ಕೆನರಾ ಬ್ಯಾಂಕ್ ರೈತಾಪಿಗಳಿಗೆ ಸೂಕ್ತ ಸೇವೆ ಒದಗಿಸಲು ವಿಫಲವಾಗಿದೆ : ರೈತ ಮುಖಂಡರ ಆರೋಪ
ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ರೈತಾಪಿಗಳಿಗೆ ಸೂಕ್ತ ಸೇವೆ ಒದಗಿಸಲು ವಿಫಲವಾಗಿದೆ ಹಾಗೂ ರೈತರ ಬಗ್ಗೆ ಬಹಳ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಆರೋಪಿಸಿ ಕೆನರಾ ಬ್ಯಾಂಕ್ ಮುಂಭಾಗ ಅ.31 ರಂದು ತಾಲೂಕು ರೈತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ತಿಳಿಸಿದರು.
ತುರುವೇಕೆರೆ (ಅ.28): ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ರೈತಾಪಿಗಳಿಗೆ ಸೂಕ್ತ ಸೇವೆ ಒದಗಿಸಲು ವಿಫಲವಾಗಿದೆ ಹಾಗೂ ರೈತರ ಬಗ್ಗೆ ಬಹಳ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಆರೋಪಿಸಿ ಕೆನರಾ ಬ್ಯಾಂಕ್ ಮುಂಭಾಗ ಅ.31 ರಂದು ತಾಲೂಕು ರೈತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ದಿವಂಗತ ಚಂದ್ರಯ್ಯ 2014ರಲ್ಲಿ ಕೆನರಾ ಬ್ಯಾಂಕ್‌ನಲ್ಲಿ (Canara bank) ಸುಮಾರು 2 ಲಕ್ಷ 70 ಸಾವಿರ ಸಾಲ ಪಡೆದು ವ್ಯವಹಾರ ಮಾಡಿದ್ದಾರೆ. 2019 ರಿಂದ 2021ರವರೆಗೂ ಕೇಂದ್ರ ಸರ್ಕಾರದ ವಿಮೆಯಾದ ಪಿಎಂಜಿ ಪಾಲಿಸಿಯಲ್ಲಿ ಪ್ರತಿ ವರ್ಷ 330 ರು.ಗಳನ್ನು ಪಾವತಿಸಿದ್ದಾರೆ. ಚಂದ್ರಯ್ಯ ಕೊರೋನಾಗೆ (Corona) ತುತ್ತಾಗಿ ಸಾವನ್ನಪ್ಪಿದ್ಧಾರೆ. ಈ ಸಂಬಂಧ ಮೃತ ರೈತನ ಕುಟುಂಬಕ್ಕೆ 2 ಲಕ್ಷ ರು. ವಿಮೆ ಹಣ ನೀಡಬೇಕಿದೆ. ಆದರೆ ಬ್ಯಾಂಕ್ ಮ್ಯಾನೇಜರ್ ವಿಮೆ ನೀಡದೇ ಮೃತ ಪತ್ನಿ ಕೆಂಪಮ್ಮರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪತಿ ಮಾಡಿರುವ ಸಾಲ ತೀರಿಸಬೇಕು. ಇಲ್ಲವಾದರೆ ನಿಮ್ಮ ಮೇಲೆ ಬ್ಯಾಂಕ್‌ನಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತ ಹನುಮಂತಯ್ಯ ಮಾತನಾಡಿ, 2017ರಲ್ಲಿ ಕೋಳಿ ಫಾರಂ ನಡೆಸಲು ಸುಮಾರು 10 ಲಕ್ಷ ಸಾಲವನ್ನು ಕೆನರಾ ಬ್ಯಾಂಕ್‌ನಲ್ಲಿ ತೆಗೆದುಕೊಂಡಿದ್ದೆ. ಅದರಲ್ಲಿ ಸುಮಾರು 6 ಲಕ್ಷವನ್ನು 12 ಕಂತುಗಳ ಮೂಲಕ ಕಟ್ಟಲಾಗಿದೆ. ಸಾಲ ತಿರುವಳಿಗೆ ಇನ್ನು ಒಂದು ವರ್ಷ ಬಾಕಿ ಇದ್ದರೂ ಸಹ ಕೆನರಾ ಬ್ಯಾಂಕ್ ಮ್ಯಾನೇಜರ್ ಮನೆಯ ಹತ್ತಿರ ಬಂದು ಸಾಲ ಕಟ್ಟುವಂತೆ ಮಾನಸಿಕವಾಗಿ ನೋವುಂಟು ಮಾಡುತ್ತಿದ್ದಾರೆಂದು ದೂರಿದರು.
ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಡ್ಯಾನಿಯಲ್ ಮಾತನಾಡಿ, ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯದ ನೌಕರರು ಹೆಚ್ಚಾಗಿದ್ದಾರೆ. ಕನ್ನಡ ಬಾರದಿರುವ ಕಾರಣಕ್ಕೆ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಸರ್ಕಾರ ಇದರ ಬಗ್ಗೆ ಕನ್ನಡ ಬರುವಂತಹ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಿಐಟಿಯು ಸತೀಶ್, ರೈತ ಸಂಘದ ಪದಾಧಿಕಾರಿಗಳಾದ ಗೋವಿಂದರಾಜು, ನಾಗರಾಜು, ಚಂದ್ರಯ್ಯ, ರವಿಕೀರ್ತಿ, ಆಟೋ ಗಂಗಣ್ಣ, ಶಿವಣ್ಣ, ನರಸಿಂಹಮೂರ್ತಿ, ರಂಗಸ್ವಾಮಿ, ವಸಂತಯ್ಯ, ಪುರುಷೋತ್ತಮ, ಕನ್ನಡ ರಕ್ಷಣಾ ವೇದಿಕೆಯ ಸ್ವರ್ಣಕುಮಾರ್, ಆಸೀಂ ಷರೀಪ್, ನಾಗರಾಜು ಇತರರು ಇದ್ದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ನಮ್ಮ ತಾಲೂಕಿಗೆ ಸುಮಾರು ವರ್ಷಗಳಿಂದ ಬರುತ್ತಿಲ್ಲ. ಲೀಡ್ ಬ್ಯಾಂಕ್ ಮ್ಯಾನೇಜರ್ ಜ್ಯೋತಿಗಣೇಶ್‌ರ ನಂತರ ಯಾರು ಲೀಡ್ ಬ್ಯಾಂಕ್ ಮ್ಯಾನೇಜರ್ ಎಂಬುದೇ ಗೊತ್ತಿಲ್ಲ. ಇದುವರೆಗೂ ಬಿಎಲ್‌ಸಿ ಮೀಟಿಂಗ್ ಸಹ ಕರೆದಿಲ್ಲ. ಅದಲ್ಲದೇ ತಹಸೀಲ್ದಾರ್ ಸಹ ತಾಲೂಕಿನ ಬ್ಯಾಂಕ್ ಮ್ಯಾನೇಜರ್ ಹಾಗೂ ರೈತರ ಸಭೆ ನಡೆಸಿ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸುವ ಕಾರ್ಯವನ್ನೂ ಮಾಡುತ್ತಿಲ್ಲ.
ಅಸ್ಲಾಂ ಪಾಷ ಗೌರವಾಧ್ಯಕ್ಷ, ರೈತ ಸಂಘ
1 ಲಕ್ಷ ಕೋಟಿ ಮೊತ್ತದ ಸಾಲ ರೈಟ್ ಆಫ್
ಕಳೆದ 11 ವರ್ಷಗಳಲ್ಲಿ ಕೆನರಾ ಬ್ಯಾಂಕ್ ಒಟ್ಟು 1.29 ಲಕ್ಷ ಕೋಟಿ ರೂಪಾಯಿ ಕೆಟ್ಟ ಸಾಲವನ್ನು ರೈಟ್ ಆಫ್ ಮಾಡಿದೆ ಎಂದು ಮನಿ ಲೈಫ್ ವೆಬ್‌ಸೈಟ್ ವರದಿ ಮಾಡಿದೆ. ಕೆನರಾ ಬ್ಯಾಂಕ್ ಕಳೆದ 10 ವರ್ಷಗಳಲ್ಲಿ ಎಷ್ಟು ಹಣವನ್ನು ರೈಟ್ ಆಫ್ ಮಾಡಿದೆ ಎಂದು ಆರ್‌ಟಿಐ ಪ್ರಶ್ನೆಗೆ ಸಾರ್ವಜನಿಕ ವಲಯದ ಬ್ಯಾಂಕ್ ಉತ್ತರಿಸಿದೆ. 2011-12ರ ಹಣಕಾಸು ವರ್ಷದಿಂದ 2021-22ರ ಹಣಕಾಸು ವರ್ಷದ ವರೆಗೆ ಒಟ್ಟು 1,29,088 ಕೋಟಿ ಕೆಟ್ಟ ಸಾಲವನ್ನು ರೈಟ್ ಮಾಡಿರುವುದಾಗಿ ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತ ವಿವೇಕ್ ವೇಲಂಕರ್ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಕೆನರಾ ಬ್ಯಾಂಕ್ ಉತ್ತರ ನೀಡಿದೆ. ಕೆನರಾ ಬ್ಯಾಂಕ್ ಕೆಟ್ಟ ಸಾಲದ ಮೊತ್ತವನ್ನು ಹೇಳಿದ್ದರೆ, ಡಿಫಾಲ್ಟರ್‌ಗಳು ಯಾರು ಎನ್ನುವ ಮಾಹಿತಿಯನ್ನು ನೀಡಲು ನಿರಾಕರಿಸಿದೆ. ಆರ್‌ಟಿಐ ಕಾಯ್ದೆಯ ಒಂದು ನಿಯಮವನ್ನು ಉಲ್ಲೇಖಿಸಿ ಡಿಫಾಲ್ಟರ್‌ಗಳ ಹೆಸರನ್ನು ಪ್ರಕಟಿಸದೇ ಇರಲು ತೀರ್ಮಾನ ಮಾಡಿದೆ. "ಮಾಹಿತಿಯು ಸಾಲಗಾರರ ವೈಯಕ್ತಿಕ ಮಾಹಿತಿಯಾಗಿದೆ, ಮತ್ತು ಅದರ ಬಹಿರಂಗಪಡಿಸುವಿಕೆಯು ಸಂಬಂಧಪಟ್ಟವರ ಗೌಪ್ಯತೆಗೆ ಅನಗತ್ಯವಾದ ಆಕ್ರಮಣವನ್ನು ಉಂಟುಮಾಡುತ್ತದೆ ಮತ್ತು ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಜೆ) ಅಡಿಯಲ್ಲಿ ಬಹಿರಂಗಪಡಿಸುವಿಕೆಯಿಂದ ವಿನಾಯಿತಿ ನೀಡಲಾಗುತ್ತದೆ" ಎಂದು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಕೆನರಾ ಬ್ಯಾಂಕ್‌ನ (ಸಿಪಿಐಒ) ಆರ್‌ಟಿಐ ಉತ್ತರದಲ್ಲಿ ತಿಳಿಸಿದ್ದಾರೆ.
ವೇಲಂಕರ್ (Vivek Velankar) ಅವರು ತಮ್ಮ ಆರ್‌ಟಿಐನಲ್ಲಿ (RTI) 100 ಕೋಟಿಗಿಂತ ಹೆಚ್ಚಿನ ಸಾಲವನ್ನು ಹೊಂದಿರುವ ಸಾಲಗಾರರ ಒಟ್ಟು ಮೊತ್ತದ ಬಗ್ಗೆ ವಿವರಗಳನ್ನು ಕೇಳಿದರು. ಆದರೆ, ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ ಬ್ಯಾಂಕ್, ವರದಿಯ ಪ್ರಕಾರ "ಮಾಹಿತಿಯನ್ನು ಕೋರಿದ ರೀತಿಯಲ್ಲಿ ನಿರ್ವಹಿಸುವುದಿಲ್ಲ" ಎಂದು ಉತ್ತರಿಸಿದೆ. ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಜೆ) ಪ್ರಕಾರ, “ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಮಾಹಿತಿಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಅಥವಾ ವ್ಯಕ್ತಿಯ ಖಾಸಗಿತನದ ಮೇಲೆ ಅನಗತ್ಯ ಆಕ್ರಮಣವನ್ನು ಉಂಟುಮಾಡುತ್ತದೆ ಸಿಪಿಐಓ ಅಥವಾ ಎಸ್‌ಪಿಐಓ ಅಥವಾ ಮೇಲ್ಮನವಿ ಪ್ರಾಧಿಕಾರವು (Canara Bank) ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯು ಅಂತಹ ಮಾಹಿತಿಯ ಬಹಿರಂಗಪಡಿಸುವಿಕೆಯನ್ನು ಸಮರ್ಥಿಸುತ್ತದೆ ಮತ್ತು ಬಹಿರಂಗಪಡಿಸುವಿಕೆಯಿಂದ ವಿನಾಯಿತಿ ನೀಡುತ್ತದೆ ಎಂದು ಹೇಳಿದೆ.
ಕೆನರಾ ಬ್ಯಾಂಕ್ ನಿವ್ವಳ ಲಾಭ ಶೇ. 200ರಷ್ಟು ಹೆಚ್ಚಳ
ತನ್ನ ಇನ್ನೊಂದು ಪ್ರಶ್ನೆಯಲ್ಲಿ, ಕಾರ್ಯಕರ್ತ ₹ 1 ಕೋಟಿ ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಕೆಟ್ಟ ಸಾಲಕ್ಕಾಗಿ ಬ್ಯಾಂಕ್‌ನಿಂದ ರೈಟ್ ಆಫ್ (Write Off) ಆದ ಮೊತ್ತದ ಬಗ್ಗೆ ಬ್ಯಾಂಕ್‌ಗೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಕೆನರಾ ಬ್ಯಾಂಕ್ FY11-12 ರಿಂದ FY21-22 ರವರೆಗೆ ಸಾಲಗಾರರ ಒಟ್ಟು ಬಾಕಿ ಮೊತ್ತದ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಹೇಳಲಾಗಿದೆ.