Asianet Suvarna News Asianet Suvarna News

ವೀರಶೈವರು ಇಲಿ, ಬೆಕ್ಕು, ಅಳಿಲು ತಿನ್ನಲು ಸಾಧ್ಯವೇ?: ಎಚ್‌.ವಿಶ್ವನಾಥ್‌

ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ದಲಿತ ವರ್ಗದ ಹಕ್ಕಿನ ಅನ್ನವನ್ನು ಕಸಿದುಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ?: ವಿಶ್ವನಾಥ್‌ 

Can Veerashaivas Eat Mice, Cats, Squirrels Says H Vishwanath grg
Author
Bengaluru, First Published Aug 10, 2022, 1:45 PM IST

ಕುಕನೂರು(ಆ.10):  ತಾಲೂಕಿನ ಕುದರಿಮೋತಿಯಲ್ಲಿ ಅಲೆಮಾರಿ ಬೇಡ, ಬುಡ್ಗ ಜಂಗಮರ ‘ಕುದರಿಮೋತಿ ಬಿಡಾರು ಆಚಾರಂ ರಾಜ್ಯಮಟ್ಟದ ಸಮಾವೇಶ’ದಲ್ಲಿ ಬೇಡ/ಬುಡ್ಗ ಜಂಗಮ ಅಲೆಮಾರಿ ಸಮುದಾಯದ ಮೀಸಲಾತಿಗೆ ಎದುರಾಗಿರುವ ಅಪಾಯ ಕುರಿತಂತೆ ಪ್ರಸ್ತಾಪಿಸಿದ ಮಾಜಿ ಸಚಿವ, ಹಾಲಿ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಇಂಥದೊಂದು ಪ್ರಶ್ನೆ ಎಸೆದು ಬೇಸರ ವ್ಯಕ್ತಪಡಿಸಿದರು.

ಅಲೆಮಾರಿ, ಬುಡ್ಗ, ಬುಡಗ ಸಮಾಜದವರು ಏನೇನು ತಿನ್ನುತ್ತಾರೆ, ಅವನ್ನೆಲ್ಲಾ ತಿನ್ನಲು ವೀರಶೈವ ಲಿಂಗಾಯತರಿಗೆ ಸಾಧ್ಯವಿದೆಯೇ? ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ದಲಿತ ವರ್ಗದ ಹಕ್ಕಿನ ಅನ್ನವನ್ನು ಕಸಿದುಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಇಲಿ, ಬೆಕ್ಕು, ಆಮೆ, ಅಳಿಲು, ಮಾಂಸ ತಿನ್ನುವ ಬುಡ್ಗ, ಬೇಡ ಜಂಗಮ ಸಮಾಜದವರು ತಾವೇ ಅನ್ನುವ ಮೂಲಕ ವೀರಶೈವ ಲಿಂಗಾಯತರು ಅಲೆಮಾರಿ ಜನಾಂಗದ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ 2ಎ ಪ್ರಮಾಣಪತ್ರಕ್ಕಾಗಿ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಇದು ದ್ವಂದ್ವ ನಿಲುವು ಅಲ್ಲವೇ ಎಂದು ಪ್ರಶ್ನಿಸಿದರು.

ಕೊಪ್ಪಳ: ಬಿಜೆಪಿ ಅಭಿಮಾನಿ ಪುತ್ರಿಗೆ ಸುಷ್ಮಾ ಸ್ವರಾಜ್‌ ಹೆಸರು..!

ಈ ಅಲೆಮಾರಿ ದಲಿತರ ಹಕ್ಕನ್ನು ಕಸಿದುಕೊಳ್ಳುವ ಕಾರ್ಯಕ್ಕೆ ಕೈಹಾಕಿದ ವೀರಶಯವ ಲಿಂಗಾಯತ ಸ್ವಾಮೀಜಿಗಳು ಬಸವೇಶ್ವರರ ವಿರೋಧಿಗಳು. ಬಸವೇಶ್ವರರು ದಲಿತ ಕೇರಿಗೆ ಹೋಗಿ, ಜನರೊಡಗೂಡಿ ಸಾಮೂಹಿಕ ಭೋಜನ ಮಾಡಿದರು. ಅದನ್ನು ಕಂಡು ಜನ ತಮ್ಮ ಚರ್ಮದಿಂದ ಅವರಿಗೆ ಪಾದರಕ್ಷೆ ಮಾಡಿದರು. ಅವುಗಳನ್ನು ಅವರು ಮೆಟ್ಟದೆ ತಲೆ ಮೇಲೆ ಹೊತ್ತುಕೊಂಡರು. ಆದರೆ ಈಗ ದಲಿತರ ಅಭಿವೃದ್ಧಿಗೆ ಇರುವ ಹಕ್ಕು ಕಸಿದುಕೊಳ್ಳುವ ಕಾರ್ಯ ಆಗುತ್ತಿದೆ. ಮೇಲ್ಜಾತಿಯವರು ಕೆಳಜಾತಿಯವರು ತಮ್ಮನ್ನೂ ಸೇವಕರನ್ನಾಗಿಸಿಕೊಂಡಿದ್ದಾರೆ. ಹೊಲಸು ಹೊರಬೇಕೆಂಬ ಭಾವನೆಯಲ್ಲಿದ್ದಾರೆ ಎಂದು ಎಚ್‌.ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸವಿವರಾದ ಕೋಟ ಶ್ರೀನಿವಾರ ಪೂಜಾರಿ, ಹಾಲಪ್ಪ ಆಚಾರ್‌ ಮತ್ತಿತರರು ಇದ್ದರು.
 

Follow Us:
Download App:
  • android
  • ios