ಮೈಸೂರು [ಸೆ.23]: ಸಂಚಾರ ನಿಯಮ ಉಲ್ಲಂಘನೆ ನೆಪದಲ್ಲಿ ಗೂಡ್ಸ್‌ ಚಾಲಕನನ್ನು ತಡೆದು ಟ್ರಾಫಿಕ್ ಪೊಲೀಸ್ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್‌ ಆಗುತ್ತಿದ್ದಂತೆ  ಮೈಸೂರು ಮೂಲದ ಕ್ಯಾಬ್ ಚಾಲಕ ಪೊಲೀಸ್ ಗೆ ಸವಾಲು ಹಾಕಿದ್ದಾನೆ. 

ಕ್ಯಾಬ್ ಚಾಲಕನೋರ್ವ ಸವಾಲು ಹಾಕಿ ವಿಡಿಯೋ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಹಲ್ಲೆ ನಡೆಸಿದ್ದ ಟ್ರಾಫಿಕ್ ಮುಖ್ಯಪೇದೆ ಮತ್ತೆ ತರಬೇತಿಗೆ ವಾಪಸ್!

ಮೈಸೂರು ಮೂಲದ ಕ್ಯಾಬ್‌ ಚಾಲಕ ಸೆಲ್ಫಿ ವಿಡಿಯೋ ಮಾಡಿ ‘ನಮ್ಮ ಚಾಲಕರ ಮೇಲೆ ನೀನು ಕೈ ಮಾಡಿದ್ದಿಯಾ. ನನ್ನ ಬಳಿ ಯಾವುದೇ ದಾಖಲೆಗಳಿಲ್ಲ. ನಾಲ್ಕು ವರ್ಷದ ಹಿಂದೆಯೇ ಎಲ್ಲವೂ ಅವಧಿ ಮುಗಿದಿವೆ. ನಾನು ಇದೇ ಅ.2ರಂದು ಬೆಂಗಳೂರಿಗೆ ಬರುತ್ತಿದ್ದೇನೆ. ತಾಕತ್ತು ಇದ್ದರೆ, ನನ್ನ ಕಾರು ತಡೆಯಿರಿ’ ಎಂದು ತನ್ನ ಕಾರಿನ ನಂಬರ್‌ ವಿಡಿಯೋ ಹಾಕಿದ್ದಾನೆ.