ಕಲಬುರಗಿ(ಮಾ.14): ಕೊರೋನಾ ಭೀತಿಯಿಂದಾಗಿ ಕಲಬುರಗಿ ನಗರ ಹಾಗೂ ಜಿಲ್ಲೆಯ ಪ್ರಮುಖ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಯಲ್ಲಿ ಓದುತ್ತಿರುವ 1 ರಿಂದ 6, 8 ಮತ್ತು 9ನೇ ತರಗತಿ ಮಕ್ಕಳ ಪರೀಕ್ಷೆಗಳನ್ನು ರದ್ದುಪಡಿಸಿ ಅವರೆಲ್ಲರಿಗೂ ಹಿಂದಿನ ಪರೀಕ್ಷೆ ಅಂಕಗಳ ಆಧಾರದಲ್ಲಿ ಮುಂದಿನ ತರಗತಿಗಳಿಗೆ ನೇರ ಬಡ್ತಿ ನೀಡಿದ್ದಾರೆ. 

ಮಾಹಿತಿ ಸಂದೇಶಗಳನ್ನೆಲ್ಲ ಪೋಷಕರಿಗೆ ಶುಕ್ರವಾರ ಅನೇಕ ಶಾಲೆಯವರು ರವಾನಿಸಿದ್ದಾರೆ. ಸ್ಥಳೀಯವಾಗಿ ಹೆಸರಾಂತ ಶರಣ ಬಸವೇಶ್ವರ ಶಾಲೆ (ಎಸ್ಬಿಆರ್) ಶಾಲೆಯಲ್ಲೂ ಇಂತಹ ಕ್ರಮ ಕೈಗೊಳ್ಳಲಾಗಿದ್ದು, ಮಕ್ಕಳಿಗೆ ನೇರವಾಗಿ ಜೂನ್ 1 ರಂದೇ ಶಾಲೆಗೆ ಬರುವಂತೆ ಸೂಚಿಸಲಾಗಿದೆ. ಇಂತಹ ಕ್ರಮ ಇನ್ನೂ ಅನೇಕ ಕಾಸಗಿ ಶಾಲೆಗಳವರು ಕೈಗೊಂಡಿದ್ದಾರೆ. 

ಫಟಾಫಟ್ ರಥೋತ್ಸವ: 'ಕೊರೋನಾದಿಂದ ಕಲಬುರಗಿ ಕಾಪಾಡಪ್ಪ ಶರಣ ಬಸವ'

ಕೊರೋನಾ ಭೀತಿಯಿಂದಾಗಿ ನಗರದಲ್ಲಿರುವ ಬಹುಪಾಲು ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಮುಖಗವಸು ಧರಿಸಿ ಓಡಾಡುತ್ತಿದ್ದಾರೆ. ಶಾಲೆಗಳಲ್ಲಿಯೂ ಸಹ ವ್ಯವಸ್ಥಾಪಕರು ಮಕ್ಕಳಿಗೆ ಮಾಸ್ಕ್ ಧರಿಸಿ ಬರಬೇಕೆಂದು ಸಲಹೆ ನೀಡಿದ್ದರಿಂದ ಬಹುತೇಕ ಮಕ್ಕಳು ಮುಖಗವಸು ಧರಿಸಿ ಪರೀಕ್ಷೆ ಬರೆಯುತ್ತಿದ್ದಾರೆ. 

ಕಲಬುರಗಿ: ಕೊರೋನಾದಿಂದ ಮೃತಪಟ್ಟ ವ್ಯಕ್ತಿ ಮನೆಯ 5 ಕಿ. ಮೀ. ಬಫರ್ ಝೋನ್!

ಶಿಕ್ಷಕರು ಮಾತ್ರ ಮುಖಗವಸು ಇಲ್ಲದೇ ಪಾಠ ಮಾಡುವುದು ಅನಿವಾರ್ಯವಾಗಿದೆ. ಹೆಚ್ಚು ಜನ ಸಂದಣಿ ಇರುವ ರೈಲು ನಿಲ್ದಾಣ, ಬಸ್ ನಿಲ್ದಾಣ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ, ಹೋಟೆಲ್, ಲಾಡ್ಜ್, ಮೆಡಿಕಲ್ ಶಾಪ್, ಶಾಲಾ ಕಾಲೇಜುಗಳು ಸೇರಿದಂತೆ ಇತರ ಕಡೆ ಮುಖಗವಸು ಹಾಕಿಕೊಂಡೇ ಕೆಲಸ ಮಾಡುತ್ತಿರುವ ಚಿತ್ರಣ ಶುಕ್ರವಾರ ಕಂಡುಬಂದಿದೆ.