಿಳಾ ಸಬಲೀಕರಣಕೋಶ ಸಂಚಾಲಕಿ ಸೌಮ್ಯ, ನಾಗರಿಕ ಸಹಾಯವಾಣಿ ಕೇಂದ್ರದ ವ್ಯವಸ್ಥಾಪಕ ಮಂಜಪ್ಪ, ಎನ್‌ಸಿಡಿ ವಿಭಾಗದ ಆಪ್ತ ಸಮಾಲೋಚಕ

ಹರೀಶ್‌, ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ. ಪೂಜಾರ್‌, ಪಾಂಡು,ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios