ರಾಮನಗರ ಜಿಲ್ಲೆ ರದ್ದಾಗುವುದರಿಂದ ನಷ್ಟ ಆಗುವುದಿಲ್ಲ: ಮಾಜಿ ಶಾಸಕ ಲಿಂಗಪ್ಪ
ರಾಮನಗರ ಜಿಲ್ಲೆಯ ಬಹುಸಂಖ್ಯಾತರಿಗೆ ಈಗಲೂ ಬೆಂಗಳೂರು ಜಿಲ್ಲೆಯ ಭಾಗವಾಗಿ ಉಳಿಯಬೇಕೆಂಬ ಅಭಿಲಾಷೆ ಇದೆಯೇ ಹೊರತಾಗಿ ರಾಮನಗರ ಜಿಲ್ಲೆ ರದ್ದಾಗುವುದರಿಂದ ನಮಗೇನೂ ನಷ್ಟವಾಗುವುದಿಲ್ಲ.
ರಾಮನಗರ (ಅ.26): ರಾಮನಗರ ಜಿಲ್ಲೆಯ ಬಹುಸಂಖ್ಯಾತರಿಗೆ ಈಗಲೂ ಬೆಂಗಳೂರು ಜಿಲ್ಲೆಯ ಭಾಗವಾಗಿ ಉಳಿಯಬೇಕೆಂಬ ಅಭಿಲಾಷೆ ಇದೆಯೇ ಹೊರತಾಗಿ ರಾಮನಗರ ಜಿಲ್ಲೆ ರದ್ದಾಗುವುದರಿಂದ ನಮಗೇನೂ ನಷ್ಟವಾಗುವುದಿಲ್ಲ. ಅಲ್ಲದೆ, ಬೆಂಗಳೂರು ಜಿಲ್ಲೆಯು ವಿಶ್ವದಲ್ಲೇ ಪ್ರಖ್ಯಾತಿ ಹೊಂದಿರುವುದರಿಂದ ವಿಶ್ವ ಭೂಪಟದಲ್ಲು ರಾರಾಜಿಸುತ್ತದೆ ಎಂಬ ಹೆಗ್ಗಳಿಕೆಯೂ ನಮ್ಮದಾಗಿರುತ್ತದೆ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಮನಗರ ಜಿಲ್ಲೆಯ ಅಂಗ ತಾಲೂಕಾಗಿರುವ ಕನಕಪುರವನ್ನು ಮಾತ್ರ ಉಪಮುಖ್ಯಮಂತ್ರಿಗಳು ಬೆಂಗಳೂರಿಗೆ ಸೇರಿಸಿಕೊಳ್ಳುತ್ತಾರೆಯೇ ಅಥವಾ ಕನಕಪುರವೂ ಸೇರಿದಂತೆ ಚನ್ನಪಟ್ಟಣ, ಮಾಗಡಿ ಮತ್ತು ರಾಮನಗರ ತಾಲೂಕುಗಳೂ ಸೇರಿದಂತೆ ಹಾಲು ಇರುವ ರಾಮನಗರ ಜಿಲ್ಲೆಯನ್ನೇ ಬೆಂಗಳೂರಿಗೆ ಸೇರಿಸಿಕೊಳ್ಳುತ್ತಾರೆಯೇ ಸ್ಪಷ್ಟನೆ ಇಲ್ಲ ಎಂದಿದ್ದಾರೆ.
ಚನ್ನಪಟ್ಟಣ, ಮಾಗಡಿ ಹಾಗೂ ರಾಮನಗರ ತಾಲೂಕುಗಳನ್ನು ಬಿಟ್ಟು ಕೇವಲ ಕನಕಪುರ ತಾಲೂಕೊಂದನ್ನು ಬೆಂಗಳೂರಿಗೆ ಸೇರಿಸಿಕೊಂಡರೆ ಉಳಿದ ಮೂರು ತಾಲೂಕಿನ ಜನರಿಗೆ ಬಹುದೊಡ್ಡ ದ್ರೋಹ ಬಗೆದಂತಾಗುತ್ತದೆ. ಬಹುಶಃ ಇದನ್ನು ಖಂಡಿತ ಮಾಡಲಾರರು ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ. ರಾಮನಗರಕ್ಕೆ ಈಗಿರುವ ಮಹತ್ವ ಖಂಡಿತ ಕಡಿಮೆಯಾಗುವುದಿಲ್ಲ. ರಾಮನಗರ ರಾಮನಗರವಾಗಿಯೇ ತನ್ನ ಘನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಯಾವ ಕಾರಣಕ್ಕಾಗಿ ಇದನ್ನು ವಿರೋಧಿಸುತ್ತಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ.
ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಸಂಸದ: ರಾತ್ರಿ ವೇಳೆಯೂ ಶಿವಮೊಗ್ಗ ನಿಲ್ದಾಣದಿಂದ ಹಾರಲಿವೆ ವಿಮಾನಗಳು!
ಅವರ ಎರಡು ಕಣ್ಣುಗಳಾದ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಒಂದು ವೇಳೆ ರಾಮನಗರ ಜಿಲ್ಲೆ ಬೆಂಗಳೂರಿಗೆ ಸೇರ್ಪಡೆಯಾದರೂ ಅಸ್ತಿತ್ವದಲ್ಲೇ ಇರುತ್ತವೆ. ಇದರಿಂದ ಅವರ ಯಾವ ಕಣ್ಣಿಗೂ ಭಾದಕವಾಗುವುದಿಲ್ಲ. ಆದ್ದರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಇಡೀ ರಾಮನಗರ ಜಿಲ್ಲೆಯನ್ನು ಬೆಂಗಳೂರಿ ಜಿಲ್ಲೆಗೆ ಸೇರ್ಪಡೆ ಮಾಡುವುದಕ್ಕೆ ನಾನು ಸೇರಿದಂತೆ ಅಸಂಖ್ಯಾತರ ಬೆಂಬಲವಿದೆ ಎಂದು ಸಿ.ಎಂ.ಲಿಂಗಪ್ಪ ತಿಳಿಸಿದ್ದಾರೆ.