ದೇಶದಾದ್ಯಂತ ವಿಧಿಸಲಾಗಿರುವ ಜನತಾ ಕರ್ಫ್ಯೂಗೆ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಬೆಂಬಲ ನೀಡಿ, ಪುರಿ ಸಮುದ್ರ ತೀರದಲ್ಲಿ ಸುಂದರವಾದ ಸ್ಯಾಂಡ್ ಆರ್ಟ್ ನಿರ್ಮಿಸಿದ್ದಾರೆ. 

ತಾವು ನಿರ್ಮಿಸಿರುವ ಮರಳು ಶಿಲ್ಪದ ಫೋಟೋ ಟ್ವೀಟ್ ಮಾಡಿರುವ ಸುದರ್ಶನ್ ಪಟ್ನಾಯಕ್ 'ಮನೆಯಲ್ಲಿರಿ, ಸುರಕ್ಷಿತರಾಗಿರಿ. ಮನೆಯಲ್ಲಿದ್ದು ಈ ಮಹಾಮಾರಿಯಿಂದ ನಮ್ಮ ಸಮಾವನ್ನು ಸುರಕ್ಷಿತವಾಗಿಟ್ಟುಕೊಳ್ಳೋಣ' ಎಂದಿದ್ದಾರೆ. 

ಇನ್ನು ಕೊರೋನಾ ವಿರುದ್ಧದ ಸಮರದ ಕುರಿತಾಗಿ ಪಿಎಂ ನರೇಂದ್ರ ಮೋದಿ ಮಾರ್ಚ್ 22 ರಂದು ದೇಶದಾದ್ಯಂತ ಜನತಾ ಕರ್ಫ್ಯೂ ನಡೆಸು ಮನವಿ ಮಾಡಿಕೊಂಡಿದ್ದರು. ಇದರ ಅನ್ವಯ ದೇಶದದಾದ್ಯಂತ ಜನರು ಈ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದಾರೆ.