ರೈಲ್ವೆ ನಿಲ್ದಾಣದಲ್ಲಿ ‘ಕೆನಡಾ ಪ್ರಜೆ’, ಜನರಲ್ಲಿ ಆತಂಕ

ಕೊರೋನಾ ವೈರಸ್‌ ಭೀತಿಯಲ್ಲಿ ಇಡೀ ಜಿಲ್ಲೆ ದಿನ ಕಳೆಯುತ್ತಿರುವಾಗ ಕೆನಡಾ ದೇಶದ ವ್ಯಕ್ತಿಯೊಬ್ಬ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆಯಿಂದ ಸಂಜೆವರಿಗೆ ಇದ್ದುದರಿಂದ ಜನರು ತೀವ್ರ ಆತಂಕಗೊಂಡಿದ್ದಾರೆ.

Canada citizen in Davanagere creates anxiety in people

ದಾವಣಗೆರೆ(ಮಾ.22): ಕೊರೋನಾ ವೈರಸ್‌ ಭೀತಿಯಲ್ಲಿ ಇಡೀ ಜಿಲ್ಲೆ ದಿನ ಕಳೆಯುತ್ತಿರುವಾಗ ಕೆನಡಾ ದೇಶದ ವ್ಯಕ್ತಿಯೊಬ್ಬ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆಯಿಂದ ಸಂಜೆವರಿಗೆ ಇದ್ದುದರಿಂದ ಜನರು ತೀವ್ರ ಆತಂಕಗೊಂಡಿದ್ದಾರೆ. ಸುಮಾರು 80 ವರ್ಷ ವಯಸ್ಸಿನ ಕೆನಡಾ ಪ್ರಜೆಯು ಶನಿವಾರ ಬೆಳಗ್ಗೆ 9.30ರ ವೇಳೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.

ಚನ್ನಗಿರಿ ತಾ. ನಲ್ಲೂರು ಗ್ರಾಮದಲ್ಲಿ 15 ದಿನಗಳ ಕಾಲ ತಾನು ಇದ್ದು, ಈಗ ನಲ್ಲೂರಿನಿಂದ ಬಸ್ಸಿನಲ್ಲಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿಂದ ಸಂಜೆ ರೈಲಿಗೆ ದೆಹಲಿಗೆ ಹೋಗುತ್ತಿದ್ದೇನೆ ಎಂಬುದಾಗಿ ಕೆನಡಾ ಪ್ರಜೆ ಹೇಳಿದ್ದಾನೆ. ಕೆನಡಾದಿಂದ ಫೆ.29ರಂದು ಪ್ರಯಾಣ ಆರಂಭಿಸಿದ ತಾನು ವಿಶ್ವಾದ್ಯಂತ ಪ್ರವಾಸ ಮಾಡಿ, ಚೆನ್ನೈನಲ್ಲಿ 14 ದಿನ ಇದ್ದೆ. ತನ್ನ ದೇಶದಲ್ಲಿ ಕ್ರೀಡಾ ಕೋಚ್‌ ಆಗಿರುವ ತನ್ನದ ಉತ್ತಮ ಆರೋಗ್ಯವಾಗಿದೆ ಎಂಬುದಾಗಿ ನೋಡ ನೋಡುತ್ತಲೇ ಸುಮಾರು ದೂರದವರೆಗೂ ಓಡೋಡಿ ಹೋಗಿ ಆ ವ್ಯಕ್ತಿ ನಿಂತಿದ್ದಾರೆ.

‘ಬಾಗಿದ ತಲೆ ಮುಗಿದ ಕೈ’ನಿಂದ ಕೊರೋನಾ ಓಡಿಸಿ

ವಿದೇಶೀ ಪ್ರಜೆಯನ್ನು ಕಂಡ ಪ್ರಯಾಣಿಕರು ತಕ್ಷಣವೇ ಕೊರೋನಾ ವೈರಸ್‌ ಮುಂಜಾಗ್ರತೆಯಾಗಿ ಸ್ಥಾಪಿಸಿರುವ ಸಹಾಯವಾಣಿ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಅಲ್ಲಿಂದ ಬಂದ ವೈದ್ಯರು ಕೆನಡಾ ವೃದ್ಧನ ರೈಲ್ವೆ ಟಿಕೆಟ್‌ ಪರಿಶೀಲಿಸಿ, ಆರೋಗ್ಯದ ಬಗ್ಗೆ ವಿಚಾರಿಸಿದರು. ಬಾಯಿಗೆ ಮಾಸ್ಕ್‌ ಹಾಕಿಕೊಳ್ಳುವಂತೆ ಸಲಹೆ ನೀಡಿ, ಸುಮ್ಮನಾದರು. ಆದರೆ, ಸಹಾಯವಾಣಿ ಸಿಬ್ಬಂದಿ ಬಳಿ ಸೋಂಕು ಪತ್ತೆಗೆ ಯಾವುದೇ ಸಲಕರಣೆ ಇರಲಿಲ್ಲ. ಸಂಜೆ 6.40ಕ್ಕೆ ಬಂದ ಯಶವಂತಪುರ-ನಿಜಾಮುದ್ದೀನ್‌-ದೆಹಲಿ ಎಕ್ಸಪ್ರೆಸ್‌ ರೈಲಿನಲ್ಲಿ ಕೆನಡಾ ಪ್ರಜೆ ದೆಹಲಿಗೆ ಪಯಣ ಬೆಳೆಸಿದರು.

ಅನ್ಯ ದೇಶದ ವ್ಯಕ್ತಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದರೂ ಆರಾಮವಾಗಿ ಸಂಚರಿಸಲು ಬಿಟ್ಟಿದ್ದು, ಆಕಸ್ಮಾತ್‌ ಆತನಲ್ಲಿ ಕೊರೋನಾ ಸೋಂಕು ಇದ್ದು, ಆತನ ಸಂಪರ್ಕಕ್ಕೆ ಬಂದವರಿಗೆಲ್ಲಾ ಅದು ತಗುಲಿದರೆ ಏನು ಗತಿ? ಬೆಂಗಳೂರು ಇತರೆಕಡೆ ಸಹಾಯವಾಣಿ ಸಿಬ್ಬಂದಿಗೆ ವೈರಸ್‌ ಪತ್ತೆಗೆ ಅಗತ್ಯ ಸಾಧನ ನೀಡಲಾಗಿದೆ. ಆದರೆ, ಇಲ್ಲಿನ ಸಿಬ್ಬಂದಿಗೆ ಯಾವುದೇ ಅಂತಹ ಸೌಲಭ್ಯ ಕಲ್ಪಿಸಿಲ್ಲ ಎಂಬ ದೂರು ಕೇಳಿ ಬಂದಿದೆ.

ಜನತಾ ಕರ್ಫ್ಯೂಗೆ ಸುದರ್ಶನ್ ಪಟ್ನಾಯಕ್ ಸಪೋರ್ಟ್, ಪುರಿ ಬೀಚ್‌ನಲ್ಲಿ ಅರಳಿದ ಮರಳು ಶಿಲ್ಪ!

ಈಗಾಗಲೇ ಕೊರೋನಾ ವೈರಸ್‌ ಮುಂಜಾಗ್ರತೆಯಾಗಿ ರೈಲ್ವೆ ನಿಲ್ದಾಣ, ಬಸ್ಸು ನಿಲ್ದಾಣಗಳಲ್ಲಿ ಸಹಾಯವಾಣಿಯನ್ನು ಜಿಲ್ಲಾಡಳಿತ ಆರಂಭಿಸಿದ್ದು, ಬೆಳಿಗ್ಗೆ ಒಬ್ಬರು ಮಧ್ಯಾಹ್ನ ಮತ್ತೊಬ್ಬ ಸಿಬ್ಬಂದಿ ಸರದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟನ್ನು ಬಿಟ್ಟರೆ ಯಾವುದೇ ರೀತಿ ಕೊರೋನಾ ವೈರಸ್‌ ತಪಾಸಣೆ ಮಾಡುವ ಉಪಕರಣವೂ ಸಹಾಯವಾಣಿ ಸಿಬ್ಬಂದಿ ಬಳಿ ಇಲ್ಲ.

Latest Videos
Follow Us:
Download App:
  • android
  • ios