ಗದಗ(ಏ.12): ಕೊರೋನಾ ವೈರಸ್ ತಡೆಗಟ್ಟಲು ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಬ್ಯಾಂಕ್ ಮಿತ್ರ ಸೇವೆ ಆರಂಭಿಸಿದೆ. ಬ್ಯಾಂಕ್ ವ್ಯವಹಾರವೇ ಗ್ರಾಹಕರ ಮನೆಗೆ ತೆರಳಿ ಸೇವೆ ಒದಗಿಸುವ ಯೋಜನೆ ಇದಾಗಿದೆ.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ಈ ಯೋಜನೆಯನ್ನ ಕಾರ್ಯಾರಂಭಿಸಿದೆ. ಜನಧನ್‌ ಖಾತೆ, ಪಿಂಚಣಿದಾರ ವಯೋ ವೃದ್ಧರಿಗೆ ಮನೆಗೆ ಹಣ ನೀಡುವುದು ಕೆನರಾ ಬ್ಯಾಂಕಿನ ಮುಖ್ಯ ಉದ್ದೇಶವಾಗಿದೆ. 

ಶೌಚಾಲಯಕ್ಕೂ ಜನರ ಪರದಾಟ: ಕೈಯಲ್ಲಿ ಚೊಂಬು ಹಿಡಿದು ಪ್ರತಿಭಟನೆ

ಮನೆ ಮನೆಗೆ ಬ್ಯಾಂಕ್‌ ಸಿಬ್ಬಂದಿ ತೆರಳಿದ್ರೂ ಸಾಮಾಜಿ ಅಂತರ ಕಾಯ್ದುಕೊಂಡೇ ವ್ಯವಹಾರ ನಡೆಸುತ್ತಾರೆ.  ಜೊತೆಗೆ ಬ್ಯಾಂಕ್‌ನ ಫಲಾನುಭವಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಬ್ಯಾಂಕ್ ಯೋಜನೆಯನ್ನ ಜಾರಿ ಮಾಡಿದೆ. ಇದರ ಜೊತೆಗೆ ಬ್ಯಾಂಕ್ ಸಿಬ್ಬಂದಿ ಪ್ರತಿಯೊಬ್ಬ ಗ್ರಾಹಕರ ಮನೆಗೆ ತೆರಳಿ ಸ್ಯಾನಿಟೈಜರ್, ಮಾಸ್ಕ್, ಗ್ಲೋಸ್, ವಿತರಣೆ ಮಾಡುತ್ತಿದ್ದಾರೆ.